newsfirstkannada.com

Poonam Pandey Death: ಕಪ್ಪು ಬಿಳುಪಿನ.. ಪೂನಂ ಪಾಂಡೆ ಹಾಕಿಕೊಂಡ ಕೊನೆಯ ವಿಡಿಯೋ ಯಾವುದು ಗೊತ್ತಾ?

Share :

Published February 2, 2024 at 12:39pm

Update February 2, 2024 at 12:44pm

    ಬಾಲಿವುಡ್​ ನಟಿ ಪೂನಂ ಪಾಂಡೆ ಸಾವು

    ಗರ್ಭಕಂಠದ ಕ್ಯಾನ್ಸರ್​ ಕೊನೆಯುಸಿರೆಳೆದ ಮಾಡೆಲ್​​

    32ನೇ ವಯಸ್ಸಿಗೆ ಕೊನೆಯುಸಿರೆಳೆದ ‘ನಶಾ’ ನಟಿ

ಬಾಲಿವುಡ್​ ನಟಿ, ಮಾಡೆಲ್​ ಪೂನಂ ಪಾಂಡೆ 32ನೇ ವಯಸ್ಸಿಗೆ ನಿಧನರಾಗಿದ್ದಾರೆ. ಗರ್ಭಕಂಠದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಟಿ ಸಾವನ್ನಪ್ಪಿರುವ ಸುದ್ದಿಯನ್ನು ಆಕೆಯ ಮ್ಯಾನೇಜರ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿದ್ದ ಪೂನಂ ಪಾಂಡೆ ಆಗಾಗ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದರು. ಇನ್​​ಸ್ಟಾಗ್ರಾಂನಲ್ಲಿ ಕಳೆದ ಮೂರು ದಿನಗಳ ಹಿಂದೆ ವಿಡಿಯೋ​ ಹಂಚಿಕೊಂಡಿರುವ ನಟಿ ಅದರಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರು. ಆ ವಿಡಿಯೋಗೆ ‘ಬಿಳಿ ಮತ್ತು ಕಪ್ಪು: ನನ್ನ ಒಳಗೆ ಮತ್ತು ಯವ್ವನದ ಜೀವನವನ್ನು ಸಮತೋಲನಗೊಳಿಸುತ್ತದೆ’ ಎಂದು ಬರೆದಿದ್ದರು. ಆದರೀಗ ನಟಿಯ ಸಾವು ಇದ್ದಕ್ಕಿದ್ದಂತೆಯೇ ಎಲ್ಲರಿಗೆ ಶಾಕ್​ ನೀಡಿದೆ.

ಪೂನಂ ಪಾಂಡೆ ಜನನ​

ಪೂನಂ ಪಾಂಡೆ 11 ಮಾರ್ಚ್​ 1991ರಂದು ಕಾನ್ಸುರದಲ್ಲಿ ಜನಿಸಿದರು. ಶೋಭಾನಾಥ್​ ಪಾಂಡೆ ಮತ್ತು ವಿದ್ಯಾ ಪಾಂಡೆಯ ಮಗಳಾಗಿ ಜನಿಸಿದ ಈಕೆ ಮಾಡೆಲಿಂಗ್​ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಮೃತ ಪೂನಂ ಪಾಂಡೆ ಶ್ರದ್ಧಾ ಪಾಂಡೆ ಮತ್ತು ನಿಲೇಶ್​ ಪಾಂಡೆ ಎಂಬ ಸಹೋದರ, ಸಹೋದರಿಯನ್ನು ಬಿಟ್ಟು ಅಗಲಿದ್ದಾರೆ.

ಬಾಲಿವುಡ್​ ಬಣ್ಣದ ಲೋಕದಲ್ಲಿ ಪೂನಂ ಪಾಂಡೆ

ಪೂನಂ 2013ರಲ್ಲಿ ಬಾಲಿವುಡ್​ ಸಿನಿಮಾ ರಂಗಕ್ಕೆ ಕಾಲಿಟ್ಟರು. ನಶಾ ಸಿನಿಮಾದಲ್ಲಿ ಬಣ್ಣ ಹಚ್ಚು ಮೂಲಕ ಮೊದಲ ಬಾರಿಗೆ ನಟಿಸಿದರು. ಇದಲ್ಲಿ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

View this post on Instagram

A post shared by Poonam Pandey (@poonampandeyreal)

ಪೂನಂ ವೈವಾಹಿಕ ಜೀವನ

ಸೆಪ್ಟೆಂಬರ್​ 1, 2020ರಲ್ಲಿ ಪೂನಂ ಪಾಂಡೆ ತನ್ನ ಗೆಳೆಯ ಸ್ಯಾಮ್​ ಬಾಂಬೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೋವಿಡ್​ ಕಾಲದಲ್ಲಿ ಇಬ್ಬರು ಮದುವೆಯಾದರು. ಆದರೆ ಸೆಪ್ಟೆಂಬರ್​ 11 ರಂದು ಸ್ಯಾಮ್​ ವಿರುದ್ಧ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದಲ್ಲದೆ, ದೂರು ನೀಡಿದರು. ಆದರೀಗ ನಟಿ 32ನೇ ವರ್ಷಕ್ಕೆ ಕೊನೆಯುಸಿರೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Poonam Pandey Death: ಕಪ್ಪು ಬಿಳುಪಿನ.. ಪೂನಂ ಪಾಂಡೆ ಹಾಕಿಕೊಂಡ ಕೊನೆಯ ವಿಡಿಯೋ ಯಾವುದು ಗೊತ್ತಾ?

https://newsfirstlive.com/wp-content/uploads/2024/02/Poonam-Pandey-1-1.jpg

Load More