ನಿಮ್ಮನ್ನು ಮರೆಯಲು ಸಾಧ್ಯವಿಲ್ಲ.. ಸಾವಿಗೂ ಮುನ್ನ ಪವಿತ್ರಾ ಬಗ್ಗೆ ನಟ ಚಂದು ಏನೆಂದು ಬರೆದುಕೊಂಡಿದ್ರು ಗೊತ್ತಾ?

author-image
AS Harshith
Updated On
ನಿಮ್ಮನ್ನು ಮರೆಯಲು ಸಾಧ್ಯವಿಲ್ಲ.. ಸಾವಿಗೂ ಮುನ್ನ ಪವಿತ್ರಾ ಬಗ್ಗೆ ನಟ ಚಂದು ಏನೆಂದು ಬರೆದುಕೊಂಡಿದ್ರು ಗೊತ್ತಾ?
Advertisment
  • ಪವಿತ್ರಾ ಜಯರಾಂ ಹುಟ್ಟುಹಬ್ಬದಂದೇ ನಟ ಸಾವನ್ನಪ್ಪಿದರೇ
  • ಪವಿತ್ರಾಗಾಗಿ ಇತ್ತು ಕೊನೆಯ ಪೋಸ್ಟ್.. ಅದರಲ್ಲೇನಿತ್ತು?
  • ಗೆಳತಿ ನೆನಪಿನಲ್ಲೇ ಇಹಲೋಕ ತ್ಯಜಿಸಿದ ನಟ ಚಂದು

ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕು ಮುಗಿಸಿದ್ದಾರೆ. ಗೆಳತಿ ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ ನೊಂದು-ಬೆಂದು ಹೋಗಿದ್ದ ಚಂದು ತಮ್ಮ ಮನೆಯಲ್ಲೇ ಸುಸೈಡ್​ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೂ ಮುನ್ನ ಚಂದು ಗೆಳತಿಗಾಗಿ ಏನು ಗೀಚಿದ್ರು ಗೊತ್ತಾ?

ಪವಿತ್ರಾ ಜಯರಾಂ ಸಾವಿನ ಬಳಿಕ ಆಕೆಯ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣದತ್ತ ಬರುತ್ತೇನೆ ಎಂದು ನಟ ಚಂದು ಹೇಳಿಕೊಂಡಿದ್ರು. ಅದರಂತೆಯೇ ನಿನ್ನೆ ನಟ ಪವಿತ್ರಾ ಹುಟ್ಟುಹಬ್ಬದ ಪೋಸ್ಟ್​ ಹಾಕಿಕೊಂಡಿದ್ದಾರಂತೆ. ಆಕೆಯ ಶುಭಾಶಯ ತಿಳಿಸಿದ್ದಾರಂತೆ. ಜೊತೆಗೆ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ. ನಮ್ಮ ಜಿಮ್​ ಕೋಚ್​ ಕರೆ ಮಾಡುತ್ತಿದ್ದಾರೆ. ಜಿಮ್​ಗೆ ಹೋಗೋಣ ಎಂದು ಪೋಸ್ಟ್​ ಹಂಚಿಕೊಂಡ ನಟ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

publive-image

ನಟಿ ಪವಿತ್ರಾ ಸಾವನ್ನಪ್ಪಿದ್ದು ಹೇಗೆ?

ಪವಿತ್ರಾ ಜಯರಾಂ ಮತ್ತು ಚಂದು ಬೆಂಗಳೂರಿಗೆ ಕಾರಿನಲ್ಲಿ ತೆರಳುವಾಗ ಅವರ ಕಾರು ಅಪಘಾತವಾಗಿತ್ತು. ಚಂದು ಕಣ್ಣೇದುರೇ ಪವಿತ್ರ ಸಾವನ್ನಪ್ಪಿದ್ದರು. ಇದನ್ನು ಕಂಡು ಚಂದು ಬೆಚ್ಚಿಬಿದ್ದಿದ್ದರು.

publive-image

ಇದನ್ನೂ ಓದಿ: ಪವಿತ್ರಾ ಹುಟ್ಟುಹಬ್ಬದಂದೇ ಆತ್ಮಹತ್ಯೆ ಮಾಡಿಕೊಂಡ ನಟ ಚಂದು; ಗೆಳತಿಯ ನೆನಪಲ್ಲೇ ಇಂಥಾ ನಿರ್ಧಾರ ತೆಗೆದುಕೊಂಡ್ರಾ

ಮೊದಲೊಂದು ಮದುವೆ, ಇಬ್ಬರು ಮಕ್ಕಳು

ಕಿರುತೆರೆ ನಟ ಚಂದು 2015ರಲ್ಲಿ ಶಿಲ್ಪಾ ಎಂಬ ಯುವತಿಯನ್ನು ಮದುವೆಯಾಗಿದ್ದರು. ನಟನಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಪವಿತ್ರಾ ಜಯರಾಂ ಪರಿಚಯದ ಬಳಿಕ ಶಿಲ್ಪಾ ಜೊತೆಗೆ ದೂರ ಉಳಿದರು. ಆ ಬಳಿಕ ಪವಿತ್ರಾ ಜಯರಾಂ ಮತ್ತು ಚಂದು ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗುತ್ತಿದೆ. ಪವಿತ್ರಾ ಸಾವನ್ನು ಅರಗಿಸಿಕೊಳ್ಳಲಾಗದೆ ಚಂದು ತನ್ನ ಮಣಿಕೊಂಡದಲ್ಲಿರುವ ಫ್ಲಾಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ತ ಪವಿತ್ರಾಗೂ ಕೂಡ ಮದುವೆಯಾಗಿ ಬಳಿಕ ಮೊದಲ ಪತಿಯಿಂದ ದೂರವಾಗಿದ್ದರು. ಆ ಬಳಿಕ ಚಂದು ಜೊತೆ ಸ್ನೇಹ ಬೆಳೆಸಿದರು.

publive-image

ಇದನ್ನೂ ಓದಿ: ಮೊದಲೊಂದು ಮದುವೆ, 2 ಮಕ್ಕಳು.. ಆದ್ರೂ ಸೀರಿಯಲ್​ ಗೆಳತಿ ನೆನಪಿನಲ್ಲೇ ನಟ ಚಂದು ಆತ್ಮಹತ್ಯೆ ಮಾಡಿಕೊಂಡ್ರಾ?

ತನಿಖೆ ಮುಂದುವರೆದಿದೆ

ಚಂದು ರಾಧಮ್ಮ ಪೆಳ್ಳಿ ಮತ್ತು ಕಾರ್ತಿಕ ದೀಪಂ ಧಾರವಾಹಿಗಳಲ್ಲಿ ನಟಿಸುತ್ತಿದ್ದರು. ಇದೀಗ ಚಂದು ಆತ್ಮಹತ್ಯೆ ಅವರ ಮನೆಯವರನ್ನು ಕಣ್ಣೀರ ಕಡಲಿನಲ್ಲಿ ತೇಲುವಂತೆ ಮಾಡಿದೆ. ಸದ್ಯ ಪೊಲೀಸರು ಚಂದು ಆತ್ಮಹತ್ಯೆ ಕುರಿತು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment