3, 2, 1 ಕೌಂಟ್ ಮಾಡಿ ತುಂಗಭದ್ರಾ ನದಿಗೆ ಜಿಗಿದ ವೈದ್ಯೆ; ಹೈದರಾಬಾದ್​ನ ಡಾಕ್ಟರ್ ಕೊಪ್ಪಳದಲ್ಲಿ ಹುಚ್ಚಾಟ..!

author-image
Veena Gangani
Updated On
ಏ ಅನನ್ಯ ಬೇಗ ಎದ್ದು ಬಾರಮ್ಮ.. ಮಗಳನ್ನು ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಡಾಕ್ಟರ್​ ತಾಯಿ; ಮನಕಲಕುವ ದೃಶ್ಯ!
Advertisment
  • ತುಂಗಭದ್ರಾ ನದಿಯಲ್ಲಿ ಜಿಗಿದಿದ್ದ ವೈದ್ಯೆ ಮುಳುಗಿ ನಾಪತ್ತೆ
  • ಹೈದರಾಬಾದ್ ಮೂಲದ ಅನನ್ಯ ರಾವ್​ಗಾಗಿ ಹುಡುಕಾಟ
  • ನದಿಯಲ್ಲಿ ಜಿಗಿದು ಈಜಬೇಕು ಅಂತಲೇ ಹೋಗಿದ್ದ ಅನನ್ಯ!

ಕೊಪ್ಪಳ: ಹೈದ್ರಾಬಾದ್ ಮೂಲದ ವೈದ್ಯೆ ನದಿಯಲ್ಲಿ ಮುಳುಗಿ ನಾಪತ್ತೆಯಾಗಿರೋ ಘಟನೆ ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದ ಬಳಿ ನಡೆದಿದೆ. ಅನನ್ಯ ರಾವ್ ನಾಪತ್ತೆಯಾಗಿರೋ ವೈದ್ಯೆ.

ಇದನ್ನೂ ಓದಿ: ಬೆಂಗಳೂರಿಗರೇ ಇವತ್ತೇ ಅಲರ್ಟ್ ಆಗಿ.. ನಾಳೆ ನೀವು 12 ಗಂಟೆ ಕಾಲ ತೊಂದರೆಗೆ ಸಿಲುಕಬಹುದು..!

publive-image

ನಾಪತ್ತೆಯಾಗಿರೋ ವೈದ್ಯೆ ತುಂಗಭದ್ರಾ ನದಿಯಲ್ಲಿ ಜಿಗಿದು ಕಣ್ಮರೆಯಾಗಿದ್ದಾರೆ. ಹೈದ್ರಾಬಾದ್ ಮೂಲಕ ಖಾಸಗಿ‌ ಆಸ್ಪತ್ರೆಯ ವೈದ್ಯೆಯಾಗಿದ್ದರು. ರಜೆ ಹಿನ್ನೆಲೆಯಲ್ಲಿ ಗಂಗಾವತಿಗೆ ಬಂದಿರೋ ಅನನ್ಯ ರಾವ್ ಹಾಗೂ ಸ್ನೇಹಿತರು ಬಂದಿದ್ದರು.
ಇದೇ ವೇಳೆ ನದಿಯಲ್ಲಿ ಏಕಾಏಕಿ ಜಿಗಿದಿದ್ದಾಳೆ. ಆದ್ರೆ ಕೆಲ ಹೊತ್ತುಗಳ ಬಳಿಕ ತುಂಗಭದ್ರಾ ನದಿಯಲ್ಲಿ ಜಿಗಿದಿದ್ದ ವೈದ್ಯೆ ನಾಪತ್ತೆಯಾಗಿದ್ದಾಳೆ.

publive-image

ಇನ್ನೂ ವೈದ್ಯೆ ಅನನ್ಯ ನದಿಗೆ ಹಾರುವ ವಿಡಿಯೋ ಫೋನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ 3, 2, 1 ಜಂಪ್ ಅಂತ ಹೇಳೋದೂ ರೆಕಾರ್ಡ್ ಆಗಿದೆ. ಹೀಗಾಗಿ ನದಿ ಜಿಗಿಯುವುದಕ್ಕೆ ಮೊದಲೇ ತಯಾರಿ ನಡೆದಿತ್ತು ಎಂದು ಹೇಳಲಾಗುತ್ತಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment