Advertisment

ಮದುವೆ ಆಗಲ್ಲ ಎಂದ ಗೆಳೆಯನ ಖಾಸಗಿ ಅಂಗ ಕತ್ತರಿಸಿದ ವೈದ್ಯೆ; ಹೇಳಿದ್ದೇನು? VIDEO

author-image
admin
Updated On
ಮದುವೆ ಆಗಲ್ಲ ಎಂದ ಗೆಳೆಯನ ಖಾಸಗಿ ಅಂಗ ಕತ್ತರಿಸಿದ ವೈದ್ಯೆ; ಹೇಳಿದ್ದೇನು? VIDEO
Advertisment
  • ಚಾಕುವಿನಿಂದ ಗೆಳೆಯನ ಖಾಸಗಿ ಅಂಗ ಕತ್ತರಿಸಿದ ವೈದ್ಯೆ ಬಂಧನ
  • ವೈದ್ಯೆಯನ್ನು ಲೈಂಗಿಕವಾಗಿ ಬಳಸಿ ಕೈ ಕೊಟ್ಟಿದ್ದ ಬಾಯ್ ಫ್ರೆಂಡ್!
  • ನರ್ಸಿಂಗ್ ಹೋಮ್‌ಗೆ ಬಾಯ್ ಫ್ರೆಂಡ್ ಕರೆದ ವೈದ್ಯೆ ಮಾಡಿದ್ದೇನು?

ಪಾಟ್ನಾ: ಮದುವೆ ಆಗಲು ನಿರಾಕರಿಸಿದ್ದಕ್ಕೆ ವೈದ್ಯೆಯೊಬ್ಬರು ಗೆಳೆಯನ ಖಾಸಗಿ ಅಂಗ ಕತ್ತರಿಸಿದ ಘಟನೆ ಬಿಹಾರದ ಸರನ್ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಮ್​​ನಲ್ಲಿ ನಡೆದಿದೆ. ವೈದ್ಯೆಯನ್ನು ಲೈಂಗಿಕವಾಗಿ ಬಳಸಿ ಕೈ ಕೊಟ್ಟಿದ್ದ ಬಾಯ್ ಫ್ರೆಂಡ್ ಎನ್ನಲಾಗಿದೆ. ಸಿಟ್ಟಿಗೆದ್ದ ವೈದ್ಯ ಚಾಕುವಿನಿಂದ ಗೆಳೆಯನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾರೆ.

Advertisment

ಇದನ್ನೂ ಓದಿ: ಬೇರೊಬ್ಬಳ ಜೊತೆ ಮದ್ವೆ.. ಕಾಲೇಜು ವಿದ್ಯಾರ್ಥಿನಿ ಜೊತೆ ಲವ್​! ವಿಡಿಯೋ ಮಾಡಿ ಆತ್ಮಹ* ಮಾಡಿಕೊಂಡ ಲವರ್ಸ್​​ 

ವೈದ್ಯೆ ಅಭಿಲಾಷಾ ಅವರು 30 ವರ್ಷದ ಬಾಯ್‌ಫ್ರೆಂಡ್ ಜೊತೆ ಕಳೆದೆರೆಡು ವರ್ಷಗಳಿಂದ ಪರಸ್ಪರ ಸಂಪರ್ಕದಲ್ಲಿದ್ದರು. ಕಳೆದ ಜುಲೈ 1ಕ್ಕೆ ಇವರಿಬ್ಬರು ಚಪ್ರಾ ಕೋರ್ಟ್​ನಲ್ಲಿ ರಿಜಿಸ್ಟರ್ ಮದುವೆಯಾಗಬೇಕಾಗಿತ್ತು. ಆದರೆ ಮದುವೆಯಾಗಲು ಗೆಳೆಯನೇ ಬಂದಿರಲಿಲ್ಲ. ಮದುವೆಯಾಗದೆ ಮೋಸ ಮಾಡಿದ್ದಕ್ಕೆ ಸಿಟ್ಟು ಬಂದಿತ್ತು ಎಂದು ವೈದ್ಯೆ ಹೇಳಿದ್ದಾರೆ.

publive-image

ನರ್ಸಿಂಗ್ ಹೋಮ್‌ಗೆ ಬಾಯ್ ಫ್ರೆಂಡ್ ಕರೆದ ವೈದ್ಯೆ ಅನಸ್ತೇಷಿಯಾ ಕೊಟ್ಟು ಖಾಸಗಿ ಅಂಗ ಕತ್ತರಿಸಿದ್ದಾರೆ. ಬಳಿಕ ಬಾಯ್ ಫ್ರೆಂಡ್‌ಗೆ ತೀವ್ರ ರಕ್ತಸ್ರಾವ ಆಗಿದ್ದು, ಪಾಟ್ನಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Advertisment

ಇದನ್ನೂ ಓದಿ: ಬೆಂಗಳೂರಲ್ಲಿ ಜಿಮ್‌ ರಿಸೆಪ್ಶನಿಸ್ಟ್ ಆಗಿದ್ದ ಯುವತಿ ಅನುಮಾನಾಸ್ಪದ ಸಾವು; ಕಾರಣವೇನು? 

ರಕ್ತಸಿಕ್ತ ಚಾಕು, ವಿಕೃತ ವೈದ್ಯೆಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಸಂತ್ರಸ್ತ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisment


">July 3, 2024

ರಕ್ತಸಿಕ್ತ ವೈದ್ಯೆ ಹೇಳಿದ್ದೇನು?

ನಾನು ಪ್ರೀತಿ ಮಾಡ್ತೀನಿ ಅಂತ ಹೇಳಿದ್ದೇ ಅಲ್ವಾ? ನಾನು ಎಲ್ಲಾ ಖರ್ಚು ತೆಗೆದುಕೊಳ್ಳುತ್ತೇನೆ ಎಂದಿದ್ದೇ ಅಲ್ವಾ? ಯಾಕೆ ನನ್ನನ್ನು ಮದುವೆ ಆಗಿಲ್ಲ. ನನ್ನ ಮಾನ ಮರ್ಯಾದೆ ತೆಗೆದಿದ್ದೀಯಾ? ಜನರು ಇಟ್ಟುಕೊಂಡವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನೀವು ಅದಕ್ಕಿಂತ ಕೆಟ್ಟದಾಗಿ ನೋಡಿದ್ದೀಯಾ? ನನ್ನ ಎಲ್ಲವನ್ನು ನೀನು ಹಾಳು ಮಾಡಿದ್ದೀಯಾ? ನನ್ನ ದುಡ್ಡು, ನನ್ನ ಬ್ಯುಸಿನೆಸ್, ತಂದೆ-ತಾಯಿಯನ್ನು ಬಿಟ್ಟುಕೊಟ್ಟಿದ್ದೆ. ದಯವಿಟ್ಟು ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ.
ಅಭಿಲಾಷಾ, ವೈದ್ಯೆ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment