ಹಾವಿನಿಂದ ಮನೆ ಮಾಲೀಕರ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ.. ಹಾಸನದಲ್ಲಿ ಮನಮಿಡಿಯುವ ದೃಶ್ಯ ಸೆರೆ!

author-image
admin
Updated On
ಹಾವಿನಿಂದ ಮನೆ ಮಾಲೀಕರ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ.. ಹಾಸನದಲ್ಲಿ ಮನಮಿಡಿಯುವ ದೃಶ್ಯ ಸೆರೆ!
Advertisment
  • ಮಾಲೀಕರು, ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಭೀಮಾ!
  • ಸುಮಾರು 12 ಅಡಿ ಹಾವನ್ನು 10 ಪೀಸ್, ಪೀಸ್‌ ಮಾಡಿದ ಶ್ವಾನ
  • ಹಾವಿನೊಂದಿಗೆ ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಟ

ಹಾಸನ: ಕೇಳಿದ್ದು ಸುಳ್ಳಾಗಬಹುದು. ನೋಡಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು. ಕನ್ನಡ ರಾಮ-ಲಕ್ಷ್ಮಣ ಚಿತ್ರದ ಈ ಹಾಡು ನೋಡಿದವರಿಗೆ ಈ ಘಟನೆ ಮನ ಮಿಡಿಯವಂತೆ ಮಾಡುತ್ತದೆ. ಹಾಸನದಲ್ಲಿ ಕೆಲಸಗಾರರು ಹಾಗೂ ಮನೆ ಮಾಲೀಕರ ಜೀವ ಉಳಿಸಿರೋ ಭೀಮಾ ಹೆಸರಿನ ಈ ಶ್ವಾನ ಪ್ರಾಣ ಬಿಟ್ಟಿದೆ.

ಹಾಸನ ತಾಲ್ಲೂಕಿನ ಕಟ್ಟಾಯ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ಶಮಂತ್ ಎಂಬ ವ್ಯಕ್ತಿ ತಮ್ಮ ತೋಟದ ಮನೆಯಲ್ಲಿ ಪಿಟ್‌ಬುಲ್ ಹಾಗೂ ಡಾಬರ್‌ಮನ್ 2 ನಾಯಿಗಳನ್ನು ಸಾಕಿದ್ದರು.

ಇವರ ಮನೆಯ ಬಳಿ ಮಕ್ಕಳು ಆಟವಾಡುತ್ತಿದ್ದರು. ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಒಂದು ಕಾಳಿಂಗ ಸರ್ಪ ಬಂದಿದೆ. ಮನೆಯ ಕಡೆಗೆ ಬಂದ ಕಾಳಿಂಗ ಸರ್ಪ, ಮಕ್ಕಳು ಆಟ ಆಡುವುದನ್ನು ಕಂಡು ತೆಂಗಿನಗರಿಗಳ ಕೆಳಗೆ ಹೋಗಿದೆ.

publive-image

ಸುಮಾರು 12 ಅಡಿ ಹಾವನ್ನು ಪಿಟ್‌ಬುಲ್ ಹಾಗೂ ಡಾಬರ್‌ಮನ್ ನಾಯಿಗಳು ನೋಡಿವೆ. ತೆಂಗಿನ ಗರಿ ಕೆಳಗೆ ಇದ್ದ ಹಾವನ್ನು ಎಳೆದು ಹಾವಿನೊಂದಿಗೆ ಸೆಣಸಾಡಿವೆ. ಈ ವೇಳೆ ಪಿಟ್‌ಬುಲ್ ನಾಯಿಯ ಮುಖದ ಭಾಗಕ್ಕೆ ಒಂದು ಬಾರಿ ಕಾಳಿಂಗ ಸರ್ಪ ಕಚ್ಚಿದೆ.

ಇದನ್ನೂ ಓದಿ: ಡಿ.ಕೆ ಶಿವಕುಮಾರ್‌ಗೆ ಬಿಗ್ ಶಾಕ್.. ಡಿಸಿಎಂ ದೊಡ್ಡ ಕನಸಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ; ಆಗಿದ್ದೇನು? 

ಹಾವಿನೊಂದಿಗೆ ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಪಿಟ್‌ಬುಲ್ ನಾಯಿ ರೋಚಕವಾಗಿ ಸೆಣಸಾಡಿದೆ. ಕೊನೆಗೆ 12 ಅಡಿ ಸರ್ಪವನ್ನು 10 ಪೀಸ್ ಮಾಡಿ ಕೊಂದು ಭೀಮಾ ಹೆಸರಿನ ಪಿಟ್‌ಬುಲ್ ಶ್ವಾನ ಪ್ರಾಣ ಬಿಟ್ಟಿದೆ.
ಶ್ವಾನಗಳು ಹಾಗೂ ಹಾವಿನ ಸೆಣಸಾಟದ ದೃಶ್ಯ ಸೆರೆಯಾಗಿದ್ದು, ನೆಚ್ಚಿನ ಸಾಕು ನಾಯಿ ಕಳೆದುಕೊಂಡ ಶಮಂತ್ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಈ ಪಿಟ್‌ಬುಲ್ ಶ್ವಾನ ಹಲವೆಡೆ ಡಾಗ್ ಶೋನಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿತ್ತು. ಕಾಳಿಂಗ ಸರ್ಪವನ್ನು ಕೊಂದು ತನ್ನ ಮಾಲೀಕರಿಗಾಗಿ ತನ್ನ ಪ್ರಾಣ ಕಳೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment