/newsfirstlive-kannada/media/post_attachments/wp-content/uploads/2025/02/DOOMSCROLLING.jpg)
ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಕೈ ಮೊದಲು ಹೋಗುವುದೇ ನಿಮ್ಮ ಮೊಬೈಲ್ನತ್ತ. ಯಾರು ಯಾವ ಸ್ಟೇಟಸ್ ಹಾಕಿದ್ದಾರೆ ಎಂದು ನೋಡುತ್ತ ಆಮೇಲೆ ರೀಲ್ಸ್ಗಳ ಮೇಲೆ ಕೈ ಸರಿದಾಡಲು ಆರಂಭಿಸುತ್ತದೆ. ಕೂಡಲೇ ಒಂದು ಬ್ರೇಕಿಂಗ್ ನ್ಯೂಸ್ ಬರುತ್ತದೆ. ಅದು ನಿಮ್ಮ ಇಡೀ ಗಮನವನ್ನು ಸೆಳೆಯುತ್ತದೆ. ನೀವು ಅದನ್ನು ಮಿಸ್ ಮಾಡಲು ಬಯಸುವುದಿಲ್ಲ.
ಹೀಗೆ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಬೆರಳು ಒಂದಾದ ನಂತರ ಮತ್ತೊಂದು ರೀಲ್ಸ್ ಇಲ್ಲವೇ ನ್ಯೂಸ್ನತ್ತ ಸರಿದಾಡುತ್ತಲೇ ಇರುತ್ತದೆ. ಕೆಲವು ಮೀಡಿಯಾ ಪೋಸ್ಟ್ಗಳು ನಿಮ್ಮನ್ನು ಬಿಲದೊಳಗೆ ಸಿಲುಕಿದ ಮೊದಲಂತೆ ಮಾಡಿ ಹಾಕುತ್ತವೆ. ಇಡೀ ದಿನ ಅದೇ ಚಿಂತೆಯಲ್ಲಿ ಕೊರುಗುವ ಅಥವಾ ವಿಚಲಿತಗೊಳ್ಳುವಂತೆ ಮಾಡುತ್ತದೆ. ಈ ಕೊನೆಯಿಲ್ಲದ ಅಪ್ಡೇಟ್ಸ್ಗಳು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತವೆ.ಹೀಗೆ ನಿತ್ಯವೂ ನಾವು ಮೊಬೈಲ್ ಸ್ಕ್ರೀನ್ ಮೇಲೆ ಬೆರಳು ಸರಿದಾಡಿಸುವ ಗೀಳಿಗೆ ಈಗ ಡೂಮ್ಸ್ಕ್ರೋಲಿಂಗ್ ಗೀಳು ಎಂಬ ಹೊಸ ಹೆಸರು ಬಂದಿದೆ.
ಇದನ್ನೂ ಓದಿ: ಬೆಳಗ್ಗೆ ಎದ್ದ ಕೂಡಲೇ ಸ್ಮಾರ್ಟ್ಫೋನ್ ನೋಡುತ್ತೀರಾ? ಈ ಸಮಸ್ಯೆ ಕಾಡುತ್ತೆ ಹುಷಾರ್!
ನಮಗರಿವಿಲ್ಲದಂತೆಯೇ ನಾವು ಸ್ಕ್ರೀನ್ನಲ್ಲಿ ಸ್ಕ್ರೋಲ್ ಮಾಡುತ್ತಾ ಸಮಯದ ಪರಿವು ಇಲ್ಲದೇ ಕಳೆದು ಹೋಗುವ ಗೀಳನ್ನು ಡೂಮ್ಸ್ಕ್ರೋಲಿಂಗ್ ಎನ್ನಲಾಗುತ್ತದೆ. ಕೋವಿಡ್ ಮಹಾಮಾರಿಗಿಂತ ಮೊದಲು ಇದರ ಪ್ರಮಾಣ ಕಡಿಮೆಯಾಗಿತ್ತು. ಆದ್ರೆ ಈಗ ನಾವೆಲ್ಲರೂ ಡೂಮ್ಸ್ಕ್ರೋಲರ್ಗಳಾಗಿ ಬದಲಾಗಿದ್ದೇವೆ. ಜಾಗತಿಕ ಸಂಶೋಧನೆಯ ಪ್ರಕಾರ ನಾವು ನಿತ್ಯ ಸುಮಾರು 6 ಗಂಟೆ 35 ನಿಮಿಷಗಳನ್ನು ಮೊಬೈಲ್ ಫೋನ್ಗಳೊಂದಿಗೆ ಕಳೆಯುತ್ತಿದ್ದೇವೆ. ಸ್ವಲ್ಪ ಕಲ್ಪಿಸಿಕೊಳ್ಳಿ ದಿನಕ್ಕೆ 6 ಗಂಟೆ 35 ನಿಮಿಷ ಅಂದ್ರೆ ನಮ್ಮ ಮೊಬೈಲ್ ನಮ್ಮ ಸಮಯವನ್ನು ಎಷ್ಟು ನುಂಗಿಹಾಕುತ್ತಿದೆ ಎಂದು.
ಈ 6 ಗಂಟೆ 35 ನಿಮಿಷಗಳಲ್ಲಿ ನಾವು ಅತಿಹೆಚ್ಚು ಸಮಯ ಕಳೆಯುವುದೇ ಈ ಡೂಮ್ಸ್ಕ್ರೋಲಿಂಗ್ನಲ್ಲಿ ಎಂದು ಅಧ್ಯಯನಗಳು ಹೇಳುತ್ತಿವೆ. ಅಂದ್ರೆ ವಾರಕ್ಕೆ 46 ಗಂಟೆ, 184 ಗಂಟೆ ಒಂದು ತಿಂಗಳಿಗೆ ನಾವು ನಮ್ಮನ್ನು ಮೊಬೈಲ್ಗೆ ಅರ್ಪಿಸಿಕೊಂಡಿದ್ದೇವೆ.ನೀವು ಇವರಲ್ಲಿ ಅಲ್ಲ ಅಂದುಕೊಳ್ಳಿ, ದಿನಕ್ಕೆ ಕೇವಲ ಅರ್ಧ ಗಂಟೆ ನಾನು ಮೊಬೈಲ್ನಲ್ಲಿ ಕಳೆಯುತ್ತೇನೆ ಎಂದುಕೊಂಡರು ಕೂಡ ಅದು ವಾರಕ್ಕೆ 15 ಗಂಟೆಗಳನ್ನು ನಿಮ್ಮಿಂದ ನುಂಗುತ್ತಲಿದೆ ಎಂದೇ ಅರ್ಥ.
ಇದನ್ನೂ ಓದಿ: ನಿಮ್ಮ ಮಕ್ಕಳು ಅತೀ ಹಠಮಾರಿಯಾ..? ಅವರನ್ನು ಸುಧಾರಿಸುವುದು ಹೇಗೆ? ಇಲ್ಲಿವೆ ಉಪಾಯಗಳು!
ನೆನಪಿರಲಿ ಇಡೀ ಜಗತ್ತಿಗೆ ಇದೊಂದು ಅಪಾಯಕಾರಿ ಗೀಳು. ಅನಾಹುತಗಳನ್ನು ತರಬಲ್ಲದು ಅದು ಹೇಗೆ ಎಂದರೆ ಅನೇಕ ರೀತಿಯ ಸಮಸ್ಯೆಗಳು ನಮ್ಮನ್ನು ಕಾಡಲು ಶುರುಮಾಡುತ್ತವೆ. ಡೂಮ್ಸ್ಕ್ರೋಲಿಂಗ್ನಿಂದಾಗಿ ಒತ್ತಡ, ಆತಂಕ, ಖಿನ್ನತೆಗಳು ಆವರಿಸುವ ಸಾಧ್ಯತೆಗಳಿವೆ. ಕುತ್ತಿಗೆ ನೋವು, ಕಳಪೆ ಗುಣಮಟ್ಟದ ನಿದ್ರೆ, ಹೀಗಾಗಿ ನಾವು ಹಾಸಿಗೆಗೆ ಹೋಗುವ ಒಂದು ಗಂಟೆ ಮೊದಲು ಮೊಬೈಲ್ನ್ನು ದೂರ ಇಡುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಿದ್ದಾರೆ. ಇದರಿಂದ ದೇಹಕ್ಕೆ ಕೊಂಚ ವಿಶ್ರಾಂತಿ ಸಿಕ್ಕಂತೆ ಆಗುತ್ತದೆ. ಇಲ್ಲವಾದಲ್ಲಿ ನಿಮಗೆ ಬೆಳಗ್ಗೆ ಆತಂಕ ಹಾಗೂ ಒತ್ತಡದಂತಹ ಸಮಸ್ಯೆಗಳು ಕಾಡಲು ಶುರುವಾಗುತ್ತವೆ.
ಡೂಮ್ಸ್ಕ್ರೋಲಿಂಗ್ ವೈಕೋರಿಯಸ್ ಟ್ರೋಮಾವನ್ನು ಕೂಡ ಹೆಚ್ಚಿಸುತ್ತಿದೆ. ಒಂದು ವೇಳೆ ನಿಮ್ಮ ಮನಸ್ಸನ್ನು ವಿಚಲಿತಗೊಳಿಸುವ ಸುದ್ದಿಯನ್ನು ನೀವು ಆರಾಮದಾಯಕವಾಗಿ ಸ್ವೀಕರಿಸಿದರೆ ಅದು ಸರಿ. ಆದ್ರೆ ಅದನ್ನು ಪದೇ ಪದೇ ನೋಡಿ ಆಘಾತಕ್ಕೆ ಒಳಗಾಗುವುದನ್ನ ವೈಕೋರಿಯಸ್ ಟ್ರೋಮಾ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಅದಕ್ಕೆ ದೊಡ್ಡ ಉದಾಹರಣೆ ಅಂದ್ರೆ ನಿಮಗೆ ನೆನಪಿರಬೇಕು 2001ರಲ್ಲಿ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಎರಡು ವಿಮಾನಗಳು ಡಿಕ್ಕಿ ಹೊಡೆದು ದೊಡ್ಡ ಅನಾಹುತ ಸೃಷ್ಟಿಸಿದ್ದವು. ಆ ಒಂದು ಘಟನೆಯನ್ನು ನೋಡಿದವರಿಗೆ ಅದು ತುಂಬಾ ಆಘಾತಕಾರಿ ದೃಶ್ಯ. ಮನಸ್ಸನ್ನು ಕಲಕಿ ಹಾಕುತ್ತದೆ. ಈ ಒಂದು ದೃಶ್ಯವನ್ನು ಸುಮಾರು 200 ಕೋಟಿಗೂ ಅಧಿಕ ಜನರು ಟಿವಿಯಲ್ಲಿ ನೋಡಿದ್ದಾರೆ. ಇದರಿಂದ ಅವರ ಮೇಲೆ ಅಂತಹದೊಂದು ಮಾನಸಿಕ ಆಘಾತವಾಗಿಲ್ಲ. ಆದ್ರೆ ಈಗ ಅದನ್ನು ಅತಿಯಾಗಿ ಪದೇ ಪದೇ ನೋಡುವ ಗೀಳು ನಿಮ್ಮಲ್ಲಿ ಬೆಳೆಯಿತು ಎಂದುಕೊಳ್ಳಿ, ಆ ದೃಶ್ಯಗಳು ನಿಮ್ಮನ್ನು ಮಾನಸಿಕವಾಗಿ ವಿಚಲಿತಗೊಳಿಸಿತು ಎಂದುಕೊಳ್ಳಿ ನಿಮ್ಮಲ್ಲಿ ಪೋಸ್ಟ್ ಟ್ರೊಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ ಅಂದ್ರೆ ಪಿಟಿಎಸ್ಡಿ ಯಂತಹ ಮಾನಸಿಕ ಕಾಯಿಲೆಯನ್ನು ಹೆಚ್ಚುಗೊಳಿಸುತ್ತದೆ.
ಈಗ ಟಿವಿಯ ಕಾಲ ಮುಗಿದಿದೆ, ಮೊಬೈಲ್ ಕಾಲ ಹಾಗೂ ಗೀಳಿನ ಸಮಯ ಬಂದಿದೆ. ಇಲ್ಲಿ ನಾವು ನಮ್ಮನ್ನು ವಿಚಲಿತಗೊಳಿಸುವ ಅನೇಕ ವಿಡಿಯೋಗಳನ್ನು ಪದೇ ಪದೇ ನೋಡಿ ನಮ್ಮನ್ನು ನಾವು ಅಪಾಯಕ್ಕೆ ತಳ್ಳಿಕೊಳ್ಳುತ್ತಿದ್ದೇವೆ.ಹೀಗಾಗಿ ಇದರಿಂದ ಹೊರಗೆ ಬರುವುದು ಹೇಗೆ? ನಮ್ಮ ಮೆದುಳನ್ನು ಮತ್ತೆ ಫ್ರೆಶ್ ಮಾಡಿಕೊಳ್ಳುವುದು ಹೇಗೆ? ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಡಿಜಿಟಲ್ ಗೀಳು ಇರುತ್ತದೆ. ಆದರೂ ಇದಕ್ಕೆ ಕೆಲವು ಪರಿಹಾರಗಳಿವೆ.
ಇದನ್ನೂ ಓದಿ:ಹಸು, ಎಮ್ಮೆ ಹಾಲಿಗಿಂತ ಜಿರಳೆ ಹಾಲು ಬೆಸ್ಟ್.. ಆರೋಗ್ಯಕ್ಕೆ ಹೇಗೆಲ್ಲಾ ಉಪಯೋಗ ಆಗುತ್ತೆ ಇದು?
ಈ ಪರಿಹಾರಗಳಲ್ಲಿ ಅತಿದೊಡ್ಡ ಸವಾಲು ಎಂದರೆ ನೀವು ನಿಮ್ಮ ಎಲ್ಲಾ ಸೋಷಿಯಲ್ ಮೀಡಿಯಾ ಆ್ಯಪ್ಗಳನ್ನು ಡಿಲೀಟ್ ಮಾಡಬೇಕು. ಇದು ಸ್ವಲ್ಪ ಅಸಾಧ್ಯವೆನಿಸಿದರೆ ದಿನಕ್ಕೆ ಇಷ್ಟು ಸಮಯ ಮಾತ್ರ ನಾನು ಮೊಬೈಲ್ನೊಂದಿಗೆ ಕಳೆಯುತ್ತೇನೆ ಎಂದು ಸಮಯ ನಿಗದಿಪಡಿಸಿಕೊಳ್ಳಿ. ಆ್ಯಪ್ಗಳಿಂದ ಬರುವ ನೋಟಿಫಿಕೇಷನ್ಗಳನ್ನು ಕಡಿಮೆ ಮಾಡಿ. ನೋಟಿಫಿಕೇಷನ್ ಆಫ್ ಮಾಡುವುದು ಒಳ್ಳೆಯದು. ನಿಮ್ಮ ನಿತ್ಯ ದಿನದ ಚಟುವಟಿಕೆಗಳನ್ನು ಮರುವಿನ್ಯಾಸ ಮಾಡಿಕೊಳ್ಳಿ ಅಂದ್ರೆ ಬದಲಾಯಿಸಿಕೊಳ್ಳಿ. ಮಲಗುವಾಗ ಮೊಬೈಲ್ ಹಿಡಿಯುವುದಿಲ್ಲ ಎಂದು ನಿರ್ಧಾರ ಮಾಡಿ. ಅದಕ್ಕಿಂತ ಹೆಚ್ಚಾಗಿ ಡೂಮ್ಸ್ಕ್ರೋಲ್ ನಮ್ಮನ್ನು ಸರ್ವನಾಶದತ್ತ ಒಯ್ಯುತ್ತಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ