/newsfirstlive-kannada/media/post_attachments/wp-content/uploads/2025/02/british-mastiff.jpg)
ವಿಶಾಖಪಟ್ಟಣಂನ ರಸ್ತೆಯಲ್ಲಿ ಓಡುತ್ತಿರುವ ಜೀಪ್ ಮೇಲೆ ನಿಂತಿದ್ದ ಪ್ರಾಣಿಯನ್ನು ಕಂಡ ಜನರು ಕೊಂಚ ನಿಮಿಷಗಳ ಕಾಲ ಅವಕ್ಕಾಗಿದ್ದರು. ವಿಚಲಿತರಾಗಿದ್ದರು. ಜೀಪ್ ಮೇಲೆ ನಿಂತಿರುವುದು ಸಿಂಹವಾ ಇಲ್ಲ ಶ್ವಾನವಾ ಎನ್ನುವ ಅನುಮಾನ ಅವರಲ್ಲಿ ವ್ಯಕ್ತಿವಾಗಿತ್ತು. ಹಾಗಿದ್ರೆ ಅಸಲಿಗೆ ಜೀಪ್ ಬ್ಯಾನೆಟ್ಮೇಲೆ ನಿಂತಿದ್ದ ಆ ಪ್ರಾಣಿ ಯಾವುದು? ಸಿಂಹವಾ, ಶ್ವಾನವಾ?
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ವಿಶಾಖಪಟ್ಟಣಂ ಪ್ರಮುಖ ಬೀದಿಯಲ್ಲಿ ಒಬ್ಬರು ತಾವು ಸಾಕಿದ ಬ್ರಿಟಿಷ್ ಮಿಸ್ಟಿಫ್ ಬ್ರೀಡ್ ಶ್ವಾನವನ್ನು ಜೀಪ್ನ ಬ್ಯಾನೆಟ್ಮೇಲೆ ಕಟ್ಟಿಕೊಂಡು ಹೋಗುತ್ತಿದ್ದರು. ಮೊದಲೇ ಜನಜಂಗುಳಿಯಿಂದ ಕೂಡಿದ ರಸ್ತೆ. ಈ ಶ್ವಾನವು ನೋಡಲು ಅಕ್ಷರಶಃ ಸಿಂಹದಂತೆಯೇ ಕಾಣುತ್ತದೆ. ಹೀಗಾಗಿ ಜನರು ಕೆಲ ಕ್ಷಣ ಗೊಂದಲಕ್ಕೆ ಈಡಾಗಿದ್ದರು. ಇದು ನಾಯಿಯೋ ಸಿಂಹವೋ ಎಂಬ ಅನುಮಾನ ಕಾಡತೊಡಗಿತು. ಹತ್ತಿರ ಬಂದು ನೋಡಿದವರಿಗೆ ಇದು ಶ್ವಾನ ಎಂಬುದು ಕನ್ಫರ್ಮ್ ಆದ ಮೇಲೆ ಅದರ ಫೋಟೋಗಳನ್ನು ತೆಗೆದುಕೊಳ್ಳಲು ಆರಂಭಿಸಿದರು.
ಇದನ್ನೂ ಓದಿ:ಸಮಂತಾ ಬಗ್ಗೆ ಮೊದಲ ಬಾರಿ ನಾಗ ಚೈತನ್ಯ ಪ್ರತಿಕ್ರಿಯೆ.. ನನ್ನ ಹೆಂಡ್ತಿ ನಿಜವಾದ ಹೀರೋ- ಟಾಲಿವುಡ್ ಸ್ಟಾರ್
ಮದೀನಾವಾಲಿ ಸಿಂಕಲಿ ಎಂಬುವವರು ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ಈ ವಿಡಿಯೋವನ್ನು ಸುಮಾರು 1.8 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. ವಿಡಿಯೋದಲ್ಲಿ ಈಗಾಗಲೇ ಹೇಳಿದಂತೆ ಜೀಪ್ನ ಬ್ಯಾನೆಟ್ಮೇಲೆ ಶ್ವಾನ ನಿಂತಿದೆ. ಡ್ರೈವರ್ ಸೀಟ್ನಲ್ಲಿ ಕುಳಿತ ವ್ಯಕ್ತಿ ಅದರ ಕುತ್ತಿಗೆ ಬಿಗಿದಿದ್ದ ಪಟ್ಟಿಯನ್ನು ಹಿಡಿದುಕೊಂಡು ಡ್ರೈವ್ ಮಾಡುತ್ತಿದ್ದಾನೆ. ಶ್ವಾನವನ್ನು ನೋಡಿದ ಜನರು ಸಿಂಹವೊಂದು ಹೀಗೆ ಜೀಪ್ ಮೇಲೆ ನಿಂತುಕೊಂಡು ಪ್ರಯಾಣ ಮಾಡುತ್ತಿದೆ ಎಂದು ಆರಂಭದಲ್ಲಿ ನಂಬಿದ್ದರು ಆ ನಂತರ ಅವರಿಗೆ ಇದು ಸಿಂಹವಲ್ಲ ಶ್ವಾನ ಎಂದು ಗೊತ್ತಾಗಿದೆ.
View this post on Instagram
ಇದನ್ನೂ ಓದಿ: ಪ್ರಪೋಸಲ್ನ್ನ ತಿರಸ್ಕರಿಸಿದ ಯುವತಿಗೆ ಪ್ರೇಮಿ ಮಾಡಿದ್ದೇನು? ವಿಡಿಯೋ ನೋಡಿದ್ರೆ ದಂಗಾಗಿ ಹೋಗ್ತೀರಾ?
ಯಾವಾಗ ಶ್ವಾನ ಎಂದು ಗೊತ್ತಾಯಿತೋ ಅಲ್ಲಿ ನೆರೆದಿದ್ದ ಜನರು ತಮ್ಮ ಜೇಬಿನಲ್ಲಿದ್ದ ಮೊಬೈಲ್ನ್ನು ತೆಗೆದು ಅದರೊಂದಿಗೆ ಫೋಟೋ ತೆಗೆದುಕೊಳ್ಳುವುದು, ವಿಡಿಯೋ ಮಾಡಿಕೊಳ್ಳುವುದು ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ