/newsfirstlive-kannada/media/post_attachments/wp-content/uploads/2025/06/police-dog.jpg)
ಬೆಂಗಳೂರು: ನಾಪತ್ತೆಯಾಗಿದ್ದ 5 ವರ್ಷದ ಮಗುವನ್ನು ಶ್ವಾನದಳದ ಸಹಾಯದಿಂದ 24 ಗಂಟೆಯೊಳಗೆ ಪೊಲೀಸರು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೌದು, ನಗರದ ವಿಶ್ವೇಶ್ವರಯ್ಯ ಲೇಔಟ್ ಬಳಿ ಸಿದ್ದಪ್ಪ ಮತ್ತು ವೀರಮ್ಮ ಎಂಬುವವರಿಗೆ ಸೇರಿದ 5 ವರ್ಷದ ಮಗು ಜೂನ್ 21ರಂದು ಕಾಣೆಯಾಗಿತ್ತು.
ಇದನ್ನೂ ಓದಿ:ಇರಾನ್ ಹೊರ್ಮುಜ್ ಜಲಸಂಧಿ ಬಂದ್ ಮಾಡಿದರೆ.. ಭಾರತದ ಮೇಲೆ ಏನೆಲ್ಲಾ ಪರಿಣಾಮ..?
ಎಷ್ಟೇ ಹುಡುಕಿದರೂ ಮಗು ಸಿಗದಿದ್ದ ಕಾರಣ ಪೋಷಕರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ಕೂಡಲೇ ಜ್ಞಾನಭಾರತಿ ಪೊಲೀಸರು ಶ್ವಾನದಳದ ಸಹಾಯದಿಂದ ಹುಡುಕಾಟ ಶುರು ಮಾಡಿದ್ದಾರೆ.
ಆದ್ರೆ, ಆಟವಾಡುತ್ತಿದ್ದ ಜಾಗದಲ್ಲಿ ಮಗುವಿನ ಬಟ್ಟೆಯೊಂದು ಬಿದ್ದಿತ್ತು. ಇದೇ ವೇಳೆ ಬಟ್ಟೆಯ ವಾಸನೆ ಹಿಡಿದು ಪೊಲೀಸರಿಗೆ ಶ್ವಾನ ಡೈರೆಕ್ಷನ್ ತೋರಿಸಿದೆ. ಅಚ್ಚರಿ ಎಂಬಂತೆ ಅಲ್ಲಿಂದ ಅರ್ಧ ಕಿ ಮೀ. ದೂರದ ಮಹಿಳೆಯೊಬ್ಬರ ಮನೆಗೆ ಶ್ವಾನ ಹೋಗಿದೆ. ಆದರೆ ಮಹಿಳೆ ರಾಯಚೂರು ಮೂಲದವಳಾಗಿದ್ದು, ಮಗುವಿನ ಪೋಷಕರಿಗೆ ಪರಿಚಯ ಇದ್ದಳು. ಪೋಲಿಸರು ಹಾಗೂ ಪೋಷಕರು ಆ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಗಳೂರಿನಿಂದ ಮಗುವನ್ನ ರಾಯಚೂರಿಗೆ ಸ್ಥಳಾಂತರ ಮಾಡಲಾಗಿತ್ತು.
ಆಗ ಮಹಿಳೆಯನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಮಾಹಿತಿ ಹೊರಬಂದಿದೆ. ಅಷ್ಟೇ ಅಲ್ಲದೇ ಅಕ್ಕಪಕ್ಕದ ಸಿಸಿಟಿವಿ ದೃಶ್ಯವಾಳಿ ಪರಿಶೀಲಿಸಿದಾಗ ಮಗು ಎತ್ತಿಕೊಂಡು ಹೋಗುವುದು ಪತ್ತೆಯಾಗಿತ್ತು. ಸದ್ಯ ಮಗುವನ್ನ ರಕ್ಷಣೆ ಮಾಡಿರುವ ಜ್ಞಾನಭಾರತಿ ಪೊಲೀಸರು ಬಸಮ್ಮ ಮತ್ತು ಸುಲೋಚನ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ