/newsfirstlive-kannada/media/post_attachments/wp-content/uploads/2025/07/DOG-6.jpg)
ಹಿಮಾಚಲ ಪ್ರದೇಶದಲ್ಲಿ (Himachal Pradesh rain) ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಪರಿಣಾಮ ಭೀಕರ ಪ್ರವಾಹ ಉಂಟಾಗಿದೆ, ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದೆ. ಅದರಲ್ಲೂ ಸಂಸದೆ ಕಂಗನಾ ಪ್ರತಿನಿಧಿಸುವ ಮಂಡಿ ಜಿಲ್ಲೆಯು ದೊಡ್ಡ ಪ್ರಮಾಣದ ಬಿಕ್ಕಟ್ಟು ಎದುರಿಸುತ್ತಿದೆ. ಅಚ್ಚರಿಯ ಮತ್ತು ಪವಾಡ ರೀತಿಯ ಸುದ್ದಿಯೊಂದು ಹೊರಬಿದ್ದಿದೆ. ಅದು ಏನೆಂದರೆ ಗ್ರಾಮದ ನಾಯಿಯೊಂದು 67 ಮಂದಿಯನ್ನ ಘೋರ ದುರಂತದಿಂದ ಪಾರು ಮಾಡಿದೆ.
ಏನಿದು ಸುದ್ದಿ..?
ಜೂನ್ 30. ಮಧ್ಯರಾತ್ರಿ ಸುಮಾರು 1 ಗಂಟೆ. ಮಂಡಿ ಜಿಲ್ಲೆಯ ಧರ್ಮಪುರ ಪ್ರದೇಶ ಸಿಯಾಥಿ ಎಂಬ ಊರು ದೊಡ್ಡ ಸಂಕಷ್ಟಕ್ಕೆ ಸಿಲುಕಿತ್ತು. ಗ್ರಾಮದ ನರೇಂದ್ರ ಎಂಬಾತ ಹೇಳುವ ಪ್ರಕಾರ, ರಾತ್ರಿ ನಾವೆಲ್ಲ ಮಲಗಿಕೊಂಡಿದ್ದೇವು. ಘೋರ ನಿದ್ರೆಗೆ ಜಾರಿದ್ದೇವು. ಮನೆಯ ಎರಡನೇ ಮಹಡಿಯಲ್ಲಿ ಮಲಗಿದ್ದ ನಮ್ಮ ಮನೆಯ ನಾಯಿ ಜೋರಾಗಿ ಕೂಗಲು ಶುರು ಮಾಡಿತ್ತು. ಆಗ ನನಗೆ ಥಟ್ ಅಂತಾ ಎಚ್ಚರವಾಯಿತು.
ಇದನ್ನೂ ಓದಿ: CJI ನಿವೃತ್ತಿಯ ನಂತರ ಎಷ್ಟು ತಿಂಗಳಲ್ಲಿ ಬಂಗಲೆಯನ್ನು ಖಾಲಿ ಮಾಡಬೇಕು..? ನಿಯಮಗಳು ಏನೇನು..?
ಯಾಕೆ ನಾಯಿ ಕೂಗುತ್ತಿದೆ ಎಂದು ನೋಡಲು ಅಲ್ಲಿಗೆ ಹೋದೆ. ಮಳೆಯ ಅಬ್ಬರ ಜೋರಾಗಿತ್ತು. ಮನೆಯ ಗೋಡೆ ಒಂದು ಬದಿಯಲ್ಲಿ ಬಿರುಕು ಬಿಟ್ಟಿತ್ತು. ಮನೆಯೊಳಗೆ ನೀರು ಬರಲು ಶುರುವಾಗಿತ್ತು. ಆಗ ಅಪಾಯದಲ್ಲಿದ್ದೇವೆ ಅಂತಾ ಗೊತ್ತಾಯ್ತು. ಕೂಡಲೇ ಕೆಳಗೆ ಬಂದು ಮನೆಯವರನ್ನು ಎಬ್ಬಿಸಿದೆ. ನಂತರ ಊರಿನವರನ್ನೂ ಕೂಗಿ ಏಳಿಸಿದೇವು. ದೊಡ್ಡ ಅಪಾಯ ನಮಗೆ ಕಾಡಿತ್ತು. ಮನೆಯ ಬಳಿಯಿದ್ದ ಗುಡ್ಡ ಕುಸಿಯಲು ಆರಂಭಿಸಿತ್ತು. ಹಾಗಾಗಿ ನಾವು ರಾತ್ರೋರಾತ್ರಿ ಬೇರೆ ಊರಿಗೆ ಬಂದು ಸೇರಿಕೊಂಡೆವು. ನಾಯಿಯಿಂದಾಗಿ ಗ್ರಾಮದ 67 ಮಂದಿಯ ಜೀವ ಉಳಿದಿದೆ ಎನ್ನುತ್ತಾರೆ ನರೇಂದ್ರ.
ಮಾರನೇಯ ದಿನ ಪಕ್ಕದ ಊರಿನಿಂದ ಬಂದು ಪರಿಸ್ಥಿತಿ ಏನಾಗಿದೆ ಅಂತಾ ನೋಡಿದೇವು. ಇಡೀ ಊರೇ ಸಂಪೂರ್ಣ ನಾಶವಾಗಿತ್ತು. ಭೀಕರ ಭೂಕುಸಿತ ಮತ್ತು ಪ್ರವಾಹ ಸಂಭವಿಸಿ ನಮ್ಮ ಮನೆಯೂ ಮಣ್ಣಿನಲ್ಲಿ ಮುಚ್ಚಿ ಹೋಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಪರಿಣಾಮ ಯಾವುದೇ ಜೀವ ಹಾನಿಯಾಗಿಲ್ಲ. ಡಜನ್ಗಟ್ಟಲೆ ಮನೆಗಳಿದ್ದ ಊರಲ್ಲಿ ನಾಲ್ಕೈದು ಮನೆಗಳು ಮಾತ್ರ ಏನೂ ಆಗದೇ ಉಳಿದು ಕೊಂಡಿವೆ ಅಂತಾ ನರೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಪ್ರಿಯಕರನಿಗಾಗಿ ಪತಿಯನ್ನೇ ಬಿಟ್ಟು ಬಂದಳು.. ಗರ್ಭಿಣಿ ಆದ್ಮೇಲೆ ಪ್ರೇಮಿ ಪರಾರಿ, ಸಂತ್ರಸ್ತೆ ಏಕಾಂಗಿ..
ಸದ್ಯ ಭೂಕುಸಿತದ ಸಂತ್ರಸ್ತರು ತ್ರಿಯಾಂಬಳ ಗ್ರಾಮದ ನೈನಾ ದೇಗುಲದಲ್ಲಿ ಆರೈಕೆ ಪಡೆಯುತ್ತಿದ್ದಾರೆ. ಸಂತ್ರಸ್ತರಿಗಾಗಿ ಇಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಊರಿನಲ್ಲಿ ಆಗಿರುವ ಅನಾಹುತದಿಂದ ಗ್ರಾಮಸ್ಥರು ಆಘಾತಕ್ಕೆ ಒಳಗಾಗಿದ್ದಾರೆ. ಪಕ್ಕದ ಗ್ರಾಮಸ್ಥರು ಇವರ ಸಹಾಯಕ್ಕೆ ನಿಂತಿದ್ದಾರೆ, ಸರ್ಕಾರದಿಂದ 10 ಸಾವಿರ ರೂಪಾಯಿ ತುರ್ತಾಗಿ ನೀಡಲಾಗಿದೆ.
ಜೂನ್ 20 ರಿಂದ ಇಲ್ಲಿಯವರೆಗೆ ಹಿಮಾಚಲ ಪ್ರದೇಶದಲ್ಲಿ ಒಟ್ಟು 78 ಮಂದಿ ಜೀವ ಕಳೆದುಕೊಂಡಿದ್ದಾರೆ. ಅವರಲ್ಲಿ 50 ಮಂದಿ ಭೂಕುಸಿತ, ಪ್ರವಾಹ ದುರಂತದಿಂದ ಪ್ರಾಣ ಬಿಟ್ಟಿದ್ದಾರೆ. ಇನ್ನುಳಿದ 28 ಮಂದಿ ರಸ್ತೆ ಅಪಘಾತಗಳಿಂದ ನಿಧನರಾಗಿದ್ದಾರೆ. ಇಲ್ಲಿಯವರೆಗೆ 23 ಬಾರಿ ಪ್ರವಾಹ ಉಂಟಾಗಿದೆ. 19 ಮೇಘಸ್ಫೋಟಗೊಂಡಿವೆ. 16 ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ. ಮಂಡಿ ಜಿಲ್ಲೆಯಲ್ಲಿ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬರೋಬ್ಬರಿ 280 ರಸ್ತೆಗಳಿಗೆ ಹಾನಿಯಾಗಿದ್ದು, ಅದರಲ್ಲಿ 156 ಮಂಡಿ ಜಿಲ್ಲೆಯ ರಸ್ತೆಗಳು.
ಇದನ್ನೂ ಓದಿ: ಅಮೆರಿಕ ಪ್ರವಾಸಕ್ಕೆ ಹೋಗಿ ಜೀವ ಬಿಟ್ಟರು.. ತಂದೆ, ತಾಯಿ ಇಬ್ಬರು ಮಕ್ಕಳು ಸಜೀವ ದಹನ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ