newsfirstkannada.com

Operation success: ಮಹಿಳೆಯ ಹೊಟ್ಟೆಯಿಂದ ಬರೋಬ್ಬರಿ 11.5 ಕೆಜಿಯ ದೈತ್ಯ ಗಡ್ಡೆ ತೆಗೆದ ವೈದ್ಯರು

Share :

12-07-2023

    ತುಮಕೂರಲ್ಲಿ ನಡೀತು ಸ್ಪೆಷಲ್ ಆಪರೇಷನ್

    ಮಹಿಳೆಗೆ ಮರುಜೀವಕೊಟ್ಟ ವೈದ್ಯ ಶ್ರೀಧರ್

    ಆರೋಗ್ಯದಲ್ಲಿ ಚೇತರಿಕೆ, ಶೀಘ್ರದಲ್ಲೇ ಡಿಸ್ಚಾರ್ಜ್

ತುಮಕೂರು: ಜಿಲ್ಲೆಯ ತಿಪಟೂರು ಪಟ್ಟಣದ ಕುಮಾರ ಆಸ್ಪತ್ರೆಯಲ್ಲಿ ಮಹಿಳೆಯ ಹೊಟ್ಟೆಯಿಂದ ಬರೊಬ್ಬರಿ 11.5 ಕೆ.ಜಿ ತೂಕದ ಗಡ್ಡೆಯನ್ನು ವೈದ್ಯರು ಹೊರತೆಗೆದಿದ್ದಾರೆ.

ಏನಿದು ಯಶಸ್ವಿ ಶಸ್ತ್ರಚಿಕಿತ್ಸೆ..?

ತಿಪಟೂರು ಪಟ್ಟಣದ ಗಾಂಧಿನಗರದ 45 ವರ್ಷದ ಮಹಿಳೆಯೊಬ್ಬರು ಕಳೆದ ಕೆಲವು ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ನಾರ್ಮಲ್ ಪೇನ್ ಅಂದ್ಕೊಂಡಿದ್ದ ಮಹಿಳೆ, ಮಾತ್ರೆಗಳನ್ನು ಪಡೆದು ಸುಮ್ಮನಾಗುತ್ತಿದ್ದಳು. ಆದರೆ ಇತ್ತೀಚೆಗಿನ ದಿನಗಳಲ್ಲಿ ಹೊಟ್ಟೆನೋವು ತೀವ್ರವಾಗಿ ಉಲ್ಬಣಿಸಿತ್ತು.

ಈ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಎಂದು ಕುಮಾರ ಆಸ್ಪತ್ರೆಗೆ ಬಂದಿದ್ದಳು. ಸ್ಕ್ಯಾನ್ ಮಾಡಿಸಿದಾಗ ಹೊಟ್ಟೆಯಲ್ಲಿ ದೈತ್ಯ ಗಡ್ಡೆ ಇರೋದು ಪತ್ತೆಯಾಗಿದೆ. ಮುಂದಿನ ಅನಾಹುತ ಅರಿತ ಡಾ. ಶ್ರೀಧರ್, ಕೂಡಲ ಶಸ್ತ್ರಚಿಕಿತ್ಸೆಯ ಅಗತ್ಯ ಇದೆ ಎಂದಿದ್ದಾರೆ. ಅಂತೆಯೇ ತಮ್ಮ ನೇತೃತ್ವದ ತಂಡದ ಜೊತೆ ಕಳೆದ ಭಾನುವಾರ ಶಸ್ತ್ರಚಿಕಿತ್ಸೆ ಮಾಡಿ ಗಡ್ಡೆಯನ್ನು ಹೊರ ತೆಗೆದಿದ್ದಾರೆ.

ಈ ಗಡ್ಡೆಯು ಬರೋಬ್ಬರಿ 11.5 ಕೆಜಿ ಇತ್ತು. ಸದ್ಯ ಮಹಿಳೆಯ ಆರೋಗ್ಯವು ಸುಧಾರಿಸಿದ್ದು, ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Operation success: ಮಹಿಳೆಯ ಹೊಟ್ಟೆಯಿಂದ ಬರೋಬ್ಬರಿ 11.5 ಕೆಜಿಯ ದೈತ್ಯ ಗಡ್ಡೆ ತೆಗೆದ ವೈದ್ಯರು

https://newsfirstlive.com/wp-content/uploads/2023/07/TMK_OPP-1.jpg

Load More