/newsfirstlive-kannada/media/post_attachments/wp-content/uploads/2025/03/Vasavi-Hospital-Obstetrician-Dr.-Nisha-Buchade.jpg)
ಬೆಂಗಳೂರು: ಗರ್ಭಿಣಿಯರು ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ವಹಿಸಿದ್ರು ಕೂಡ ಕಡಿಮೆ. ಯಾಕಂದ್ರೆ ಈ ವೇಳೆ ಒಂದು ಚೂರು ವ್ಯತ್ಯಾಸವಾದ್ರು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಗರ್ಭಿಣಿಯರು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಹಾಗೂ ಮಗುವಿನ ಬಗ್ಗೆ ಕಾಳಜಿ ವಹಿಸಬೇಕು.
ಈ ನಿಟ್ಟಿನಲ್ಲಿ ಸಣ್ಣ ಅಪಾಯಗಳು ಕೂಡ ತಾಯಿ ಹಾಗೂ ಮಗುವಿನ ಜೀವಕ್ಕೆ ಕಂಟಕವಾಗುವ ಸಂದರ್ಭ ಎದುರಾಗಬಹುದು. ಆರೋಗ್ಯ ಸಮಸ್ಯೆಗಳಿದ್ದಾಗ ದೂರದ ಪ್ರಯಾಣ ಹೆಚ್ಚು ಸೂಕ್ತವಲ್ಲ. ಹೀಗೆ ಆರೋಗ್ಯ ಸಮಸ್ಯೆಯುಳ್ಳ ಗರ್ಭಿಣಿಯೊಬ್ಬರು ದೂರದ ಪ್ರಯಾಣ ಮಾಡಿದ ಬಳಿಕ ಅಪಾಯಕ್ಕೆ ಸಿಲುಕಿಕೊಂಡ ಘಟನೆ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
/newsfirstlive-kannada/media/post_attachments/wp-content/uploads/2024/01/Pregnant-women.jpg)
28 ವಾರ ಪೂರೈಸಿದ ಹಾಗೂ ಈಗಾಗಲೇ ಎರಡು ಬಾರಿ ಸಿಸೇರಿಯನ್‌ಗೆ ಒಳಗಾದ ಮಹಿಳೆಯೊಬ್ಬರು ಕಲಬುರಗಿಯಿಂದ ಬೆಂಗಳೂರಿಗೆ ಸುಮಾರು 600 ಕಿ.ಮೀ ಪ್ರಯಾಣ ಬೆಳೆಸಿದ್ದಾರೆ. ತದನಂತರ ಅತಿಯಾದ ನೋವಿನಿಂದ ಬಳಲುತ್ತಿದ್ದುದರಿಂದ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಡಯೆಟ್ ಪ್ಲ್ಯಾನ್ ಫಾಲೋ ಮಾಡೋರೇ ಎಚ್ಚರ.. 23 ವರ್ಷದ ಯುವತಿ ಜೀವಕ್ಕೆ ಕುತ್ತು; ಆಗಿದ್ದೇನು?
ಈ ವೇಳೆ ಮಹಿಳೆಗೆ ಸೆಂಟ್ರಲ್ ಪ್ಲಾಸೆಂಟಾ ಪ್ರಿವಿಯಾ (ಕೇಂದ್ರ ಜರಾಯು ಪ್ರೀವಿಯಾ) ಜೊತೆಗೆ ಅಕ್ರೆಟಾ ಇರುವುದು ವೈದ್ಯರ ಗಮನಕ್ಕೆ ಬಂದಿದೆ. ಈ ರೀತಿಯ ಸಂದರ್ಭಗಳು ಜರಾಯು ಜನನ ಕಾಲುವೆ (ಭರ್ತ್ ಕೆನಲ್) ಬಳಿ ಇದ್ದಾಗ ಹೆರಿಗೆಗೆ ಅಡ್ಡಿಯಾದಾಗ ಕಂಡು ಬರುತ್ತದೆ. ಈ ಮುಂಚೆ ವೈದ್ಯರೊಬ್ಬರು ದೂರದ ಪ್ರಯಾಣ ಸಲ್ಲದು ಎಂದು ಹೇಳಿದ್ದರೂ ಸಹ ಅದರ ಹೊರತಾಗಿಯು ಮಹಿಳೆಯು ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅದರ ಪರಿಣಾಮ ತಾಯಿಗೆ ತೀವ್ರ ರಕ್ತಸ್ರಾವವಾಗುವುದರ ಜೊತೆಗೆ ತಾಯಿ ಮಗುವಿನ ಜೀವಕ್ಕೂ ಆಪತ್ತು ತಂದಿತ್ತು ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ನಿಶಾ ಬುಚಾಡೆ.
/newsfirstlive-kannada/media/post_attachments/wp-content/uploads/2025/03/Doctor-Operation-Theater.jpg)
ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ವೈದ್ಯರು, ತಕ್ಷಣವೇ ಸ್ಕ್ಯಾನ್ ಮಾಡಿ ನೋಡಿದಾಗ ಹಾನಿಗೊಳಗಾದ ಗರ್ಭಾಶಯ, ಭಾಗಶಃ ಬೇರ್ಪಟ್ಟ ಜರಾಯು ಮತ್ತು ಒಳಭಾಗದಲ್ಲಿ ಅಧಿಕವಾದ ರಕ್ತಸ್ರಾವ ಕಂಡುಬಂದಿದೆ. ಸುಮಾರು ಎರಡು ಲೀಟರ್ ರಕ್ತ ನಷ್ಟವಾಗಿತ್ತು ಎನ್ನುತ್ತಾರೆ ವೈದ್ಯರು. ಒಂದೆಡೆ ಮಹಿಳೆಯ ರಕ್ತದೊತ್ತಡ ಕಡಿಮೆಯಾಗುತ್ತಿದೆ, ಮತ್ತೊಂದೆಡೆ ಮಗುವಿನ ಹೃದಯ ಬಡಿತ ಅಸಹಜವಾಗಿ ಕಂಡುಬಂದಿದೆ. ತಕ್ಷಣವೇ ವೈದ್ಯರು ರಕ್ತದ ವ್ಯವಸ್ಥೆ ಮಾಡಿ ತುರ್ತು ಶಸ್ತ್ರಚಿಕಿತ್ಸೆ ಕೈಗೊಂಡಿದ್ದಾರೆ.
ಶಸ್ತ್ರಚಿಕಿತ್ಸೆಯ ವೇಳೆ ಮಹಿಳೆಯ ಹೊಟ್ಟೆಯಲ್ಲಿ 2 ಲೀಟರ್ ರಕ್ತವಿರುವುದು ವೈದ್ಯರಿಗೆ ಕಂಡು ಬಂದಿದೆ. ಕೂಡಲೇ ಮಹಿಳೆಗೆ ಹೆರಿಗೆ ಮಾಡಿದ್ದಾರೆ, 1.25 ಕೆ.ಜಿ ತೂಕವಿದ್ದ ಮಗು ಹೆರಿಗೆಯ ಬಳಿಕ ಅಳಲಾರಂಭಿಸಿತು. ತದನಂತರ ವೈದ್ಯರು ಜರಾಯು (ಪ್ಲಸೆಂಟಾ) ಅನ್ನು ತೆಗೆದುಹಾಕಿದ್ದಾರೆ. ಆರಂಭದಲ್ಲಿ ಮಗುವಿಗೆ ವೈದ್ಯಕೀಯ ನೆರವಿನ ಅಗತ್ಯವಿತ್ತು. ಆದರೆ ಬಳಿಕ ನವಜಾತ ಶಿಶು ಆಮ್ಲಜನಕದ ಬೆಂಬಲದಿಂದ ಸ್ಥಿರವಾಗಿದ್ದು, ಮಗುವಿಗೆ ತಾಯಿಯ ಎದೆ ಹಾಲು ನೀಡಲು ಆರಂಭಿಸಲಾಗಿದೆ. ತಾಯಿ ಮತ್ತು ಮಗು ಇಬ್ಬರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದ ಹಿನ್ನೆಲೆ ಮೂರು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಜ್ಞರಾದ ಡಾ. ನಿಶಾ ಬುಚಾಡೆ ತಿಳಿಸಿದರು.
/newsfirstlive-kannada/media/post_attachments/wp-content/uploads/2023/09/Pregnant_woman.jpg)
ಇಂತಹ ಸಂದರ್ಭಗಳಲ್ಲಿ 5 ನಿಮಿಷ ತಡವಾದರೂ ಕೂಡ ತಾಯಿ ಮಗುವಿನ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಜರಾಯು ಪ್ರೀವಿಯಾ ಅಥವಾ ಅನೇಕ ಬಾರಿ ಸಿಸೇರಿಯನ್‌ಗೆ ಒಳಗಾದಂತಹ ಗರ್ಭಿಣಿಯರು ಪ್ರಯಾಣಿಸುವುದಿದ್ದಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸುವುದು ಅಥವಾ ವೈದ್ಯರ ಸಲಹೆ ಪಡೆಯುವುದು ಒಳಿತು. ಅಲ್ಲದೆ ಗರ್ಭಿಣಿಯರ ಆರೋಗ್ಯದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಕಾಯ್ದುಕೊಳ್ಳಬೇಕು ಮತ್ತು ಅಪಾಯಕಾರಿ ಸಂದರ್ಭಗಳನ್ನು ತಪ್ಪಿಸಲು ಆಸ್ಪತ್ರೆಯ ಹತ್ತಿರವೇ ಇರುವುದು ಒಳಿತು ಎಂದು ವೈದ್ಯೆ ಡಾ. ನಿಶಾ ಬುಚಾಡೆ ಅವರು ಗರ್ಭಿಣಿಯರಿಗೆ ಸಲಹೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us