newsfirstkannada.com

ಬಾಲರಾಮನ ಪ್ರತಿಷ್ಠಾಪನೆಗೆ ದಿನಗಣನೆ; ಈ ಐತಿಹಾಸಿಕ ಮೂರ್ತಿಗಳನ್ನೇ ಕೆತ್ತಿಸಲು ಕಾರಣವೇನು..?

Share :

Published January 2, 2024 at 6:08am

    ಮೂರ್ತಿ ಕೆತ್ತಿದ ಕಲ್ಲು ಕನಿಷ್ಠ ಸಾವಿರ ವರ್ಷ ಬಾಳಿಕೆ ಬರಬೇಕು ಅನ್ನೋ ಲೆಕ್ಕಾಚಾರ

    ವಿಜ್ಞಾನಿಗಳು ಆಯ್ಕೆ ಮಾಡಿದ ಮೇಲೆ ಮೂರ್ತಿಯನ್ನು ಕೆತ್ತಿದ್ದ ಅರುಣ್ ಯೋಗಿರಾಜ್!

    ಗರ್ಭಗುಡಿಯಲ್ಲಿ ಆಯ್ಕೆಯಾಗದ ಇನ್ನೆರಡು ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಎಲ್ಲಿ?

ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ರಾಮ್ ಲಲ್ಲಾ ಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದೆ. ಇದಕ್ಕೆ ಮಧ್ಯಾಹ್ನ 12.20ಕ್ಕೆಂದು ಸಮಯ ಕೂಡ ನಿಗದಿ ಮಾಡಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.

ಇದನ್ನು ಓದಿ: ರಾಮನೂರಿಗೆ ಕರುನಾಡಿನ ಮೂರ್ತಿ.. ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್​ಗೆ ಶುಭಾಶಯಗಳ ಮಹಾಪೂರ

ಅಯೋಧ್ಯೆಯಲ್ಲಿ ಇದೇ ಜನವರಿ 22ರಂದು ಭವ್ಯ ರಾಮಮಂದಿರ ಲೋಕಾರ್ಪಣೆಯಾಗುತ್ತಿದೆ. ಐತಿಹಾಸಿಕ ರಾಮ ಮಂದಿರದಲ್ಲಿ ಕರ್ನಾಟಕದ ಶಿಲ್ಪಿ ಕೆತ್ತಿರೋ ರಾಮ ಲಲ್ಲಾ ಮೂರ್ತಿಯನ್ನೇ ಪ್ರತಿಷ್ಠಾಪನೆಯಾಗುತ್ತಿರೋದು ಹೆಮ್ಮೆಯ ವಿಚಾರ. ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗೋಕೆ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವ್ರು ಕೆತ್ತಿರೋ ಮೂರ್ತಿ ಆಯ್ಕೆಯಾಗಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ನರ್ಸರಿಯಿಂದ ಬೋಗನ್‌ವಿಲ್ಲಾ ಹೂವುಗಳನ್ನು ಅಯೋಧ್ಯೆಯ ರಾಮಮಂದಿರದ ಆವರಣವನ್ನು ಅಲಂಕರಿಸಲು ಬಳಸಲಾಗುತ್ತದೆ. ಭೋಪಾಲ್ ಮೂಲದ ನಿಸರ್ಗ್ ನರ್ಸರಿ ಮಾಲೀಕ ರಾಮ್‌ಕುಮಾರ್ ರಾಥೋಡ್ ಅವರು ಹೂವುಗಳಿಗಾಗಿ ಆರ್ಡರ್ ಸ್ವೀಕರಿಸಿದ್ದಾರೆ. ಅವರು ಈಗಾಗಲೇ ಉತ್ತರ ಪ್ರದೇಶದ ಅಯೋಧ್ಯೆಗೆ 10,000 ಹೂವುಗಳ ತಲಾ ಎರಡು ಸರಕುಗಳನ್ನು ರವಾನಿಸಿದ್ದಾರೆ.

ಇನ್ನು, ಅಯೋಧ್ಯೆಯ ಗರ್ಭಗುಡಿಯಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಇದಕ್ಕೆ ಕಾರಣವೂ ಇದೆ. ಹಿಂದೂಗಳು ಬಾಲ ರಾಮನ ಅಥವಾ ರಾಮಲಲ್ಲಾ ಹೆಸರಿನಲ್ಲಿ ಕೋರ್ಟ್​ನಲ್ಲಿ ಕಾನೂನು ಹೋರಾಟ ನಡೆದಿತ್ತು. ಸುಪ್ರೀಂ ಕೋರ್ಟ್​ನಲ್ಲಿ ವಿವಾದಿತ ಜಾಗವನ್ನು ರಾಮಲಲ್ಲಾಗೆ ನೀಡಲಾಗಿತ್ತು. ಹೀಗಾಗಿ ಈಗ ಅಯೋಧ್ಯೆಯ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಅಥವಾ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇನ್ನು ಏಕ ಕಾಲಕ್ಕೆ ಮೂರು ಮೂರ್ತಿಗಳನ್ನು ಕೆತ್ತಿಸಲು ಕೂಡ ಒಂದು ಪ್ರಮುಖವಾದ ಕಾರಣವೂ ಇದೆ. ಆರು ತಿಂಗಳ ಹಿಂದೆ ಮೂರ್ತಿ ಕೆತ್ತನೆ ಶುರು ಮಾಡಲಾಗಿತ್ತು. ಮೂರ್ತಿ ಕೆತ್ತುವ ಶಿಲ್ಪಿ ಅನಾರೋಗ್ಯಕ್ಕೀಡಾದರೇ ಮೂರ್ತಿ ಕೆತ್ತನೆ ಪೂರ್ಣವಾಗಲ್ಲ. ಜನವರಿ 22ರಂದು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಟಾಪನಾ ಕಾರ್ಯ ನಡೆದ ಬಳಿಕ ಜಲಾಭಿಷೇಕ ನಡೆಯಲಿದೆ. ಈ ಅಭಿಷೇಕಕ್ಕೆ ನೇಪಾಳದ 16 ನದಿಗಳ ಪವಿತ್ರ ಜಲವನ್ನ ಸಂಗ್ರಹಿಸಲಾಗಿದೆ.

ಇದನ್ನು ಓದಿ: ಅಯೋಧ್ಯೆಯಿಂದ ಬಂತು ಮಂತ್ರಾಕ್ಷತೆ.. ಮನೆ, ಮನೆಗೂ ಹಂಚುವ ಸಿದ್ಧತೆ ಹೇಗಿದೆ?

ಹೀಗಾಗಿ ದೇಶದ ಮೂವರು ಖ್ಯಾತನಾಮ ಶಿಲ್ಪಿಗಳಿಂದ ಕೆತ್ತಿಸಲು ಟ್ರಸ್ಟ್​ನಿಂದ ತೀರ್ಮಾನ ಮಾಡಲಾಗಿತ್ತು. ಈಗ ಬಹುಮತದ ತತ್ವದ ಮೇಲೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೂರ್ತಿ ಕೆತ್ತಿಸುವ ಆಯ್ಕೆ ಮಾಡಲಾಗಿತ್ತು. ಟ್ರಸ್ಟ್ ಅಧ್ಯಕ್ಷರು, ಸದಸ್ಯರು ಮೂರು ಮೂರ್ತಿಗಳಿಗೆ ಆದ್ಯತೆಯ ಮೇಲೆ ವೋಟ್ ಮೂಲಕ ಆಯ್ಕೆ ಮಾಡಿದ್ದರು. ಮೊನ್ನೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಅಯೋಧ್ಯೆಗೆ ಹೋಗಿ ಮೂರ್ತಿ ಆಯ್ಕೆಗೆ ವೋಟಿಂಗ್ ಮಾಡಿದ್ದರು.

ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾಗಿದ್ದಾರೆ. ರಾಮಚರಿತ ಮಾನಸ, ವಾಲ್ಮೀಕಿ ರಾಮಾಯಣದಲ್ಲಿ ಚಿತ್ರಿತವಾಗಿರುವ ಬಾಲಕ ರಾಮನ ಮೂರ್ತಿ‌ ಕೆತ್ತನೆ ಮಾಡಲಾಗಿದೆ. ಮೂರ್ತಿಯ ಕಲ್ಲು ಕನಿಷ್ಠ ಒಂದು ಸಾವಿರ ವರ್ಷ ಬಾಳಿಕೆ ಬರಬೇಕು ಎಂಬ ಲೆಕ್ಕಾಚಾರದಿಂದ ಕೆತ್ತನೆ ಮಾಡಲಾಗಿದೆ. ಅಯೋಧ್ಯೆಯ ರಾಮಮಂದಿರವನ್ನೇ ಒಂದು ಸಾವಿರ ವರ್ಷ ಬಾಳಿಕೆ ಬರುವಂತೆ ಕಲ್ಲಿನಿಂದ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಮೂರ್ತಿಯ ಕಲ್ಲು ವಿಜ್ಞಾನಿಗಳಿಂದ ಪರಿಶೀಲನೆ ನಡೆಸಿ ಅವರು ಆಯ್ಕೆ ಮಾಡಿದ ಕಲ್ಲು ಅನ್ನು ಕೆತ್ತಿಸಲಾಗಿದೆ. ವಿಶೇಷ ಎಂದರೆ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವ್ರು ಕೆತ್ತಿರೋ ಮೂರ್ತಿ ಆಯ್ಕೆಯಾಗಿದೆ.

ಒಂದು ರಾಮಲಲ್ಲಾ ಮೂರ್ತಿ ಮಾತ್ರ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗದ ಇನ್ನೆರಡು ಮೂರ್ತಿಗಳನ್ನು ಮಂದಿರದ ಆವರಣದಲ್ಲಿ ಗೌರವ, ಸನ್ಮಾನಪೂರ್ವಕವಾಗಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಆದರೇ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕೃತವಾಗಿ ಯಾವ ಮೂರ್ತಿ ಆಯ್ಕೆಯಾಗಿದೆ ಎಂದು ಇನ್ನೂ ಘೋಷಿಸಿಲ್ಲ. ಬಾಲಕ ರಾಮನ ಕೈಯಲ್ಲಿ ಬಾಣ ಮಾತ್ರ ಇದೆ. ಚಂದ್ರನಂತೆ ಹೊಳೆಯುತ್ತಿರುವ ರಾಮನ ಮುಖ ಇರಬೇಕು. ನಗುಮುಖದ ಬಾಲ ರಾಮನ ಮೂರ್ತಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತೆ ಎಂದಿದ್ದೆ. ಹೀಗಾಗಿ ತಾವು ಮೆಚ್ಚಿ ಆಯ್ಕೆ ಮಾಡಿದ್ದ ಮೂರ್ತಿಗೆ ಹೆಚ್ಚಿನ ‌ಮತಗಳು ಬಂದಿವೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ‌ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲರಾಮನ ಪ್ರತಿಷ್ಠಾಪನೆಗೆ ದಿನಗಣನೆ; ಈ ಐತಿಹಾಸಿಕ ಮೂರ್ತಿಗಳನ್ನೇ ಕೆತ್ತಿಸಲು ಕಾರಣವೇನು..?

https://newsfirstlive.com/wp-content/uploads/2024/01/ramamadira-2.jpg

Load More