newsfirstkannada.com

100, 200, 300 ಅಲ್ಲ.. ನೀತಾ ಅಂಬಾನಿ ಧರಿಸಿದ್ದ ನೆಕ್ಲೆಸ್ ಬೆಲೆ ಎಷ್ಟು ಕೋಟಿ ರೂ. ಗೊತ್ತಾ?

Share :

Published March 4, 2024 at 7:48pm

  ಪ್ರೀತಿಯ ಮಗನ ಪ್ರಿ-ವೆಡ್ಡಿಂಗ್​ನಲ್ಲಿ ಮಿರಮಿರ​ ಮಿಂಚಿದ ನೀತಾ ಅಂಬಾನಿ

  ಕ್ಲಾಸಿಕ್​ ಲುಕ್​ ಜತೆ ಸ್ಟೈಲಿಶ್​ ಕಾಸ್ಟ್ಯೂಮ್.. ನೀತಾ ಡಿಸೈನರ್ ಯಾರು?

  ಜಾಮ್‌ನಗರದ ಪ್ರಿ-ವೆಡ್ಡಿಂಗ್‌.. ಮೂರು ದಿನದ ಹೈಲೈಟ್ ಏನೇನು ಗೊತ್ತಾ?

ಜಾಮ್‌ನಗರದಲ್ಲಿ ನಡೆದ ಅಂಬಾನಿ ಪುತ್ರನ ಪ್ರಿ-ವೆಡ್ಡಿಂಗ್ ಸಂಭ್ರಮ ಮುಗಿದಿದೆ. ಅಂಬಾನಿ ಮಗನ ಮದುವೆ ಹಬ್ಬಕ್ಕೆ ದೇಶ-ವಿದೇಶಗಳಿಂದ ಗಣ್ಯರು ಆಗಮಿಸಿದ್ದರು. ಬಾಲಿವುಡ್​ಗೆ ಬಾಲಿವುಡ್ಡೇ ಜಾಮ್​ನಗರದಲ್ಲಿ ಬೀಡು ಬಿಟ್ಟಿತ್ತು. ಈ ಮೂರು ದಿನವೂ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿನೇ ಕೇಂದ್ರಬಿಂದು ಆಗಿದ್ದರು. ಆದರೆ, ಇವರನ್ನ ಮೀರಿ ಟಾಕ್​ ಆಫ್ ಟೌನ್ ಆಗಿದ್ದು ನೀತಾ ಅಂಬಾನಿ ಹಾಗೂ ನೀತಾ ಅಂಬಾನಿಯ ಉಡುಗೆ ತೊಡುಗೆ ಜೊತೆ ಅದೊಂದು ನೆಕ್ಲೆಸ್​.

ಮಾರ್ಚ್ 1ಕ್ಕೆ ಆರಂಭವಾದ ಸಡಗರ ಮಾರ್ಚ್​ 3ರ ರಾತ್ರಿ ಮುಗಿದಿದೆ. ಈ ಮೂರು ದಿನಗಳ ಕಾಲ ದೇಶದ ಬಹುತೇಕ ಸೆಲೆಬ್ರಿಟಿಗಳು ಜಾಮ್​ನಗರದಲ್ಲೇ ವಾಸ್ತವ್ಯ ಹೂಡಿದ್ದರು. ಬರೀ ನಮ್ಮ ದೇಶದ ಸ್ಟಾರ್ಸ್​ ಮಾತ್ರವಲ್ಲ ವಿದೇಶದಿಂದ ಬಂದ ವಿಐಪಿಗಳು ಕೂಡ ಅಂಬಾನಿ ಮಗನ ಮದುವೆ ಹಬ್ಬದಲ್ಲಿ ಬ್ಯುಸಿಯಾಗಿದ್ದರು.

ಮೊದಲೆರಡು ದಿನ ತುಂಬಾ ಅದ್ಧುರಿಯಾಗಿ ನಡೆದಿದ್ದ ಪ್ರಿ-ವೆಡ್ಡಿಂಗ್​ ಉತ್ಸವ ಮೂರನೇ ದಿನನೂ ಅಷ್ಟೇ ಕಲರ್​ಫುಲ್​ ಆಗಿ ನಡೆದಿದೆ. ಮೂರನೇ ದಿನನೂ ಸೆಲೆಬ್ರಿಟಿಗಳೆಲ್ಲಾ ಮಸ್ತ್​ ಮಜಾ ಮಾಡಿದ್ದಾರೆ. ಡ್ಯಾನ್ಸ್, ಪರ್ಫಾಮೆನ್ಸ್, ಟ್ರಡಿಷನ್​ ಅಂತ ಸಖತ್ ಎಂಜಾಯ್ ಮಾಡಿದ್ದಾರೆ. ಮೂರನೇ ದಿನ ಹೈಲೈಟ್​ ಅಂದ್ರೆ ರಾಧಿಕಾ ಮರ್ಚೆಂಟ್​ ಗ್ರ್ಯಾಂಡ್​ ಎಂಟ್ರಿ. ಮಧುಮಗ ಅನಂತ್ ಅಂಬಾನಿ ವೇದಿಕೆಯ ಮಧ್ಯದಲ್ಲಿ ನಿಂತು ತನ್ನ ಮನದರಸಿಯ ಆಗಮನಕ್ಕೆ ಎದುರು ನೋಡ್ತಿರುವ ಸನ್ನಿವೇಶ. ಅನಂತ್ ಹಿಂದೆ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಸೇರಿ ಸುತ್ತಲು ಗಣ್ಯರು ನಿಂತಿರೋದು. ಆಗ ಎದುರುಗಡೆಯಿಂದ ರಾಧಿಕಾ ಮರ್ಚೆಂಟ್​​ ಯುವರಾಣಿಯಂತೆ ಹಾಡುತ್ತಾ, ಕುಣಿಯುತ್ತಾ ಆಗಮಿಸುವುದು. ಈ ಸೀನ್​ ಅತಿ ದೊಡ್ಡ ಸಂಭ್ರಮ ಆಗಿತ್ತು. ಇದೇ ಮೂರನೇ ದಿನ ಮೋಸ್ಟ್​ ಬ್ಯೂಟಿಫುಲ್ ದೃಶ್ಯವಾಗಿತ್ತು.

ಇದನ್ನು ಓದಿ: BREAKING: ಪಾಕ್‌ ಜಿಂದಾಬಾದ್ ಘೋಷಣೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌.. ಪೊಲೀಸರಿಂದ ಮೂವರ ಬಂಧನ

ಕಾಂಚಿಪುರಂ ಸೀರೆಯಲ್ಲಿ ಮಿರ ಮಿರ ಮಿಂಚಿದ ನೀತಾ ಅಂಬಾನಿ!

ಮೂರು ದಿನಗಳ ಪ್ರಿ-ವೆಡ್ಡಿಂಗ್​ನಲ್ಲಿ ಕೇಂದ್ರ ಬಿಂದು ಆಗಿ ಇದ್ದದ್ದೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್. ನೆರದಿದ್ದವರ ಕಣ್ಮನ ಸೆಳೆದಿದ್ದೇ ಈ ಜೋಡಿ. ಈ ಜೋಡಿಯ ಜೊತೆ ಜೊತೆಗೆ ಇವೆಂಟ್​ನ ಪ್ರಮುಖ ಆಕರ್ಷಣೆಯಾಗಿದ್ದು ನೀತಾ ಅಂಬಾನಿ ಅಂದ್ರೆ ಒಪ್ಪಲೇಬೇಕು. ಹೌದು, ಮೊದಲ ದಿನದಿಂದ ಮೂರು ದಿನಗಳವರೆಗೂ ನೀತಾ ಅಂಬಾನಿ ತಮ್ಮ ಕ್ಲಾಸಿಕ್ ಲುಕ್ ಹಾಗೂ ಸ್ಟೈಲಿಶ್​ ಕಾಸ್ಟ್ಯೂಮ್​ಗಳಿಂದ ಅಟ್ರ್ಯಾಕ್ಷನ್ ಆಗಿದ್ದರು. ದೇಶದ ಟಾಪ್ ಮೋಸ್ಟ್​ ಡಿಸೈನರ್​ಗಳು ರೆಡಿ ಮಾಡಿದ್ದ ಸೀರೆ, ಗೌನ್​ಗಳನ್ನ ತೊಟ್ಟು ಮಹಾರಾಣಿಯಲ್ಲಿ ಕಂಗೊಳಿಸಿದ್ದರು. ಅದರಲ್ಲೂ ನೀತಾ ಅಂಬಾನಿ ಮೂರನೇ ದಿನ ಧರಿಸಿದ್ದ ಸೀರೆ ಮತ್ತು ಒಡೆವೆಗಳು ಈಗ ಬಹಳ ಚರ್ಚೆಗೆ ಕಾರಣವಾಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ಡಿಸೈನ್ ಮಾಡಿಸಿದ್ದ ಈ ಸೀರೆ ಹಾಗೂ ನೀತಾ ಧರಿಸಿದ್ದ ದುಬಾರಿ ನೆಕ್ಲೆಸ್​​ ಈಗ ಟಾಕ್ ಆಫ್ ದಿ ಟೌನ್ ಆಗಿದೆ.

ನೀತಾ ಅಂಬಾನಿ ಧರಿಸಿದ್ದ ನೆಕ್ಲೆಸ್​​ ಬೆಲೆ 500 ಕೋಟಿ!

ಮಗನ ಪ್ರಿ-ವೆಡ್ಡಿಂಗ್​​ ಕಾರ್ಯಕ್ರಮದ ಕೊನೆಯ ದಿನ ನೀತಾ ಅಂಬಾನಿ ಕಾಂಚಿಪುರಂ ಸೀರೆಯಲ್ಲಿ ಮಿಂಚಿದ್ದರು. ಬಾಲಿವುಡ್​ನ ಖ್ಯಾತ ಫ್ಯಾಶನ್​ ಡಿಸೈನರ್ ಮನೀಶ್ ಮಲ್ಹೋತ್ರಾ, ನೀತಾ ಅವರಿಗಾಗಿಯೇ ವಿಶೇಷವಾಗಿ ಈ ಸೀರೆನಾ ಡಿಸೈನ್ ಮಾಡಿದ್ದರು. ನೀತಾ ಅವರು ಸ್ವದೇಶಿ ಕರಕುಶಲ ಹಾಗೂ ಕೈ ಮಗ್ಗಗಳ ಮೇಲೆ ಹೆಚ್ಚಿನ ಆಸಕ್ತಿ ಹೊಂದಿರುವ ಕಾರಣ, ಬಹಳ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಈ ಸೀರೆಯಲ್ಲಿ ಅಂಬಾನಿ ಪತ್ನಿ ದೇವತೆಯಂತೆ ಮಿಂಚಿದ್ದರು. ಇದರ ಜೊತೆಗೆ ನೀತಾ ಅಂಬಾನಿಯ ಗೋಲ್ಡನ್ ಕಲರ್​ನ ಈ ಸೀರೆಗೆ ಮತ್ತಷ್ಟು ಮೆರಗು ತಂದಿದ್ದು ಡಬಲ್ ಪೆಂಡೆಂಟ್​ನ ದುಬಾರಿ ನೆಕ್ಲೆಸ್​. ಹೌದು, ಮನೀಶ್​ ಮಲ್ಹೋತ್ರಾ ಡಿಸೈನ್ ಮಾಡಿದ್ದ ಈ ಸೀರೆಗೆ ಹೊಂದುವಂತೆ ನೀತಾ ಅಂಬಾನಿ ಡಬಲ್ ಪೆಂಡೆಂಟ್​ನ ದುಬಾರಿ ನೆಕ್ಲೆಸ್​ ಧರಿಸಿದ್ದರು. ಈ ನೆಕ್ಲೆಸ್​ನ ಬೆಲೆ 400 ರಿಂದ 500 ಕೋಟಿ ಅಂತೆ. ಅದಕ್ಕೆ ಮ್ಯಾಚಿಂಗ್​ ಕಿವಿಯೋಲೆ ಹಾಗೂ ಉಂಗುರಗಳನ್ನ ಸಹ ಅಂಬಾನಿ ಪತ್ನಿ ತೊಟ್ಟಿದ್ದರು. ನೀತಾ ಕೈಯಲ್ಲಿದ್ದ ಧರಿಸಿದ್ದ ಈ ಉಂಗುರದ ಬೆಲೆ ಬರೋಬ್ಬರಿ 40 ಕೋಟಿಯಂತೆ.

ಅಂದ್ಹಾಗೆ, ಮಗನ ಪ್ರಿ ವೆಡ್ಡಿಂಗ್​ ಕಾರ್ಯಕ್ರಮದ ಮೂರನೇ ದಿನ ಮಾತ್ರವಲ್ಲ, ಮೊದಲ ದಿನದಿಂದಲೇ ನೀತಾ ಅಂಬಾನಿ ತುಂಬಾ ಕ್ಲಾಸಿಕ್​ ಲುಕ್​ಗಳಿಂದ ಗಮನ ಸೆಳೆದಿದ್ದರು. ಇಡೀ ಸಂಭ್ರಮದಲ್ಲಿ ಬಹಳ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದರು. ಮೊದಲ ದಿನ ಕಾಕ್​ಟೈಲ್ ಪಾರ್ಟಿಗೆ ಮಾಡ್ರನ್ ಲುಕ್​ನಲ್ಲಿ ಮಿಂಚಿದ್ದ ನೀತಾ ಅಂಬಾನಿ, ಆಮೇಲೆ ಅತಿಥಿಗಳನ್ನ ವೆಲ್​ಕಮ್ ಮಾಡೋದಕ್ಕಾಗಿ ಅಬು ಜಾನಿ ಸಂದೀಪ್​ ಡಿಸೈನ್ ಮಾಡಿದ್ದ ಗಾಗ್ರಾ ಧರಿಸಿದ್ದರು. ಅದಕ್ಕೆ ಮ್ಯಾಚಿಂಗ್ ನೆಕ್ಲೆಸ್ ಹಾಗೂ ಕಿವಿಯೋಲೆಯೂ ಅಷ್ಟೇ ವಿಶೇಷವಾಗಿ ಗಮನ ಸೆಳೆದಿತ್ತು. ಮಗನ ಮದುವೆ ಕಾರ್ಯಕ್ರಮ ಉಸ್ತುವಾರಿ ವಹಿಸಿಕೊಂಡಿದ್ದ ನೀತಾ, ಬರೀ ಆಯೋಜನೆ ಮಾತ್ರವಲ್ಲ, ಪರ್ಫಾಮೆನ್ಸ್​ ಕೊಟ್ಟು ಅಚ್ಚರಿ ಮೂಡಿಸಿದರು. ಅದರಲ್ಲೂ ಹಸ್ತಾಕ್ಷರ ಥೀಮ್​ನಲ್ಲಿ ನಡೆದ ಕೊನೆಯ ದಿನ ನೀತಾ ಕೊಟ್ಟ ಟ್ರಡಿಷ್ನಲ್ ಪರ್ಫಾಮೆನ್ಸ್​, ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಆಗಿದೆ.

ಇನ್ನುಳಿದಂತೆ ಮೂರನೇ ದಿನವೂ ಮಸ್ತ್ ಮಸ್ತ್ ಮನರಂಜನೆ ಕಾರ್ಯಕ್ರಮಗಳು ನಡೆದಿವೆ. ಶ್ರೇಯಾ ಘೋಷಲ್​ ಗಾನ. ದಲ್ಜಿತ್​ ಸಿಂಗ್​​ ಪರ್ಫಾಮೆನ್ಸ್​ ಹೈಲೈಟ್ ಆಗಿತ್ತು. ಶಾರೂಕ್ ಖಾನ್ ಹಾಗೂ ಸಲ್ಮಾನ್ ಖಾನ್ ಚಮ್ಮಕ್ ಚಲ್ಲೋ ವೈರಲ್ ಆಗಿದ್ರೆ, ಗೌರಿ ಖಾನ್ ಜೊತೆ ಶಾರುಖ್ ಹಾಕಿದ ಹೆಜ್ಜೆಯೂ ಸದ್ದು ಮಾಡ್ತಿದೆ. ಒಟ್ಟಾರೆ, ದೇಶದ ಅತಿ ದೊಡ್ಡ ಮದುವೆಯ ಪ್ರಿ-ವೆಡ್ಡಿಂಗ್ ಕಾರ್ಯಕ್ರಮ ಭಾನುವಾರ ಅಂತ್ಯವಾಗಿದೆ. ಅಂಬಾನಿ ಮಗನ ಮದುವೆ ಹಬ್ಬಕ್ಕಾಗಿ ಜಾಮ್​ನಗರಕ್ಕೆ ಬಂದಿದ್ದ ಗಣ್ಯಾತಿಗಣ್ಯರು ಎಲ್ಲಾ ತಮ್ಮ ತಮ್ಮ ಊರು ಹಾಗೂ ದೇಶಗಳಿಗೆ ಹಿಂತಿರುಗಿದ್ದಾರೆ. ಇನ್ನು ಜುಲೈ 12ಕ್ಕೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ಮದುವೆ ಮುಹೂರ್ತ ಇನ್ನೆಷ್ಟು ವೈಭವ ಹಾಗೂ ವಿಶೇಷತೆಗಳಿಂದ ಕೂಡಿರುತ್ತೆ ಅಂದ ಕಾದುನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

100, 200, 300 ಅಲ್ಲ.. ನೀತಾ ಅಂಬಾನಿ ಧರಿಸಿದ್ದ ನೆಕ್ಲೆಸ್ ಬೆಲೆ ಎಷ್ಟು ಕೋಟಿ ರೂ. ಗೊತ್ತಾ?

https://newsfirstlive.com/wp-content/uploads/2024/03/nitha-ambani-1.jpg

Load More