newsfirstkannada.com

ಮಾಲೀಕನ ಜೀವ ಉಳಿಸಿದ ಶ್ವಾನ.. ಹಿಮಪಾತಕ್ಕೆ ಸಿಲುಕಿ ಬದುಕಿ ಬಂದದ್ದೇ ದೊಡ್ಡದು..!

Share :

Published January 26, 2024 at 12:45pm

    ವಾಕಿಂಗ್ ಹೋದಾಗ ಕಾಲು ಜಾರಿ ಸಂಕಷ್ಟಕ್ಕೆ ಸಿಲುಕಿದ.!

    ರಕ್ಷಣೆಗೆ ಪೊಲೀಸರಿಗೆ ಸಹಾಯ ಮಾಡಿದ ಪ್ರೀತಿಯ ಶ್ವಾನ

    ವ್ಯಕ್ತಿಯ ರಕ್ಷಿಸುವಂತೆ ಸ್ಥಳದಲ್ಲೇ ನಿಂತು ಕಣ್ಣೀರು ಹಾಕ್ತಿದ್ದ ನಾಯಿ

ಹಿಮದಡಿ ಸಿಲುಕಿದ್ದ 65 ವರ್ಷದ ವ್ಯಕ್ತಿಯನ್ನು ನಾಯಿಯೊಂದು ಉಳಿಸಿದೆ. ಅಮೆರಿಕದ ಮಿಚಿಗನ್​​ನಲ್ಲಿ ಈ ಘಟನೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಾಯಿಯೊಂದಿಗೆ ವಾಕಿಂಗ್ ಹೋಗಿದಾಗ ವ್ಯಕ್ತಿ ಕಾಲು ಜಾರಿ ಬಿದ್ದಿದ್ದರು. ಸಂಕಷ್ಟಕ್ಕೆ ಸಿಲುಕಿದ್ದ ವೃದ್ಧ ಮೇಲೆದ್ದು ಬರಲು ಸಾಕಷ್ಟು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ಮಾಲೀಕನ ಬಿಟ್ಟು ಬರಲು ಮನಸ್ಸಾಗದೇ ಸಹಾಯಕ್ಕಾಗಿ ಕೂಗಲು ಶುರು ಮಾಡಿತ್ತು.

ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಕೊನೆಗೆ ಪೊಲೀಸರು ಅಲ್ಲಿಗೆ ಬಂದಾಗ ಆತನ ರಕ್ಷಣೆಗೆ ನಾಯಿ ಸಂಪೂರ್ಣ ಸಹಾಯ ಮಾಡಿದೆ. ಇದೀಗ ಭದ್ರತಾ ಸಿಬ್ಬಂದಿ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಜೀವ ಉಳಿಸಿದ ಕಥೆಯನ್ನು ಹಂಚಿಕೊಂಡಿದ್ದಾರೆ.

ರಕ್ಷಣೆಗೆ ಬಂದಿದ್ದ ಕ್ಯಾಮೆರಾನ್ ಬೆನೆಟ್ಸ್ ಎಂಬ ವ್ಯಕ್ತಿ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮಂಜುಡ್ಡೆಯಿಂದ ಇಡೀ ದೇಹ ಆವರಿಸಿತ್ತು. ಭಜದಿಂದ ತಲೆಯವರೆಗೆ ಮಾತ್ರ ವ್ಯಕ್ತಿ ಕಾಣಿಸುತ್ತಿದ್ದರು. ಕೂಡಲೇ ಅವರ ರಕ್ಷಣೆಗೆ ಮುಂದಾಗಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಒಂದು ವೇಳೆ ಶ್ವಾನ ಇಲ್ಲದಿದ್ದರೆ ರಕ್ಷಣೆ ಮಾಡಲು ಆಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಲೀಕನ ಜೀವ ಉಳಿಸಿದ ಶ್ವಾನ.. ಹಿಮಪಾತಕ್ಕೆ ಸಿಲುಕಿ ಬದುಕಿ ಬಂದದ್ದೇ ದೊಡ್ಡದು..!

https://newsfirstlive.com/wp-content/uploads/2024/01/DOG-7.jpg

Load More