newsfirstkannada.com

ಮದ್ವೆಯಾಗಿ 7 ತಿಂಗಳಿಗೇ ಟಾರ್ಚರ್ ಕೊಟ್ಟ ಪತ್ನಿ.. ಆಸ್ಪತ್ರೆಯಲ್ಲೇ ಸಾವಿಗೆ ಶರಣಾದ ವೈದ್ಯ

Share :

Published January 30, 2024 at 9:34am

    ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

    ಸಾವಿಗೂ ಮೊದಲು ವಿಡಿಯೋ ರೆಕಾರ್ಡ್ ಮಾಡಿದ್ದಾರೆ

    ಡೆತ್​ನೋಟ್​​ನಲ್ಲಿ ಪತ್ನಿ ವಿರುದ್ಧ ಗಂಭೀರ ಆರೋಪ

ಉತ್ತರ ಪ್ರದೇಶದ ಗೊಂಡಾದಲ್ಲಿ 40 ವರ್ಷದ ವೈದ್ಯರೊಬ್ಬರು ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವಿ ದಯಾಳ್ ಆತ್ಮಹತ್ಯೆ ಮಾಡಿಕೊಂಡ ವೈದ್ಯರು. ಇವರಿಗೆ ಕೇವಲ 7 ತಿಂಗಳ ಹಿಂದಷ್ಟೇ ಮದುವೆ ಆಗಿತ್ತು.

ಇವರು ಕೊತ್ವಾಲಿ ಪ್ರದೇಶದ ಇಂದಿರಾ ನಗರದಲ್ಲಿ ವಾಸವಿದ್ದರು. ಶುಕ್ರವಾರ ಮಧ್ಯಾಹ್ನ ವಿಡಿಯೋ ಮಾಡಿ ಕ್ಲಿನಿಕ್​​ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ನನ್ನ ಸಾವಿಗೆ ಪತ್ನಿ ಹಾಗೂ ಆಕೆಯ ಸಹೋದರಿ, ಸಹೋದರ ಕಾರಣ ಎಂದು ಆರೋಪಿಸಿದ್ದಾರೆ.

ಆರೋಪ ಏನು..?
ನಾನು ಮದ್ವೆಯಾದ ಕೆಲವು ದಿನಗಳ ನಂತರ ನನ್ನ ಕುಟುಂಬದ ವಿರುದ್ಧ ಇಲ್ಲ, ಸಲ್ಲದ ಆರೋಪ ಮಾಡ್ತಿದ್ದಾಳೆ. ಅದಕ್ಕೆ ಆಕೆಯ ಸಹೋದರಿ, ಸಹೋದರ ಸಾಥ್ ನೀಡಿದ್ದಾರೆ. ಇವರು ಕೊಡುತ್ತಿರುವ ಚಿತ್ರ ಹಿಂಸೆಯಿಂದ ಮಾನಸಿಕವಾಗಿ ನೊಂದಿದ್ದೇನೆ. ನನಗೆ ಮಾತ್ರವಲ್ಲ, ನನ್ನ ಕುಟುಂಬಸ್ಥರಿಗೂ ತೊಂದರೆ ಕೊಡುತ್ತಿದ್ದಾರೆ ಎಂದು ಡೆತ್​ನೋಟ್​ನಲ್ಲಿ ತಿಳಿಸಿದ್ದಾರೆ.

ಆತ್ಮಹತ್ಯೆ ಬೆನ್ನಲ್ಲೇ ದೇವಿ ದಯಾಳ್ ತಂದೆ ಶ್ಯಾಮನಾಥ್ ಯಾದವ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ದೇವಿ ದಯಾಳ್ ಪತ್ನಿ ಪ್ರಿಯಾ ಯಾದವ್, ಸಹೋದರಿ ಭಾರತಿ ಯಾದವ್, ಸಹೋದರ ರಾಜ ವಿರುದ್ಧ ದೂರು ದಾಖಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದ್ವೆಯಾಗಿ 7 ತಿಂಗಳಿಗೇ ಟಾರ್ಚರ್ ಕೊಟ್ಟ ಪತ್ನಿ.. ಆಸ್ಪತ್ರೆಯಲ್ಲೇ ಸಾವಿಗೆ ಶರಣಾದ ವೈದ್ಯ

https://newsfirstlive.com/wp-content/uploads/2024/01/DOCTOR-2.jpg

Load More