/newsfirstlive-kannada/media/post_attachments/wp-content/uploads/2025/02/VJI-DOG-PARED.jpg)
ಶ್ವಾನಗಳು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಎಲ್ಲರ ಮನೆಯಲ್ಲೂ ಪೆಟ್ ಆಗಿ ಡಾಗ್ ಸಾಕೋದು ಕಾಮನ್. ಹೀಗಾಗಿ ಗುಮ್ಮಟನಗರಿಯಲ್ಲಿ ಡಾಗ್ ಶೋನ ಏರ್ಪಡಿಸಲಾಗಿತ್ತು. ವಿವಿಧ ತಳಿಗಳ ನೂರಾರು ಶ್ವಾನಗಳು ಶೋನಲ್ಲಿ ಭಾಗಿಯಾಗಿ ಶ್ವಾನ ಪ್ರಿಯರ ಮನಗೆದ್ದವು.
ಇದನ್ನೂ ಓದಿ:ಕೆರೆಗೆ ಈಜಲು ಹೋಗಿದ್ದ ಬಾಲಕರು ನಿಧನ.. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಶ್ವಾನಗಳ ಓಡಾಟ. ನಲಿದಾಟ. ಡಾಗ್‌ಗಳ ತುಂಟಾಟ. ದೇಸಿ ತಳಿಯಿಂದ ವಿದೇಶಿ ತಳಿಗಳ ಶ್ವಾನಗಳ ಕಂಡು ಶ್ವಾನ ಪ್ರಿಯರ ಹರ್ಷ. ಇದು ಡಾಗ್ ಶೋದ ಝಲಕ್..
ಗುಮ್ಮಟನಗರಿ ವಿಜಯಪುರದಲ್ಲಿ ಡಾಗ್ ಶೋ ಏರ್ಪಡಿಸಲಾಗಿತ್ತು. ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಶ್ವಾನ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಸುಮಾರು 21ಕ್ಕೂ ಹೆಚ್ಚು ತಳಿಯ 250ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ವು. ಈ ಶ್ವಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಕೂಡಾ ಭಾಗಿಯಾಗಿ ಕುತೂಹಲದಿಂದ ಶ್ವಾನಗಳನ್ನು ವೀಕ್ಷಿಸಿದ್ರು.
/newsfirstlive-kannada/media/post_attachments/wp-content/uploads/2025/02/VJI-DOG-PARED-2.jpg)
ಪ್ರಮುಖವಾಗಿ ಸೈಬೇರಿಯನ್ ಹಸ್ಕಿ, ಜರ್ಮನ್ ಶೆಫರ್ಡ್, ಚೌಚೌ, ಸೆಂಟ್ ಬರ್ನಾಡ್, ರ್ಯಾಟ್ ವಿಲ್ಲರ್, ಲೆಬ್ರಡಾರ್, ಗೊಲ್ಡನ್ ರಿಟವಿಲ್ಲರ, ಡಾಬರ್ ಮನ್, ಪಗ್, ಗ್ರೇಟ್ ಡೆನ್, ಪಿಟ್ ಬುಲ್, ಡ್ಯಾಶ್ ಹೌಂಡ, ಸಿಡ್ಜು, ಪೊಮೊರಿಯನ್, ಮುಧೋಳ ಹೌಂಡ್ ಹೀಗಿ ವಿಭಿನ್ನ ಶ್ವಾನಗಳು ನೆರೆದ ಜನರನ್ನು ರಂಜಿಸಿದವು.. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಾಗ್ ಶೋ ನಡೆಯಿತು. ಮುದ್ದುಮುದ್ದಾದ ತಳಿಗಳ ಜೊತೆಗೆ ಅಷ್ಟೇ ಭಯ ಹುಟ್ಟಿಸುವಂತಹ ತಳಿಗಳ ಶ್ವಾನಗಳ ಬೌಬೌ ಸದ್ದು ಮುದ ನೀಡಿತ್ತು.
/newsfirstlive-kannada/media/post_attachments/wp-content/uploads/2025/02/VJI-DOG-PARED-3.jpg)
ಶ್ವಾನಗಳ ಬ್ರೀಡಿಂಗ್, ಮಾರಾಟ, ತಳಿಗಳು, ಅವುಗಳ ವ್ಯಾಕ್ಸಿನೇಶನ್ ಆಹಾರ ಪದ್ಧತಿ ಎತ್ತರ ಗಾತ್ರ ತೂಕ, ದರಗಳ ಕುರಿತಾಗಿ ಸಹ ಸಮಗ್ರ ಜಾಗೃತಿಯನ್ನ ಜನತೆಗೆ ತಿಳಿಸಿಕೊಡುವುದು ಡಾಗ್ ಶೋನ ಪ್ರಮುಖ ಉದ್ದೇಶವಾಗಿತ್ತು. ವಿಜಯಪುರ ಮಾತ್ರವಲ್ಲದೇ ಕಲಬುರಗಿ ಸೇರಿದಂತೆ ನೆರೆಯ ಮಹಾರಾಷ್ಟ್ರದಿಂದಲೂ ಶ್ವಾನದೊಂದಿಗೆ ಬಂದು ಡಾಗ್‌ಶೋನಲ್ಲಿ ಭಾಗಿಯಾಗಿದ್ರು.
ಡಾಗ್ ಶೋ ಮೂಲಕ ವಿವಿಧ ತಳಿಯ ಶ್ವಾನಗಳನ್ನು ಕಂಡು ನೆರೆದ ಪ್ರೇಕ್ಷಕರು ಫುಲ್ ಖುಷ್ ಆಗಿದ್ರು. ಶ್ವಾನಗಳ ವ್ಯಾಪಾರ ವಹಿವಾಟು ಸಹಿತ ನಡೆಯಿತು. ಇಂತಹ ಡಾಗ್ ಶೋ ಮತ್ತಷ್ಟು ನಡೆದು ಶ್ವಾನಗಳ ಕುರಿತು ಜನರಿಗೆ ಇನ್ನಷ್ಟು ಮಾಹಿತಿ ಸಿಗುವಂತಾಗಲಿ ಅನ್ನೋದು ಶ್ವಾನ ಪ್ರಿಯರ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us