/newsfirstlive-kannada/media/post_attachments/wp-content/uploads/2025/04/PANIPURI-4.jpg)
ಭಾರತದಲ್ಲಿ ಅತ್ಯಂತ ಮೆಚ್ಚಿನ ಸ್ಟ್ರೀಟ್ ಫುಡ್ ಎಂದು ಹೆಸರು ಪಡೆದಿದ್ದು ಪಾನಿಪುರಿ. ಬೀದಿ ಬದಿಯಲ್ಲಿ ಸಿಗುವ ಈ ತಿಂಡಿಗೆ ಫಿದಾ ಆಗದವರೇ ಇಲ್ಲ. ಇದರ ಬಗ್ಗೆ ನೂರೆಂಟು ಮೀಮ್ಸ್ ಬಂದರೂ, ಟ್ರೋಲ್ ಆದರೂ ಕೂಡ ಭಾರತೀಯರು ಎಂದಿಗೂ ಕೂಡ ಪಾನಿಪುರಿಯನ್ನು ಬಿಟ್ಟು ಕೊಟ್ಟಿಲ್ಲ. ಈ ಪಾನಿಪುರಿಯನ್ನೇ ಮಾರಿ ಕೋಟಿಗಟ್ಟಲೇ ಗಳಿಸಿದವರು. ಜಿಎಸ್ಟಿಯಿಂದ ನೋಟಿಸ್ ಪಡೆದ ವ್ಯಾಪಾರಿಗಳು ಕೂಡ ಇದ್ದಾರೆ. ಪಾನಿಪುರಿ ನಮ್ಮ ದೇಶದಲ್ಲಿ ಇಷ್ಟೊಂದು ಪ್ರಸಿದ್ಧಿ ಪಡೆಯಲು ಕಾರಣದ ಅದರ ಸ್ವಾದ ಮತ್ತು ರುಚಿ. ತಿಂದಷ್ಟು ಇನ್ನಷ್ಟು ತಿನ್ನಬೇಕು ಎಂಬ ಆಸೆ ಹುಟ್ಟಿಸುವ ರುಚಿ ಪಾನಿಪುರಿಯಲ್ಲಿದೆ. ಆದರೆ ನಿಮಗೆ ಗೊತ್ತಾ ಪಾನಿಪುರಿ ಇಂದು ನಿನ್ನೆ ಈ ದೇಶಕ್ಕೆ ಪರಿಚಯವಾಗಿದ್ದಲ್ಲ. ಇದಕ್ಕೆ ಶತಮಾನಗಳ ಇತಿಹಾಸವಿದೆ. ಇದು ಮೂಲತಃ ಎಲ್ಲಿಂದ ಬಂದಿದ್ದು ಅಂತ ಗೊತ್ತಾ?
ಪಾನಿಪುರಿ ಬೇರೆ ಯಾವುದೇ ದೇಶದಿಂದಲೂ ಭಾರತಕ್ಕೆ ಬಂದ ತಿಂಡಿಯಲ್ಲ. ಇದು ಮೂಲತಃ ಭಾರತದ್ದೇ.ಇದನ್ನು ಭಾರತೀಯ ಅತ್ಯಂತ ಪ್ರಾಚೀನ ಆಹಾರಗಳಲ್ಲಿ ಪಾನಿಪುರಿ ಕೂಡ ಒಂದು. ಕ್ರಿಸ್ತಪೂರ್ವ 600ನೇ ಇಸ್ವಿಯಲ್ಲಿಯೇ ಇದು ಭಾರತೀಯರ ನೆಚ್ಚಿನ ತಿಂಡಿಯಾಗಿ ಪರಿಚಯಗೊಂಡಿದ್ದು. ಈ ತಲೆಮಾರಿನವರೆಗೂ ಅದರ ರುಚಿಯನ್ನು ಹಾಗೂ ಜನಪ್ರಿಯತೆಯನ್ನು ಕಾಪಾಡಿಕೊಂಡು ಬಂದಿದೆ.
ಅಂದಿನ ಮಗಧ ಅಂದ್ರೆ ಇಂದಿನ ಬಿಹಾರದಲ್ಲಿ ಪಾನಿಪುರಿ ಮೊದಲು ಪರಿಚಯವಾಗಿದ್ದು. ಅದು ಕೂಡ ಕ್ರಿಸ್ತಶತಕ ಪೂರ್ವ 600ರಲ್ಲಿ ಬೆಳಕಿಗೆ ಬಂತು. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈ ತಿಂಡಿಯನ್ನು ಪಾನಿಪುರಿ ಎಂದು ಕರೆದರೆ, ಉತ್ತರ ಭಾರತದಲ್ಲಿ ಇದನ್ನು ಗೋಲಗಪ್ಪಾ ಎಂದು ಕರೆಯುತ್ತಾರೆ. ಆದರೆ ಪ್ರತಿಯೊಂದು ರಾಜ್ಯದಲ್ಲಿಯೂ ಕೂಡ ಪಾನಿಪುರಿ ಮಾಡುವ ವಿಧಾನ ಮತ್ತು ಸ್ವಾದ ಬೇರೆಯದ್ದೇ ಆಗಿರುತ್ತೆ. ಪಾನಿ ಬದಲಾದರು ಪೂರಿ ಮಾತ್ರ ಒಂದೇ ರೀತಿಯಲ್ಲಿ ಇರುತ್ತದೆ.
ಇದನ್ನೂ ಓದಿ: ಇವು ಭಾರತದ ಮೂಲವಲ್ಲದ ಭಾರತೀಯರೇ ಇಷ್ಟಪಟ್ಟು ಸೇವಿಸುವ ಖಾದ್ಯಗಳು! ಯಾವುವು ಗೊತ್ತಾ?
ಖಾರ, ಖಾರದ ನೀರಿನಲ್ಲಿ ಕ್ರಿಸ್ಪಿಯಾಗಿರುವ ಪುರಿಯನ್ನು ಮುಳುಗಿಸಿ ತೆಗೆದು ತಟ್ಟೆಯ ಮೇಲೆ ಹಾಕುವ ವಿಧಾನವೇ ಒಂದು ವಿಶೇಷ. ಹೀಗೆ ಸ್ಪೈಸಿ ಟೇಸ್ಟ್ ಇರುವ ಈ ತಿಂಡಿಯನ್ನು ಎಷ್ಟು ತಿಂದರೂ ಕೂಡ ಸಮಾಧಾನ ಎನಿಸುವುದಿಲ್ಲ ಕಾರಣ ಇದಕ್ಕೆ ಇದರದೇ ಆದ ಒಂದು ಟೇಸ್ಟ್ ಇದೆ.
ಪಾನಿಪುರಿ ಮೊದಲು ಮನೆಗಳಲ್ಲಿ ಹಲವು ಸಂದರ್ಭಗಳಲ್ಲಿ ತಯಾರಿಸುವಂತಹ ತಿಂಡಿಯಾಗಿತ್ತು. ಆದ್ರೆ ಇದು ಸ್ಟ್ರೀಟ್ ಫುಡ್ ಆಗಿ ಜನಪ್ರಿಯತೆ ಪಡೆದಿದ್ದು 19 ಮತ್ತು 20ನೇ ಶತಮಾನದಲ್ಲಿ. ಬೀದಿ ಬದಿಯಲ್ಲಿ ವ್ಯಾಪಾರಿಗಳು ಪಾನಿಪುರಿಯ ಗೂಡಂಗಡಿಗಳನ್ನು ತೆರೆದು ಮಾರಲು ಶುರು ಮಾಡಿದ್ದು ಇದೇ ಕಾಲದಲ್ಲಿ. ಸದ್ಯ ಈಗ ಇದು ಭಾರತದಲ್ಲಿಯೇ ಅತ್ಯಂತ ಜನಪ್ರಿಯತೆ ಪಡೆದ ಸ್ಟ್ರೀಟ್ಫುಡ್.
ಇದನ್ನೂ ಓದಿ:ವಿಶ್ವದ ರೊಮ್ಯಾಂಟಿಕ್ ಫ್ರೂಟ್.. ಪ್ರಣಯಕ್ಕೆ ಸೂಕ್ತವಾದ ಹಣ್ಣು ಎಂದು ಗುರುತಿಸುವುದು ಯಾವುದನ್ನ ಗೊತ್ತಾ?
ಆಧುನಿಕ ಕಾಲದಲ್ಲಿ ಇದನ್ನು ಮೊಟ್ಟ ಮೊದಲ ಬಾರಿಗೆ ತಯಾರಿಸಿದ್ದು ರಾಯಲ್ ಕಿಚನ್ ಎಂದು ಇಂದಿಗೂ ಕೂಡ ಹೇಳಲಾಗುತ್ತದೆ. ರಾಯಲ್ ಕಿಚನ್ನಲ್ಲಿ ತಯಾರಾದ ಈ ಒಂದು ತಿಂಡಿ ಈಗ ಬೀದಿ ಬದಿಯಲ್ಲಿ ಅತಿಹೆಚ್ಚು ವ್ಯಾಪಾರವಾಗುವ ತಿಂಡಿಯಾಗಿ ಬೆಳೆದು ನಿಂತ ಪರಿಯೇ ಅಚ್ಚರಿಯನ್ನು ಮೂಡಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ