/newsfirstlive-kannada/media/post_attachments/wp-content/uploads/2025/01/SHOWER-BATH.jpg)
ಸ್ನಾನ ಧ್ಯಾನ ಇದು ನಿತ್ಯ ಮಾಡುವುದರಿಂದ ಒಂದು ಮನಸ್ಸನ್ನು ನಿರ್ಮಲಗೊಳಿಸಿದರೆ ಮತ್ತೊಂದು ದೇಹವನ್ನು ನಿರ್ಮಲಗೊಳಿಸುತ್ತದೆ ಅನ್ನೊದು ಹಿಂದಿನಿಂದನಲು ಹೇಳಿಕೊಂಡು ಬಂದಿರುವ ಮಾತುಗಳು. ಆದ್ರೆ ಚಳಿಗಾಲ ಅಂತ ಬಂದಾಗ ಮೈಯನ್ನು ನೀರಿಗೆಯೊಡ್ಡಲು ಮನಸ್ಸು ಸಿದ್ಧಗೊಳ್ಳುವುದೇ ಇಲ್ಲ. ಯಾವುದೋ ಒಂದು ಆಲಸ್ಯ. ದೇಹವನ್ನು ಯಾರೋ ತಳ್ಳಿಕೊಂಡು ಹೋದಂತೆ ನಾವು ಸ್ನಾನಗೃಹಕ್ಕೆ ಹೋಗಿ ಸ್ನಾನವನ್ನು ಮಾಡುತ್ತೇವೆ. ಅಂತಹ ಕೊರೆಯುವ ಚಳಿ ಈ ಬಾರಿ ನಾವು ಅನುಭವಿಸುತ್ತಿದ್ದೇವೆ. ಆದ್ರೆ ಚಳಿಗಾಲದಲ್ಲಿ ಸ್ನಾನ ಮಾಡುವ ವಿಚಾರವಾಗಿ ಒಂದು ಗುಡ್ನ್ಯೂಸ್ ಬಂದಿದೆ. ಇದನ್ನು ನೀವು ನಿಮ್ಮ ಸ್ನೇಹಿತರ ಹತ್ತಿರುವೂ ಕೂಡ ಶೇರ್ ಮಾಡಿಕೊಳ್ಳಬಹುದು. ಆ ಗುಡ್ನ್ಯೂಸ್ ಇನ್ಸ್ಟಾಗ್ರಾಮ್ನ ಒಂದು ವಿಡಿಯೋದಲ್ಲಿ ಶೇರ್ ಆಗಿದೆ.
ಇದನ್ನೂ ಓದಿ:ಅಘೋರಿಗಳ ನಿಗೂಢ ಲೋಕ; ಇವರ ಬದುಕಿನ ಕ್ರಮ ಹೇಗೆ? ನಾಗಾ ಬಾಬಾಗಳಿಗಿಂತ ಹೇಗೆ ಭಿನ್ನ?
View this post on Instagram
ಶೇರ್ ಆಗಿರುವ ವಿಡಿಯೋದಲ್ಲಿ ಡಾ ರೆಬೆಕ್ಕಾ ಪಿಂಟೋ ಎಂಬುವವರು ಚಳಿಗಾಲದಲ್ಲಿ ಸ್ನಾನ ಮಾಡದೇ ಇರುವುದು ಕೆಟ್ಟದ್ದೆನಲ್ಲಾ ಇದರಿಂದ ನಿಮ್ಮ ಜೀವಿತಾವಧಿ ಅಂದ್ರೆ ಆಯಸ್ಸು ಶೇಕಡಾ 34 ರಷ್ಟು ಹೆಚ್ಚುತ್ತದೆ ಎಂದು ಹೇಳುತ್ತಾರೆ. ವಿಡಿಯೋದ ನೋಡಲು ಚೆನ್ನಾಗಿದೆ ಹಾಗೂ ಹೇಳುತ್ತಿರುವುದು ಸತ್ಯ ಎಂದು ನಂಬುವಂತಿದೆ. ಇನ್ಸ್ಟಾಗ್ರಾಮ್ನಲ್ಲಿ ಒಟ್ಟು 66 ಲಕ್ಷ ವೀವ್ಸ್ ಪಡೆದಿದೆ ಆದ್ರೆ ಎಲ್ಲರೂ ಕೂಡ ಇದನ್ನು ಕಣ್ಮುಚ್ಚಿಕೊಂಡು ಒಪ್ಪಿಕೊಂಡಿಲ್ಲ. ಅನೇಕ ಸೋಷಿಯಲ್ ಮೀಡಿಯಾ ಬಳಕೆದಾರರು ಈ ಒಂದು ವಿಡಿಯೋಗೆ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಈ ಹೇಳಿಕೆಯ ಹಿಂದೆ ಯಾವುದಾದರೂ ಸಂಶೋಧನೆ ಇದೆಯಾ ಎಂದು ಕೇಳಿದ್ದಾರೆ. ಒಂದು ವೇಳೆ ಇದ್ದಿದ್ದೇ ಆದಲ್ಲಿ ಅದನ್ನು ಶೇರ್ ಮಾಡಿ. ಈ ತರಹದ ಹೇಳಿಕೆಗಳನ್ನು ನೀಡುವ ಮೊದಲು ಅದರ ಹಿಂದೆ ನಡೆದಿರುವ ಸಂಶೋಧನೆಗಳನ್ನು ಮುಂದಿಟ್ಟು ಮಾತನಾಡುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಗೃಹ ರಕ್ಷಕ ಸಿಬ್ಬಂದಿಗೆ ಬಿಗ್ ಶಾಕ್.. ಕೆಲಸ ಕಳೆದುಕೊಳ್ಳಲಿರುವ 1,000 ಹೋಮ್ ಗಾರ್ಡ್ಸ್
ತಜ್ಞರು ಏನು ಹೇಳ್ತಾರೆ?
ತಜ್ಞರು ಹೇಳುವ ಪ್ರಕಾರ ಚಳಿಗಾದಲ್ಲಿ ಪದೇ ಪದೇ ಸ್ನಾನ ಮಾಡುವುದರಿಂದ ಅನೇಕ ಸೂಕ್ಷ್ಮ ಜೀವಿಗಳು ಚರ್ಮಕ್ಕೆ ಹಾನಿಯನ್ನು ಮಾಡಬಲ್ಲವು. ಚಳಿಗಾಲದಲ್ಲಿ ಆಗಾಗ ಸ್ನಾನವನ್ನು ಸ್ಕಿಪ್ ಮಾಡುವುದರಿಂದಲೂ ಕೂಡ ಅಪಾಯವಿದೆ ಎಂದು ಹೇಳಿದ್ದಾರೆ.
ಬಿಜಿಎಸ್ ಆಸ್ಪತ್ರೆಯ ವೈದ್ಯ ಡಾ ಬಾಲಕೃಷ್ಣನ್ ಅವರು ಹೇಳುವ ಪ್ರಕಾರ ಚಳಿಗಾಲದಲ್ಲಿ ಸ್ನಾನವನ್ನು ಬಿಡುವುದರಿಂದ ಶೇಕಡಾ 34 ರಷ್ಟು ಆಯಸ್ಸು ವೃದ್ಧಿಯಾಗುತ್ತೆ ಅನ್ನೋದು ವೈಜ್ಞಾನಿಕವಾಗಿ ಸಾಬೀತುಪಡಿಸಲು ಕೊರತೆ ಇರುವ ಸತ್ಯಗಳು. ಈ ರೀತಿ ಸ್ನಾನವನ್ನು ಸ್ಕಿಪ್ ಮಾಡುವುದರಿಂದ ಸೋಂಕುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ