ಸೈಟ್ ಖರೀದಿಗೆ ಇದಕ್ಕಿಂತ ಬೆಸ್ಟ್​ ಪ್ಲೇಸ್ ಇಲ್ಲ.. ಬೆಂಗಳೂರು ಸಮೀಪದ ಈ ನಗರ ಸೈಟ್​​ಗಳ ಹಬ್..!

author-image
Ganesh
Updated On
ಸೈಟ್ ಖರೀದಿಗೆ ಇದಕ್ಕಿಂತ ಬೆಸ್ಟ್​ ಪ್ಲೇಸ್ ಇಲ್ಲ.. ಬೆಂಗಳೂರು ಸಮೀಪದ ಈ ನಗರ ಸೈಟ್​​ಗಳ ಹಬ್..!
Advertisment
  • ಮನೆ ಕಟ್ಟುವ ಮಧ್ಯಮ ವರ್ಗದ ಹಾಟ್ ಫೇವರಿಟ್..!
  • ಮನೆ ಕಟ್ಟುವ ದೊಡ್ಡ ಕನಸಿಗೆ ಇದು ಒಳ್ಳೆಯ ಸ್ಥಳ
  • ಸೈಟ್ ಖರೀದಿಗೂ ಮುನ್ನ ನೀವು ಏನು ಮಾಡಬೇಕು..?

ಬೆಂಗಳೂರು ದಿನೇ ದಿನೇ ಬೆಳೆಯುತ್ತಿದೆ. ಈಗ ಗ್ರೇಟರ್ ಬೆಂಗಳೂರು ಆಗಿ ಪರಿವರ್ತನೆಯಾಗಿದೆ. ಬೆಂಗಳೂರಿನ ಪಕ್ಕದ ನಗರಗಳೂ ಸ್ಯಾಟಲೈಟ್ ಟೌನ್ ರೀತಿಯಲ್ಲಿ ಅಭಿವೃದ್ದಿಯಾಗುತ್ತಿವೆ. ಹೀಗಾಗಿ ಬೆಂಗಳೂರಿನ ಪಕ್ಕದ ದೊಡ್ಡಬಳ್ಳಾಪುರದಲ್ಲೂ ರಿಯಲ್ಎಸ್ಟೇಟ್ ವೇಗವಾಗಿ ಬೆಳವಣಿಗೆಯಾಗುತ್ತಿದೆ.

ದೊಡ್ಡಬಳ್ಳಾಪುರದಲ್ಲಿ ಸೈಟ್ ತಗೊಂಡು ಮನೆ ಕಟ್ಟಿಕೊಂಡು ಉದ್ಯೋಗಿಗಳು ಬೆಂಗಳೂರಿಗೆ ಅಪ್ ಅಂಡ್ ಡೌನ್ ಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರು ಪಕ್ಕದ ದೊಡ್ಡಬಳ್ಳಾಪುರ ಕೂಡ ಸ್ವಂತ ಮನೆ ಕಟ್ಟಿಕೊಂಡು ವಾಸಿಸಲು ಬಯಸುವ ಮಧ್ಯಮ ವರ್ಗದ ಹಾಟ್ ಫೇವರಿಟ್ ಸಿಟಿಯಾಗಿದೆ. ಹಾಗಾದರೆ ದೊಡ್ಡಬಳ್ಳಾಪುರದಲ್ಲಿ ಸೈಟ್ ರೇಟ್ ಎಷ್ಟು? ದೊಡ್ಡಬಳ್ಳಾಪುರದಲ್ಲಿ ಸೈಟ್, ಮನೆ ಖರೀದಿಯಿಂದ ಇರೋ ಲಾಭಗಳೇನು? ದೊಡ್ಡಬಳ್ಳಾಪುರದಲ್ಲಿ ಮಧ್ಯಮ ವರ್ಗದ ಕೈಗೆಟುಕುವ ದರದಲ್ಲಿ ಸೈಟುಗಳು ಸಿಗ್ತಾವಾ ಅನ್ನೋ ಡೀಟೈಲ್ಸ್ ಇಲ್ಲಿದೆ.

ಇದನ್ನೂ ಓದಿ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇಲೆ ಕಿರುತೆರೆ ನಟಿ ಗಂಭೀರ ಆರೋಪ

publive-image

ದೊಡ್ಡಬಳ್ಳಾಪುರ ಬೆಂಗಳೂರಿನಿಂದ 40 ಕಿಮೀ ದೂರದಲ್ಲಿರುವ ನಗರ. ದೊಡ್ಡಬಳ್ಳಾಪುರಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಬಳಿಯಿಂದ ಪ್ರತಿ ಹತ್ತು ಹದಿನೈದು ನಿಮಿಷಕ್ಕೊಂದು ಕೆಎಸ್‌ಆರ್‌ಟಿಸಿ ಬಸ್ ಗಳು ಹೋಗುತ್ತವೆ. ಜೊತೆಗೆ ಬೆಂಗಳೂರಿನ ಮೆಜೆಸ್ಟಿಕ್, ಮಾರ್ಕೆಟ್​ನಿಂದಲೂ ಬಿಎಂಟಿಸಿ ಬಸ್​ಗಳು ಹೋಗುತ್ತವೆ. ವೋಲ್ವೋ ಬಸ್​ಗಳು ದೊಡ್ಡಬಳ್ಳಾಪುರಕ್ಕೆ ಹೋಗುತ್ತವೆ.

ಇನ್ನೂ ರೈಲುಗಳ ವಿಷಯದಲ್ಲಿ ಹೇಳುವುದಾದರೆ ಯಶವಂತಪುರ, ಮೆಜೆಸ್ಟಿಕ್​ನಿಂದ ಕೂಡ ದೊಡ್ಡಬಳ್ಳಾಪುರಕ್ಕೆ ರೈಲುಗಳು ಸಂಚರಿಸುತ್ತವೆ. ಬೆಂಗಳೂರಿನಿಂದ ಆಂಧ್ರ, ತೆಲಂಗಾಣಕ್ಕೆ ಹೋಗುವ ರೈಲುಗಳೆಲ್ಲಾ ದೊಡ್ಡಬಳ್ಳಾಪುರದ ಮೂಲಕವೇ ಸಂಚರಿಸಬೇಕು. ಕಾರಿನಲ್ಲೂ ದೊಡ್ಡಬಳ್ಳಾಪುರಕ್ಕೆ ಯಲಹಂಕದಿಂದ ಒಂದು ಗಂಟೆಯಲ್ಲಿ ತಲುಪಬಹುದು. ಯಲಹಂಕದಿಂದ ದೊಡ್ಡಬಳ್ಳಾಪುರಕ್ಕೆ 29 ಕಿಮೀ ದೂರ ಮಾತ್ರ. ದೊಡ್ಡಬಳ್ಳಾಪುರ ನಗರವು ದೇವನಹಳ್ಳಿ ಇಂಟರ್ ನ್ಯಾಷನಲ್ ಏರ್ ಪೋರ್ಟ್​ಗೆ ಕೇವಲ 20 ಕಿಮೀ ದೂರದಲ್ಲಿದೆ. ಏರ್ ಪೋರ್ಟ್ ಸುತ್ತಮುತ್ತ ಸಾಕಷ್ಟು ಐಟಿ ಕಂಪನಿಗಳು ಈಗ ನೆಲೆಯೂರಿವೆ. ಸಮೀಪದಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಇದೆ. ಗೀತಂ ಯೂನಿರ್ವಸಿಟಿ, ಅಮಿಟಿ ಯೂನಿರ್ವಸಿಟಿ ಕ್ಯಾಂಪಸ್ ಗಳು ಸ್ಯಾಟಲೈಟ್ ಟೌನ್​ ರಿಂಗ್ ರೋಡ್ ಪಕ್ಕದಲ್ಲೇ ಇವೆ.

ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್​ ಅಲ್ಲವೇ ಅಲ್ಲ.. RCBಗೆ ಅಸಲಿ ವಿಲನ್ ಯಾರು?

publive-image

ಇದರಿಂದ ದೊಡ್ಡಬಳ್ಳಾಪುರ ರಿಯಲ್ ಎಸ್ಟೇಟ್‌ ಬೆಲೆಗಳು ಗಗನಮುಖಿಯಾಗುತ್ತಿವೆ. ದೊಡ್ಡಬಳ್ಳಾಪುರ ಪಕ್ಕದಲ್ಲೇ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಹಾದು ಹೋಗಿದೆ. ಎಸ್‌ಟಿಆರ್‌ಆರ್ ಮೂಲಕ ಹೋದರೆ ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಕೇವಲ 20 ಕಿಮೀ ದೂರ. ಹೀಗಾಗಿ ಕನೆಕ್ಟಿವಿಟಿ ದೃಷ್ಟಿಯಿಂದ ದೊಡ್ಡಬಳ್ಳಾಪುರಕ್ಕೆ ಸಾಕಷ್ಟು ಪ್ಲಸ್ ಪಾಯಿಂಟ್​ಗಳಿವೆ.
ಜೊತೆಗೆ ಮುಖ್ಯವಾಗಿ ದೊಡ್ಡಬಳ್ಳಾಪುರ ಸಮೀಪದಲ್ಲೇ ಫಾಕ್ಸ್ ಕಾನ್ ಕಂಪನಿಯು ಆ್ಯಪಲ್ ಐ ಪೋನ್ ಅನ್ನು ಉತ್ಪಾದಿಸುವ ಘಟಕ ಆರಂಭಿಸಿದೆ. ಐಪೋನ್ ಉತ್ಪಾದನಾ ಘಟಕ ಆರಂಭವಾದ ಮೇಲೆ ದೊಡ್ಡಬಳ್ಳಾಪುರ, ರಿಯಲ್ ಎಸ್ಟೇಟ್‌ನ ಗೋಲ್ಡ್ ಮೈನ್ ಆಗಿದೆ. ಜೊತೆಗೆ ದೊಡ್ಡಬಳ್ಳಾಪುರ- ದಾಬಸ್ ಪೇಟೆ ಮಧ್ಯೆ ಕ್ವಿನ್ ಸಿಟಿ ನಿರ್ಮಿಸಲು ರಾಜ್ಯ ಸರ್ಕಾರ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದೆ. 5 ಸಾವಿರ ಎಕರೆ ಜಾಗದಲ್ಲಿ ಕ್ವಿನ್ ಸಿಟಿ ನಿರ್ಮಾಣವಾಗುವುದರಿಂದ ದೊಡ್ಡಬಳ್ಳಾಪುರದ ರಿಯಲ್ ಎಸ್ಟೇಟ್‌ ಬೆಲೆಗಳು ಏರುತ್ತಿವೆ. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ , ದೊಡ್ಡಬಳ್ಳಾಪುರಕ್ಕೆ ಅನುಕೂಲಕಾರಿಯಾಗಿದೆ.

ದೊಡ್ಡಬಳ್ಳಾಪುರದಲ್ಲಿ ಐಟಿ ಇನ್ ವೆಸ್ಟ್ ಮೆಂಟ್ ರೀಜನ್ ನಿರ್ಮಾಣಕ್ಕಾಗಿ 12ಸಾವಿರ ಎಕರೆ ಭೂಮಿಯನ್ನು ಕೆಐಎಡಿಬಿ ಈಗಾಗಲೇ ಸ್ವಾಧೀನಪಡಿಸಿಕೊಂಡಿದೆ. ಫಾಕ್ಸ್ ಕಾನ್ ಕಂಪನಿ ಬಂದ ಬಳಿಕ ಇಲ್ಲೇ ತಮ್ಮ ಕಂಪನಿ ಆರಂಭಿಸಲು ಹೂಡಿಕೆದಾರರು ಮುಗಿಬಿದ್ದಿದ್ದಾರೆ.

ಇದನ್ನೂ ಓದಿ: ಅರಮನೆ ಮೈದಾನ ಭೂ-ಸ್ವಾಧೀನ ವಿವಾದ; ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ

publive-image

30, 40 ಸೈಜ್ ಸೈಟ್​​ನಲ್ಲಿ ಮನೆ ಕಟ್ಟಿ ಬಾಡಿಗೆ ನೀಡಿದರೂ, ಒಳ್ಳೆಯ ಬಾಡಿಗೆ ಬರುತ್ತೆ. 2 ಬಿಎಚ್‌ಕೆಗೆ ಕನಿಷ್ಠ 12 ರಿಂದ 15 ಸಾವಿರ ರೂಪಾಯಿ ಬಾಡಿಗೆ ಇದೆ. 1 ಬಿಎಚ್‌ಕೆಗೆ 7-8 ಸಾವಿರ ರೂಪಾಯಿ ಬಾಡಿಗೆ ಇದೆ. ಫಾಕ್ಸ್ ಕಾನ್ ಐಪೋನ್ ಫ್ಯಾಕ್ಟರಿಯು ಕನಿಷ್ಠ 40 ಸಾವಿರ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದೆ. ಹೀಗಾಗಿ ಫಾಕ್ಸ್ ಕಾನ್ ಐಪೋನ್ ಉದ್ಯೋಗಿಗಳಿಗೆ ವಾಸಕ್ಕೆ ಮನೆಗಳು ಬೇಕೇ ಬೇಕು. ಇದರಿಂದ ದೊಡ್ಡಬಳ್ಳಾಪುರದಲ್ಲಿ ಬಾಡಿಗೆ ಮನೆಗಳಿಗೆ ಭಾರಿ ಡಿಮ್ಯಾಂಡ್ ಇದೆ. ವರ್ಷದಿಂದ ವರ್ಷಕ್ಕೆ ಮನೆ ಬಾಡಿಗೆ ದರ ಏರುತ್ತಲೇ ಇದೆ. ಯಲಹಂಕದಿಂದ ದೊಡ್ಡಬಳ್ಳಾಪುರದವರೆಗೂ ಸಾಕಷ್ಟು ಖಾಸಗಿ ಅಪಾರ್ಟ್ ಮೆಂಟ್​​ಗಳು ಈಗಾಗಲೇ ತಲೆ ಎತ್ತಿವೆ. ಇನ್ನೂ ಸೈಟ್ ವಿಷಯಕ್ಕೆ ಬರುವುದಾದರೆ ಚದರ ಅಡಿಗೆ ಮೂರೂವರೆ ಸಾವಿರ ರೂಪಾಯಿಯಿಂದ ನಾಲ್ಕೂವರೆ ಸಾವಿರ ರೂಪಾಯಿವರೆಗೂ ಸೈಟ್​ಗಳು ಮಾರಾಟವಾಗುತ್ತಿವೆ. 50 ಲಕ್ಷ ರೂಪಾಯಿಗೆ ಎಲ್ಲ ಮೂಲಸೌಕರ್ಯ ಇರುವ ಅಪ್ರೂವ್ಡ್ ಲೇಔಟ್​ಗಳಲ್ಲಿ ಸೈಟ್ ಖರೀದಿಸಬಹುದು. ದೊಡ್ಡಬಳ್ಳಾಪುರದಲ್ಲಿ ಒಳ್ಳೆಯ ಸೈಟ್​ಗೆ ಅರ್ಧ ಕೋಟಿ ಬೆಲೆ ಇದೆ. ಈಗ ಅರ್ಧ ಕೋಟಿ ಹೂಡಿಕೆ ಮಾಡಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ಸೈಟ್ ಬೆಲೆ ಒಂದು ಕೋಟಿ ದಾಟುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಇದನ್ನೂ ಓದಿ: ಕೈಕೊಟ್ಟ ಜಕೊಬ್ ಬೆಥಲ್.. ಆರ್​ಸಿಬಿಗೆ ಮತ್ತೊಬ್ಬ ಸ್ಫೋಟಕ ಬ್ಯಾಟರ್​ ಎಂಟ್ರಿ..!

publive-image

ಕೆಲವೆಡೆ ಹೊಸದಾಗಿ ನಿರ್ಮಾಣವಾಗುತ್ತಿರುವ ಲೇಔಟ್ ಗಳಲ್ಲಿ ಸ್ಪಲ್ಪ ಕಡಿಮೆ ಬೆಲೆಗೂ ಸೈಟ್​ಗಳು ಸಿಗುತ್ತಿವೆ. ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್, ರಿಯಲ್ ಎಸ್ಟೇಟ್ ಹಿನ್ನೆಲೆಯಿಂದ ಬಂದವರಾಗಿದ್ದು, ಈಗಲೂ ಲೇಔಟ್ ನಿರ್ಮಿಸಿ ಜನರಿಗೆ ಮಾರುತ್ತಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಕೆಲವೆಡೆ ಭೂ-ವಿವಾದ ಇರುವ ಲೇಔಟ್​ಗಳಿವೆ. ಹೀಗಾಗಿ ಸೈಟ್ ಖರೀದಿಗೂ ಮುನ್ನ ವಕೀಲರಿಂದ ಸೈಟ್​ನ ಕಾಗದ ಪತ್ರಗಳನ್ನು ಚೆನ್ನಾಗಿ ಪರಿಶೀಲಿಸಿ, ಕಾನೂನು ಸಲಹೆ ಪಡೆದು ಖರೀದಿಸುವುದು ಉತ್ತಮ.
ದೊಡ್ಡಬಳ್ಳಾಪುರವು ಬೆಂಗಳೂರು ಇಂಟರ್ ನ್ಯಾಷನಲ್ ಏರ್​ಪೋರ್ಟ್ ಏರಿಯಾ ಪ್ಲ್ಯಾನಿಂಗ್ ಅಥಾರಿಟಿ ವ್ಯಾಪ್ತಿಯಲ್ಲಿದೆ.

ಇದನ್ನೂ ಓದಿ: ‘ಸರ್ಪ್ರೈಸ್ ಕೊಡ್ತೀನಿ ಕಣ್ಣು ಮುಚ್ಚಿಕೋ ಅಂದ, ಆಮೇಲೆ ನೋಡಿದ್ರೆ..’ ನಟ ಮನು ಬಗ್ಗೆ ಸಂತ್ರಸ್ತೆ ಮತ್ತಷ್ಟು ಆರೋಪ

publive-image

ಹೀಗಾಗಿ ಬಯ್ಯಪ್ಪಾ ಅಪ್ರೂವ್ಡ್ ಲೇಔಟ್ ಗಳಲ್ಲೇ ಸೈಟ್ ಖರೀದಿಸಿ. ಕಂದಾಯ ಸೈಟ್​ಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬೇಡಿ. ಕಂದಾಯ ಸೈಟ್ ಗಳನ್ನು ಈಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟ್ರಾರ್ ಮಾಡಲ್ಲ. ಜೊತೆಗೆ ಕಂದಾಯ ಲೇಔಟ್, ಸೈಟ್​ಗಳನ್ನು ರಾಜ್ಯ ಸರ್ಕಾರದಿಂದ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಈಗಾಗಲೇ ಹೇಳಿದ್ದಾರೆ. ರೆವಿನ್ಯೂ ಸೈಟ್ ಖರೀದಿಸಿದರೆ ನಿಮ್ಮ ಹಣವನ್ನು ಕಳೆದುಕೊಳ್ಳಬೇಕಾಗುತ್ತೆ, ಸೈಟು ಸಿಗಲ್ಲ. ನಿಮ್ಮ ಸುಖ, ಶಾಂತಿ, ನೆಮ್ಮದಿಯೂ ಹಾಳಾಗುತ್ತೆ.

ವಿಶೇಷ ವರದಿ: ಚಂದ್ರಮೋಹನ್, ನ್ಯಾಷನಲ್ ಬ್ಯೂರೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment