/newsfirstlive-kannada/media/post_attachments/wp-content/uploads/2023/09/4-death.jpg)
ಚಿಕ್ಕಬಳ್ಳಾಪುರ: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಲೆಯರಹಳ್ಳಿಯ ಕೋಳಿಫಾರಂನಲ್ಲಿ ನಡೆದಿದೆ. ಕಾಲೆ ಸರೆರಾ ( 60 ), ಲಕ್ಷ್ಮಿ ಸರೇರಾ ( 50 ) , ಉಷಾ ಸರೇರಾ ( 40 ), ಮತ್ತು ಪೊಲ್ ಸರೇರಾ ( 16 ) ಮೃತ ದುರ್ದೈವಿಗಳು.
ಸಾವನ್ನಪ್ಪಿರುವ ನಾಲ್ವರು ನೇಪಾಳ ಮೂಲದ ಒಂದೇ ಕುಟುಂಬದವರಾಗಿದ್ದು, ಕೋಳಿ ಫಾರಂನಲ್ಲಿ ರಾತ್ರಿ ಮಲಗಿದ್ದರು. ಆದರೆ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.
ನಾಲ್ವರು 8 ದಿನಗಳಿಂದಷ್ಟೇ ಕೆಲಸ ಅರಸಿಕೊಂಡು ದೊಡ್ಡಬಳ್ಳಾಪುರಕ್ಕೆ ಬಂದಿದ್ದರು. ಕೋಳಿ ಫಾರಂ ನಲ್ಲಿ ಕೆಲಸ ಮಾಡಲೆಂದು ಆಗಮಿಸಿದ್ದರು. ರಾತ್ರಿ ಶೆಡ್ ಬಾಗಿಲು ಹಾಕ್ಕೊಂಡು ಮಲಗಿದ್ದ ನಾಲ್ವರು ಬೆಳಗ್ಗೆ ತಡವಾದರು ಹೊರ ಬಂದಿಲ್ಲ ಎಂದು ಹೋಗಿ ನೋಡಿದಾಗ ಶವವಾಗಿ ಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ