ನದಿಗೆ ಹಾರುವ ಕೆಲವೇ ಗಂಟೆಗಳ ಹಿಂದೆ ತಾಯಿಗೆ ಕರೆ.. ವೈದ್ಯೆ ಫೋನ್​ನಲ್ಲಿ ಅಮ್ಮನಿಗೆ ಹೇಳಿದ್ದೇನು..?

author-image
Ganesh
Updated On
ನದಿಗೆ ಹಾರುವ ಕೆಲವೇ ಗಂಟೆಗಳ ಹಿಂದೆ ತಾಯಿಗೆ ಕರೆ.. ವೈದ್ಯೆ ಫೋನ್​ನಲ್ಲಿ ಅಮ್ಮನಿಗೆ ಹೇಳಿದ್ದೇನು..?
Advertisment
  • ಹೈದರಾಬಾದ್​ ವೈದ್ಯ ತುಂಗಭದ್ರಾ ನದಿ ಪಾಲು
  • ಗಂಗಾವತಿಯ ಸಾಣಾಪುರ ಬಳಿ ದುರ್ಘಟನೆ
  • ಶ್ರೀರಾಮನ ಜಪ ಮಾಡಿದ್ದ ವೈದ್ಯೆ ಅನನ್ಯ ರಾವ್

ಹೈದರಾಬಾದ್​ನ​ ಪ್ರತಿಷ್ಠಿತ ವಿಕೆಸಿ ಆಸ್ಪತ್ರೆಯ ವೈದ್ಯೆ ಅನನ್ಯ ರಾವ್ ರೀಲ್ಸ್ ಮಾಡುತ್ತ ತುಂಗಭದ್ರಾ ನದಿಗೆ ಹಾರಿ ಆಪತ್ತಿಗೆ ಸಿಲುಕಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಬಳಿಯಿರುವ ನಿಷೇಧಿತ ತುಂಗಾಭದ್ರ ನದಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸದ್ಯ ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ.

ಇದನ್ನೂ ಓದಿ: ರೀಲ್ಸ್ ಮಾಡುತ್ತ ನದಿಗೆ ಹಾರಿದ ವೈದ್ಯೆಯ ಸುಳಿವು ಇನ್ನೂ ಇಲ್ಲ.. ಮಗಳನ್ನ ನೆನೆದು ತಾಯಿ ಕಣ್ಣೀರು

publive-image

ಅಮ್ಮನಿಗೆ ಕರೆ ಮಾಡಿ ಮಾತಾಡಿದ್ದರು..

ಹೈದರಾಬಾದ್​ನಿಂದ ಫೆಬ್ರವರಿ 17ರಂದು ಕೊಪ್ಪಳದ ಆನೆಗೊಂದಿ ಭಾಗದ ಪ್ರವಾಸಿ ತಾಣ ವೀಕ್ಷಣೆಗೆ ಅನನ್ಯ ಬಂದಿದ್ದರು. ಸ್ನೇಹಿತರಾದ ಸಾತ್ವಿಕ್, ಆಶಿತಾ ಜೊತೆ ಆಗಮಿಸಿದ್ದರು. ಅದರಂತೆ ಮೊನ್ನೆಯ ದಿನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿರುವ ‘ವೈಟ್ ಸ್ಯಾಂಡ್ ರೆಸಾರ್ಟ್’ನಲ್ಲಿ ತಂಗಿದ್ದರು.

ಅಂಜನಾದ್ರಿ ಬೆಟ್ಟಕ್ಕೆ ತೆರಳಿದ್ದ ಅನನ್ಯ, ರಾಮಾಯಣ ಜಪ ಮಾಡಿ ತಾಯಿ ರಜನಿಗೆ ಕರೆ ಮಾಡಿದ್ದರಂತೆ. ವಿಡಿಯೋ ಕಾಲ್ ಮಾಡಿದ್ದ ಅನನ್ಯ, ಅಮ್ಮ ನೀನು ಬರಬೇಕಿತ್ತು. ತುಂಬಾ ಚೆನ್ನಾಗಿದೆ ಎಂದಿದ್ದಳಂತೆ. ಈ ಬಗ್ಗೆ ಅನನ್ಯ ಅಮ್ಮ ಅವರೇ ಮಗಳನ್ನು ಕಣ್ಣೀರು ಇಡುತ್ತ ಹೇಳಿದ್ದಾರೆ. ಬೆಳಗ್ಗೆ ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಶ್ರೀರಾಮನ ಮಂತ್ರ ಪಠಿಸಿದ್ದಳು. ಅಲ್ಲದೇ ದೊಡ್ಡ ಬೆಟ್ಟವನ್ನು ನನಗೆ ವಿಡಿಯೋ ಕಾಲ್ ಮಾಡಿ ತೋರಿಸಿದ್ದಳು. ನನ್ನ ಮಗಳು ಯಾರಿಗೂ ನೋವು ಮಾಡಿಲ್ಲ. ಅವಳಿಗೆ ಯಾಕೆ ಇಂಥ ಕಷ್ಟ ಬಂತು ಅಂತಾ ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ: 3, 2, 1 ಕೌಂಟ್ ಮಾಡಿ ತುಂಗಭದ್ರಾ ನದಿಗೆ ಜಿಗಿದ ವೈದ್ಯೆ; ಹೈದರಾಬಾದ್​ನ ಡಾಕ್ಟರ್ ಕೊಪ್ಪಳದಲ್ಲಿ ಹುಚ್ಚಾಟ..!

ಆಗಿದ್ದೇನು..?

ರೆಸಾರ್ಟ್​ನಲ್ಲಿ ತಂಗಿದ್ದ ಅನನ್ಯ ಮತ್ತು ಸ್ನೇಹಿತರು ಇನ್ನೇನು ಚೆಕ್​ ಔಟ್ ಮಾಡಿ ಹೋಗಬೇಕಿತ್ತು. ಅಷ್ಟರಲ್ಲಾಗಲೇ ಕೆಟ್ಟ ಘಳಿಗೆಗೆ ಸಿಲುಕಿದ್ದಾರೆ. ರೆಸಾರ್ಟ್ ಹಿಂಭಾಗ ಕಲ್ಲುಬಂಡೆ ಮಧ್ಯೆ ಹರಿಯುವ ನಿಷೇಧಿತ ತುಂಗಾಭದ್ರ ನದಿಯಯಲ್ಲಿ ಈಜಾಡಲು ತೆರಳಿದ್ದಾರೆ. ಅಲ್ಲಿ ರೀಲ್ಸ್ ಮಾಡುತ್ತ ನದಿಗೆ ಜಿಗಿದಿದ್ದಾಳೆ. ಈ ವೇಳೆ ಆಕೆಯ ಜೊತೆಗಿದ್ದ ಸ್ನೇಹಿತರು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ರೀಲ್ಸ್ ಮಾಡುತ್ತ ನದಿಗೆ ಜಿಗಿದ ಅನನ್ಯ ರಾವ್ ಯಾರು..? ಓರ್ವ ಶಾಸಕರ ಸಂಬಂಧಿಯೂ ಹೌದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment