/newsfirstlive-kannada/media/post_attachments/wp-content/uploads/2025/02/DOG_BIRTHDAY.jpg)
ಈಗೀಗ ಸಾಕು ಪ್ರಾಣಿಗಳ ಹುಟ್ಟುಹಬ್ಬ, ಮದುವೆ, ಸೀಮಂತ ಆಚರಣೆ ಮಾಡುವುದು ಸಾಮಾನ್ಯವಾಗಿದೆ. ಮನೆಯಲ್ಲಿಯೇ ಸಣ್ಣದೊಂದು ಕಾರ್ಯಕ್ರಮ ಮಾಡುತ್ತಾರೆ. ತಮ್ಮ ಕುಟುಂಬದ ಸದಸ್ಯನಂತೆ ಅವುಗಳನ್ನು ಮಾಲೀಕರು ಇತ್ತೀಚೆಗೆ ಕಾಣುತ್ತಿದ್ದಾರೆ. ಕೆಲವೊಬ್ಬರು, ತಮ್ಮ ಸಾಕು ಪ್ರಾಣಿಗೂ ಆಸ್ತಿ ಬರೆದಿರುವುದು ಕೇಳಿದ್ದೇವೆ. ಈ ಎಲ್ಲ ಈಗಿರುವಾಗಲೇ ಇಲ್ಲೊಂದು ಬೀದಿ ನಾಯಿಗೆ ಅಂಗ ರಂಗ ವೈಭವಂಗ ಬರ್ತ್ಡೇ ಸೆಲೆಬ್ರೆಷನ್ ಮಾಡಲಾಗಿದೆ.
ಈ ಶ್ವಾನದ ಹೆಸರು ಲುಡೋ ಭಾಯ್. ಇದೇನೋ ದೊಡ್ಡ ಶ್ರಿಮಂತನೋ ಅಥವಾ ಇನ್ಯಾರೋ ಸಾಕಿರುವ ನಾಯಿ ಅಲ್ಲವೇ ಅಲ್ಲ. ಇದೊಂದು ಬೀದಿ ನಾಯಿ. ಬೀದಿಯಲ್ಲಿ ಓಡಾಡಿಕೊಂಡಿರುವ ನಾಯಿ ಅಲ್ಲಿನ ಜನರ ಪ್ರೀತಿ ಗಳಿಸಿದೆ. ಅವರಿಗೆ ನಂಬಿಕೆ, ವಿಶ್ವಾಸದಿಂದ ಇದೆ. ಹೀಗಾಗಿಯೇ ಆ ಬೀದಿಯ ಯುವಕರೆಲ್ಲಾ ಸೇರಿ ನಾಯಿಗೆ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿದೆ.
ಹುಟ್ಟುಹಬ್ಬದ ದಿನ ಲುಡೋ ಭಾಯ್ಯ ದೊಡ್ಡ ದೊಡ್ಡ ಬ್ಯಾನರ್ಗಳನ್ನು ಯುವಕರು ನಗರದಲ್ಲೆಡೆ ಹಾಕಿದ್ದಾರೆ. ಬ್ಯಾನರ್ ಮೇಲೆ ಹೃತ್ಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆಯಲಾಗಿದೆ. ಓಪನ್ ಜೀಪ್ನಲ್ಲಿ ನಾಯಿಯನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗಿದೆ. ನಾಯಿಯ ಮೇಲೆ ಹೂವಿನ ಸುರಿಮಳೆಗೈದಿದ್ದಾರೆ. ದೊಡ್ಡ ದೊಡ್ಡ ಹೂವಿನ ಹಾರಗಳನ್ನು ಹಾಕಿ ದೊಡ್ಡ ಮಟ್ಟದಲ್ಲೇ ಆಚರಣೆ ಮಾಡಿದ್ದಾರೆ.
ಇದನ್ನೂ ಓದಿ: Aero India Show; ಬೆಂಗಳೂರಲ್ಲಿ ಭಾರೀ ಟ್ರಾಫಿಕ್.. ಕೆಲ ರಸ್ತೆಗಳಿಗೆ ಎಂಟ್ರಿಯೇ ಇಲ್ಲ, ಎಲ್ಲೆಲ್ಲಿ?
ಓಪನ್ ಜೀಪ್ನ ಮುಂಭಾಗವೇ ಕೇಕ್ ಅನ್ನು ಇಟ್ಟು ಕಟ್ ಮಾಡಲಾಗಿದೆ. ಕೇಕ್ ಅನ್ನು ಲುಡೋಗೆ ತಿನ್ನಿಸಲಾಗಿದೆ. ನಾಯಿಯನ್ನು ಜೀಪ್ನಲ್ಲಿ ಮೆರವಣಿಗೆ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಈ ವೇಳೆ ನಾಯಿ ಬೊಗುಳುವುದು, ಓಡುವುದು ಅಂತದ್ದೇನೋ ಮಾಡದೇ ಸುಮ್ಮನಿದೆ. ಆದರೆ ನಾಯಿಯ ಬರ್ತ್ಡೇ ಮಾತ್ರ ದೊಡ್ಡ ಮಟ್ಟದಲ್ಲಿ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಇದೆಲ್ಲಾ ನಡೆದಿರುವುದು ಮಧ್ಯಪ್ರದೇಶದ ದೇವಾಸ್ ನಗರದಲ್ಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ