/newsfirstlive-kannada/media/post_attachments/wp-content/uploads/2025/07/MYS-DOCTOR-3.jpg)
ಮೈಸೂರು: ಮದುವೆಯಾದ ಎರಡೇ ತಿಂಗಳಿಗೆ ವರದಕ್ಷಿಣೆ ತರಲಿಲ್ಲ ಅಂತಾ ಗರ್ಭಪಾತ ಮಾಡಿಸಿರುವ ಆರೋಪ ಕೇಳಿಬಂದಿದೆ. ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಗಳ ಮೇಲೆ ಎಫ್​ಐಆರ್ ಆಗಿದೆ.
ಏನಿದು ಕೇಸ್​..?
ವೈದ್ಯರಿಂದ ವೈದ್ಯೆಗೆ ಗರ್ಭಾಪಾತ ಮಾಡಿಸಿರುವ ಪ್ರಕರಣ ಇದು. ಇಲ್ಲಿ ನವ್ಯಾ ಅನ್ನೋ ವೈದ್ಯೆ ಮೋಸ ಹೋಗಿದ್ದಾರೆ. ನವ್ಯಾ, ಕೆ.ಆರ್.ಪೇಟೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯೆಯಾಗಿ ಕೆಲಸ ಮಾಡ್ತಿದ್ದರು. ಕೆ.ಆರ್.ನಗರದ ನಿವಾಸಿ ಮಹದೇವ ತಮ್ಮ ಮಗಳಾದ ನವ್ಯಾರನ್ನು ಎರಡು ತಿಂಗಳ ಹಿಂದೆ ಬರೋಬ್ಬರಿ 80 ಲಕ್ಷ ರೂಪಾಯಿ ಖರ್ಚು ಮಾಡಿ ಬಿಳಿಕೆರೆಯ ನಿವಾಸಿ ಚಿನ್ನದ ವ್ಯಾಪಾರಿ ಗೋವಿಂದರಾಜು ಪುತ್ರ ಅಭಿಷೇಕ್​​ಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಎರಡು ತಿಂಗಳಲ್ಲೇ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಅಲ್ಲದೇ, ಅಬಾರ್ಷನ್ ಕೂಡ ಮಾಡಿಸಿದ್ದಾರೆ ಎಂಬ ಆರೋಪ ಇದೆ.
ಇದನ್ನೂ ಓದಿ: ಅಕ್ಷಯ್ ಕುಟುಂಬದಲ್ಲಿ ಮತ್ತೊಂದು ಆಘಾತ.. ಮಗನ ನೆನಪಲ್ಲೇ ಕೊನೆಯುಸಿರೆಳೆದ ತಂದೆ
/newsfirstlive-kannada/media/post_attachments/wp-content/uploads/2025/07/MYS-DOCTOR-4.jpg)
ಯಾರೆಲ್ಲ ವಿರುದ್ಧ ಆರೋಪ..?
ಮಹದೇವ್ ಮಾಡಿರುವ ಆರೋಪ ಪ್ರಕಾರ.. ನನ್ನ ಮಗಳಿಗೆ ಅಳಿಯ, ಅತ್ತೆ, ಮಾವ ಸೇರಿ ಅಬಾರ್ಷನ್ ಮಾಡಿಸಿದ್ದಾರೆ. ಮಗಳು ಬಿಎಎಂಎಸ್ (BAMS: Bachelor of Ayurvedic Medicine and Surgery) ವ್ಯಾಸಂಗ ಮಾಡಿ ವೈದ್ಯೆ ಆಗಿದ್ದಳು. ಮದುವೆಗೂ ಮುನ್ನ ಅಳಿಯ ಮಗಳನ್ನು ಚಿನ್ನದಂತೆ ನೋಡಿಕೊಳ್ತೀನಿ ಎಂದಿದ್ದ. ಖುಷಿಯಲ್ಲಿ ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಟ್ವಿ. ಮಗಳನ್ನು ಒಂದು ದಿನವೂ ಚೆನ್ನಾಗಿ ನೋಡಿಕೊಂಡಿಲ್ಲ. ತಿರುಪತಿಗೆ ಹೋಗೋಣ ಎಂದು ಗೊತ್ತಾಗದೇ ಗರ್ಭಪಾತ ಮಾಡಿಸಿದ್ದಾರೆ. ಖಾಸಗಿ ಆಸ್ಪತ್ರೆ ವೈದ್ಯೆ ಲತಾ ಅನ್ನೋರು ಈ ಕೆಲಸ ಮಾಡಿದ್ದಾರೆ. ನನ್ನ ಅಳಿಯನ ವಿರುದ್ಧ ಕಾನೂನು ಕ್ರಮ ಆಗಬೇಕು. ನನ್ನ ಮಗಳಿಗೆ ನ್ಯಾಯ ಸಿಗಬೇಕು ಎಂದು ನವ್ಯಾಳ ತಂದೆ-ತಾಯಿ ಕಣ್ಣೀರಿಟ್ಟಿದ್ದಾರೆ.
ಯಾರೆಲ್ಲ ವಿರುದ್ಧ ಎಫ್​ಐಆರ್..?
ಖಾಸಗಿ ಆಸ್ಪತ್ರೆ ವೈದ್ಯೆ, ಆಸ್ಪತ್ರೆ ಎಂಡಿ ಸೇರಿ 5 ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನವ್ಯಾಳ ಗಂಡ ಅಭಿಷೇಕ್, ಮಾವ ಗೋವಿಂದರಾಜ್, ಅತ್ತೆ ಲತಾ, ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಜ್ಞಾನಶೇಖರ್, ವೈದ್ಯೆ ಲತಾ ಸೇರಿ ಐವರ ಮೇಲೆ ಎಫ್​ಐಆರ್ ದಾಖಲಾಗಿದೆ.
ಇದನ್ನೂ ಓದಿ: ಅಮೃತಧಾರೆ ಸೀರಿಯಲ್​ ನಟಿಗೆ ಚಾಕು ಇರಿತ.. ಬೆಂಗಳೂರಲ್ಲಿ ಪತಿಯಿಂದಲೇ ಬರ್ಬರ ಕೃತ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us