Advertisment

ಅಯ್ಯೋ.. ಮಾಲೀಕನಿಗಾಗಿ ರೋಧಿಸುತ್ತಿದೆ ಮೂಕ ಶ್ವಾನ.. ಕಣ್ಣೀರು ತರಿಸುತ್ತೆ ಅಂಕೋಲಾ ಗುಡ್ಡ ಕುಸಿತ ಪ್ರಕರಣ

author-image
AS Harshith
Updated On
ಅಯ್ಯೋ.. ಮಾಲೀಕನಿಗಾಗಿ ರೋಧಿಸುತ್ತಿದೆ ಮೂಕ ಶ್ವಾನ.. ಕಣ್ಣೀರು ತರಿಸುತ್ತೆ ಅಂಕೋಲಾ ಗುಡ್ಡ ಕುಸಿತ ಪ್ರಕರಣ
Advertisment
  • ಅಂಕೋಲಾದ ಶಿರೂರಿನಲ್ಲಿ ಕುಸಿದ ಮಣ್ಣು ಗುಡ್ಡ
  • ಕಣ್ಮರೆಯಾದ ಮಾಲೀಕನನ್ನು ಹುಡುಕಾಡುತ್ತಿದೆ ಶ್ವಾನ
  • ಎಲ್ಲಿ ಹೋದ ಮಾಲೀಕ? ಮೂಕ ಪ್ರಾಣಿಯ ಹುಡುಕಾಟ

ಬಾಯಿ ಬಾರದ ಮೂಕ ಪ್ರಾಣಿಯ ರೋಧನೆಯನ್ನು ಕೇಳುವವರ್ಯಾರು. ಆಹಾರ ಹಾಕಿ ಸಲಹಿದ, ಪ್ರೀತಿಸುತ್ತಿದ್ದ ಮಾಲೀಕ ಇದ್ದಕ್ಕಿದ್ದಂತೆಯೇ ಕಣ್ಮರೆಯಾದರೆ ಆ ನೋವನ್ನ ಯಾರತ್ರ ಹೇಳೋದು. ಈ ಶ್ವಾನದ ಸ್ಥಿತಿಯು ಅದೇ ಆಗಿದೆ. ತನ್ನ ನೋವನ್ನ ಹೇಳಲಾರದೆ, ತೋರ್ಪಡಿಸಲಾಗದೆ ಅತ್ತಿಂದ್ದಿತ್ತ, ಇತ್ತಿಂದತ್ತ ಓಡುತ್ತಿದೆ. ತಾನಿದ್ದ ವಾಸಸ್ಥಾನ, ಮಾಲೀಕನನ್ನು ಹುಡುಕಾಡುತ್ತಿದೆ.

Advertisment

publive-image

ಹೌದು. ಇದು ಅಂಕೋಲಾದ ಶಿರೂರು ಬಳಿ ನಡೆದ ದುರ್ಘಟನೆಯ ಚಿತ್ರಣ. ರಕ್ಕಸ ಮಳೆಯ ಅವಾಂತರಕ್ಕೆ ಗುಡ್ಡವೇ ಕುಸಿದಿದೆ. ಸಂಸಾರ ನಡೆಸುತ್ತಿದ್ದ ಕುಟುಂಬವೊಂದು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಆದರೆ ಅದೃಷ್ಟವೆಂಬಂತೆ ಶ್ವಾನ ಮಾತ್ರ ಬದುಕುಳಿದಿದೆ.

ಇದನ್ನೂ ಓದಿ: ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ 30kg! ಘಟಪ್ರಭಾ ನದಿಯಲ್ಲಿ ಬಲೆಗೆ ಬಿತ್ತು ಬೃಹತ್​ ಗಾತ್ರದ ಮೀನು!

ಶಿರೂರು ಬಳಿ ಗುಡ್ಡ ಕುಸಿತವಾದ ಸ್ಥಳದಲ್ಲಿ ಇನ್ನೂ ಕಾರ್ಯಚರಣೆ ನಡೆಯುತ್ತಿದೆ. ನಿನ್ನೆಯಿಂದ ಪ್ರಾರಂಭವಾಗಿ ಇಂದು ಸಹ ಕಾರ್ಯಾಚರಣೆ ಮುಂದುವರೆದಿದೆ. ಆದರೆ ಶ್ವಾನಕ್ಕೆ ತನ್ನ ಮಾಲೀಕ ಎಲ್ಲಿ ಹೋಗಿದ್ದಾನೆ ಎಂದು ಇನ್ನೂ ತಿಳಿಯದಾಗಿದೆ. ಅದಕ್ಕಾಗಿ ವಾಸನೆ ಹುಡುಕುತ್ತಾ, ಮಣ್ಣು ಗುಡ್ಡದ ಮೇಲೆ ಹುಡುಕಾಡುತ್ತಿದೆ. ಈ ಕಣ್ಣೀರ ದೃಶ್ಯ ಮಾತ್ರ ಎಂತವರ ಕಣ್ಣಲ್ಲೂ ನೀರು ತರಿಸುವಂತಿದೆ. ಅಷ್ಟರಮಟ್ಟಿಗೆ ಮನಸ್ಸಿಗೆ ನಾಟುವಂತ ಚಿತ್ರಣ ಇದಾಗಿದೆ.

Advertisment

publive-image

ಇದನ್ನೂ ಓದಿ: ಭರ್ತಿಯಾಗುವ ಹಂತದಲ್ಲಿ KRS​ ಡ್ಯಾಂ! ಇನ್ನೆಷ್ಟು ನೀರು ಸಂಗ್ರಹವಾಗಲು ಬಾಕಿ ಇದೆ?

ಇನ್ನು ಗುಡ್ಡ ಕುಸಿತದಲ್ಲಿ ಹಲವಾರು ಜನರು ಸಿಲುಕಿರುವ ಸಂಶಯವಿದೆ. ಸದ್ಯ ಕಾರ್ಯಚರಣೆ ನಡೆಯುತ್ತಿದೆ. ಈಗಾಗಲೇ ಐದು ಮೃತದೇಹ ಸಿಕ್ಕಿದೆ. ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ್ (11), ಅವಂತಿಕಾ (6), ಜಗನ್ನಾಥ (55) ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಆದರೆ ಸುಮಾರು ಹತ್ತಕ್ಕೂ ಅಧಿಕ ವಾಹನ ಮಣ್ಣಿನಡಿ ಸಿಲುಕಿದೆ ಎನ್ನಲಾಗುತ್ತಿದೆ. ಕೆಲವು ವಾಹನ ನಿನ್ನೆ ನದಿಯ ನೀರಿನಲ್ಲಿ ಕೊಚ್ಚಿ ಹೋಗಿವೆ.

ಇದನ್ನೂ ಓದಿ: CCTV: ಅಬ್ಬಾ! ಏಕಾಏಕಿ ಕಳಚಿದ ಚಲಿಸುತ್ತಿದ್ದ ಬಸ್​ನ ಟಯರ್.. ಪ್ರಯಾಣಿಕ ಪರಿಸ್ಥಿತಿ?

Advertisment

ಇಂದು ಬೆಳಗ್ಗಿನ ಕಾರ್ಯಚರಣೆ ವೇಳೆ ಮಣ್ಣಿನ ಅಡಿಯಲ್ಲಿ ಲಾರಿಯೊಂದು ಪತ್ತೆಯಾಗಿದೆ. ಲಾರಿಯೊಳಗೆ ಜನರು ಇರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸುರಿವ ಮಳೆಯಲ್ಲಿಯೂ ಗುಡ್ಡ ತೆರವು ಮಾಡುವ ಕಾರ್ಯಾಚರಣೆ ಮುಂದುವರೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment