BBK11: ಮಂಜಣ್ಣ ಮದ್ವೆಯಾಗೋ ಹುಡುಗಿ ಹೇಗಿರಬೇಕು ಗೊತ್ತಾ? ಇಲ್ಲಿದೆ ಗೆಳತಿ ಗೌತಮಿ ಟಿಪ್ಸ್

author-image
Veena Gangani
Updated On
BBK11: ಮಂಜಣ್ಣ ಮದ್ವೆಯಾಗೋ ಹುಡುಗಿ ಹೇಗಿರಬೇಕು ಗೊತ್ತಾ? ಇಲ್ಲಿದೆ ಗೆಳತಿ ಗೌತಮಿ ಟಿಪ್ಸ್
Advertisment
  • ಶೋ ಶುರುವಿನಿಂದ ಗೌತಮಿ ಜೊತೆಗೆ ಮಂಜು ಗೆಳೆತನ
  • 13ನೇ ವಾರಕ್ಕೆ ಕಾಲಿಟಿದೆ ಬಿಗ್​ಬಾಸ್​ ಸೀಸನ್ 11
  • ಬ್ಯಾಚುಲರ್ ಮಂಜಣ್ಣ ಹುಡುಗಿ ಇರಬೇಕಂತೆ ನೋಡಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 13ನೇ ವಾರಕ್ಕೆ ಕಾಲಿಟ್ಟು ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಲ್ಲಿ ಬ್ಯಾಚುಲರ್ ಮಂಜಣ್ಣನಿಗೆ ಹುಡುಗಿ ಹೇಗೆ ಇರಬೇಕು ಅಂತ ಚಿತ್ರವೊಂದನ್ನು ಬಿಡಿಸಿದ್ದಾರೆ.

ಇದನ್ನೂ ಓದಿ: BBK11: ಬಿಗ್ ಬಾಸ್ ಮನೆಯ ವಿಲನ್ ಮಂಜು ಡೈಲಾಗ್‌; ತ್ರಿವಿಕ್ರಮ್‌ಗೆ ಗುರಾಯಿಸಿದ ಧನರಾಜ್‌!

ಬಿಗ್​ಬಾಸ್​ ಶುರುವಾದಾಗಿನಿಂದ ಈ ಇಬ್ಬರು ಇಲ್ಲಿಯವರೆಗೂ ಜೋಡಿಯಾಗೇ ಇದ್ದರು. ಬಿಗ್​ಬಾಸ್ ಮನೆಯಲ್ಲಿ ಮಂಜು ಹಾಗೂ ಗೌತಮಿ ಜಾಧವ್​ ಗೆಳತನದ ಎಂತದ್ದು ಎಂದು ಎಲ್ಲರಿಗೂ ಗೊತ್ತೇ ಇದೆ. ಗೆಳತಿ ಗೆಳತಿ ಎನ್ನುತ್ತಲೇ ಗೌತಮಿಗೆ ಸಪೋರ್ಟ್​ ಮಾಡಿಕೊಂಡು ಬರುತ್ತಿದ್ದ ಮಂಜು ಮದುವೆಯಾಗುವ ಹುಡುಗಿ ಹೇಗೆ ಇರುತ್ತಾರೆ ಅಂತ ಚಿತ್ರವನ್ನು ಬಿಡಿಸಿ ಬಿಗ್​ಬಾಸ್​ಗೆ ತೋರಿಸಿದ್ದಾರೆ.

publive-image

ಇದಾದ ಬಳಿಕ ಮೋಕ್ಷಿತಾ ಕೂಡ ಬಂದು ಮಂಜಣ್ಣ ಮದುವೆಯಾಗುವ ಹುಡಗಿಗೆ ದೊಡ್ಡ ಕಣ್ಣುಗಳು ಇರಬೇಕು, ಉದ್ದ ಮೂಗು ಇರಬೇಕು, ಮಿನಿನ ಹಾಗೇ ತುಟಿ ಇರಬೇಕು ಅಂತ ವರ್ಣನೆ ಮಾಡಿದ್ದಾರೆ. ಇದನ್ನು ಕೇಳಿಸಿಕೊಳ್ಳುತ್ತಿದ್ದಂತೆ ಮಂಜಣ್ಣ ನಾಚಿ ನೀರಾಗಿದ್ದಾರೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 10 ಮಂದಿ ಉಳಿದುಕೊಂಡಿದ್ದಾರೆ. ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿದ್ದಂತೆ ಸ್ಪರ್ಧಿಗಳು ಫುಲ್​ ಅಲರ್ಟ್​ ಆಗಿ ಟಾಸ್ಕ್​ನಲ್ಲಿ ಭಾಗವಹಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment