/newsfirstlive-kannada/media/post_attachments/wp-content/uploads/2024/06/up-case.jpg)
ಆಗ್ರಾ: ಪೋಷಕರೊಂದಿಗೆ ತಾಜ್‌ಮಹಲ್‌ಗೆ ಭೇಟಿ ಕೊಟ್ಟಿದ್ದ ವೇಳೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದ ಮಗುವನ್ನು ಸಿಐಎಸ್‌ಎಫ್ ಯೋಧ ಕಾಪಾಡಿದ್ದಾರೆ. ಇದೀಗ ಮಗುವಿಗೆ ಮರು ಜನ್ಮ ನೀಡಿದ ಸಿಐಎಸ್‌ಎಫ್ ಯೋಧನ ಸಮಯ ಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಭರ್ಜರಿ ಮಳೆಯ ಎಚ್ಚರಿಕೆ.. ಬೆಂಗಳೂರಿಗೆ ಹವಾಮಾನ ಇಲಾಖೆ ಕೊಟ್ಟ ಸೂಚನೆ ಏನು?
ಅಸಲಿಗೆ ಮಗುವಿಗೆ ಆಗಿದ್ದೇನು?
ಬೆಳಗಾವಿ ಮೂಲದ 2 ವರ್ಷದ ಮಗುವು ಪೋಷಕರೊಂದಿಗೆ ಉತ್ತರ ಪ್ರದೇಶದ ಆಗ್ರಾದಲ್ಲಿರೋ ತಾಜ್‌ಮಹಲ್‌ಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಮಗುವು ಪದೇ ಪದೇ ಅಳುತ್ತಿತ್ತು. ಪರಿಣಾಮ ಅಳುತ್ತಿದ್ದ ಮಗುವು ಹೈಪೋಕ್ಸಿಯಾದಿಂದ ಅಸ್ವಸ್ಥಗೊಂಡಿದೆ. ಬಳಿಕ ಏಕಾಏಕಿ ಹೆಣ್ಣು ಮಗುವಿಗೆ ಪ್ರಜ್ಞೆ ತಪ್ಪಿದೆ. ಕೂಡಲೇ ಗಾಬರಿಗೊಂಡ ಪೋಷಕರು ಜೋರಾಗಿ ಕಿರುಚಾಡಿದ್ದಾರೆ. ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ ಸಿಐಎಸ್‌ಎಫ್ ಯೋಧರು ತಕ್ಷಣವೇ ಆಂಬುಲೆನ್ಸ್ನಲ್ಲೇ ಸಿಪಿಆರ್ ಮಾಡಿ ಮಗುವಿಗೆ ಪುನರುಜ್ಜೀವನ ನೀಡಿದ್ದಾರೆ. ಬಳಿಕ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ 2 ವರ್ಷದ ಮಗು ಈಗ ಸುಧಾರಿಸಿಕೊಳ್ಳುತ್ತಿದೆ ಇನ್ನು ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಸಿಐಎಸ್‌ಎಫ್ ಯೋಧರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Belagavi Toddler Saved by CPR at Taj Mahal
2 yr old girl from Belagavi visiting Taj Mahal collapsed and lost consciousness. CISF personnel quickly brought her to dispensary, where Dr. Rinku Baghel performed CPR, reviving her. pic.twitter.com/aqWOFfZ5Cv— All About Belgaum | Belagavi News (@allaboutbelgaum)
Belagavi Toddler Saved by CPR at Taj Mahal
2 yr old girl from Belagavi visiting Taj Mahal collapsed and lost consciousness. CISF personnel quickly brought her to dispensary, where Dr. Rinku Baghel performed CPR, reviving her. pic.twitter.com/aqWOFfZ5Cv— All About Belgaum | Belagavi News (@allaboutbelgaum) June 26, 2024
">June 26, 2024
ಇದನ್ನೂ ಓದಿ:ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ
ಇನ್ನು, ಇದೇ ಘಟನೆ ಬಗ್ಗೆ ಮಾತಾಡಿದ ತಾಜ್ ಮಹಲ್ ಡಿಸ್ಪೆನ್ಸರಿಯ ವೈದ್ಯ ಡಾ ಬಾಘೆಲ್ ಅವರು, ಈ ಘಟನೆಯು ಅತಿಯಾದ ಅಳುವಿಕೆಯಿಂದ ಹೈಪೋಕ್ಸಿಯಾದಿಂದ ಉಂಟಾಗುತ್ತದೆ ಎಂದು ಶಂಕಿಸಲಾಗಿದೆ. ಆಗಾಗ್ಗೆ, ಮಗು ಅತಿಯಾಗಿ ಅತ್ತಾಗ, ಆಮ್ಲಜನಕವು ಮೆದುಳಿಗೆ ತಲುಪಲು ವಿಫಲಗೊಳ್ಳುತ್ತದೆ. ಇದು ಅಂತಹ ಸ್ಥಿತಿಗೆ ಕಾರಣವಾಗುತ್ತದೆ. ಹೀಗೆ ಆದಾಗ ಹೃದಯ ಬಡಿತ ನಿಂತಾಗ ಅಥವಾ ಉಸಿರಾಟ ನಿಂತರೆ ನಿಮಿಷಗಳಲ್ಲಿ ಸಾವು ಕೂಡ ಸಂಭವಿಸಬಹುದು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ