/newsfirstlive-kannada/media/post_attachments/wp-content/uploads/2024/09/brain-exercises.jpg)
ಮೆದುಳು ಎಂಬುದು ನಮ್ಮ ದೇಹದ ಅತ್ಯಂತ ಸಂಕೀರ್ಣ ಹಾಗೂ ನಿರ್ಣಾಯಕ ಅಂಗ. ಇದಕ್ಕೆ ಆಗಾಗಾ ವಿಶ್ರಾಮ ಬೇಕು, ಅದರ ಜೊತೆಗೆ ನಿರಂತರ ಸವಾಲೊಡ್ಡುವ ಚಟುವಟಿಕೆಗಳಲ್ಲಿ ಭಾಗಿಯಾಗುವಂತಹ ವ್ಯಾಯಾಮವು ಬೇಕು. ಇದು ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮಕಾರಿಯಾದ ಪ್ರಭಾವ ಬೀರುತ್ತದೆ. ಚುರುಕಾದ ಒಂದು ಮೆದುಳು ನಮ್ಮದಾದದಲ್ಲಿ ಕ್ರಿಯಾಶೀಲತೆ ನಮ್ಮಲ್ಲಿ ಬೆಳೆಯಲು ತುಂಬಾ ಸಹಕಾರಿ. ಕೆಲವು ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ನಾವು ನಮ್ಮ ಮೆದುಳಿ ಶಕ್ತಿಯನ್ನು ಇನ್ನಷ್ಟು ಬೂಸ್ಟ್ ಮಾಡಲು ಸಾಧ್ಯ. ಹಾಗಂತ ನೀವು ದಿನಗಟ್ಟಲೇ ಈ ಚಟುವಟಿಕೆಯಲ್ಲಿ ಭಾಗಿಯಾಗಬೇಕು ಅಂತಿಲ್ಲ. ನಿತ್ಯ ಕೇವಲ ಐದು ನಿಮಿಷ ಕಾಲ ನಿತ್ಯ ಈ ಅಭ್ಯಾಸಗಳನ್ನು ಮಾಡುತ್ತಾ ಹೋದರೆ ನಮ್ಮ ಮೆದುಳಿಗೆ ಹೊಸ ಚೈತನ್ಯ ಬರುತ್ತದೆ. ನೆನಪಿನ ಶಕ್ತಿ, ಗಮನ ಶಕ್ತಿ ಎರಡು ಕೂಡ ಸುಧಾರಿಸುತ್ತವೆ.
1. ನಿತ್ಯ ತಪ್ಪದೇ ಧ್ಯಾನ ಮಾಡಿ: ನಿತ್ಯ ನಾವು ನಮ್ಮ ಉಸಿರಿನ ಮೇಲೆ ಗಮನವನ್ನು ಕೇಂದ್ರೀಕರಿಸಿ ಧ್ಯಾನ ಮಾಡುವುದರಿಂದ ನಮ್ಮ ಗಮನ ಶಕ್ತಿ ಹೆಚ್ಚಾಗುತ್ತದೆ ಹಾಗೂ ಈ ಮೂಲಕ ಮಾನಸಿಕ ಒತ್ತಡಗಳು ಕೂಡ ದೂರವಾಗುತ್ತವೆ. ಧ್ಯಾನ ಎನ್ನುವುದು ನಮ್ಮನ್ನು ಭಾವನಾತ್ಮಕವಾಗಿಯೂ ಕೂಡ ಸ್ಥಿರತೆಗೆ ತರುವ ಶಕ್ತಿಯಿರುವ ಒಂದು ಅಭ್ಯಾಸ. ನಮ್ಮ ಒಟ್ಟಾರೆ ಅರಿವಿನ ಶಕ್ತಿ ಹಾಗೂ ಮಾನಸಿಕ ಸ್ಪಷ್ಟತೆಯನ್ನು ನೀಡುವ ಶಕ್ತಿ ಧ್ಯಾನದಲ್ಲಿದೆ.
ಇದನ್ನೂ ಓದಿ:ಶಾಖಾಹಾರಿಗಳೇ ಅತಿಹೆಚ್ಚು ಕಾಲ ಬದುಕುತ್ತಾರಾ? ಈ ಮಾತು ಎಷ್ಟು ಸತ್ಯ, ಎಷ್ಟು ಮಿಥ್ಯ?
2. ನಿತ್ಯ ಬೆಳಗ್ಗೆ ಐದು ನಿಮಿಷ ಓದಿ: ಓದು ಎಂಬುದು ತುಂಬಾ ಮುಖ್ಯ. ಕಾದಂಬರಿಯಾಗಲಿ, ಕಾದಂಬರಿಯಾಚೆಗಿನ ಪುಸ್ತಕಗಳಾಗಲಿ ಕನಿಷ್ಠ ಒಂದು ಅಂಕಣವನ್ನಾದರೂ ನಿತ್ಯ ಓದುವ ರೂಢಿ ಇಟ್ಟುಕೊಳ್ಳಿ. ಇದು ಮೆದುಳನ್ನು ಚಟುವಟಿಕೆಯಿಂದ ಇಡಲು ಸಹಾಯಕವಾಗುತ್ತದೆ. ಅರ್ಥಮಾಡಿಕೊಳ್ಳುವ ಶಕ್ತಿ ಹಾಗೂ ನಮ್ಮ ಶಬ್ಧ ಬಂಡಾರ ಎರಡು ಕೂಡ ವಿಸ್ತಾರಗೊಳ್ಳುತ್ತವೆ. ಇದು ಕೂಡ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ. ಇದು ಮೆದುಳನ್ನು ಸದಾ ಸಕ್ರಿಯವಾಗಿ ಚೈತನ್ಯದಿಂದ ಇಡಲು ಸಹಾಯಕ.
3. ಐದು ನಿಮಿಷ ಪಜಲ್ ಗೇಮ್ ಆಡಿ: ನಮಗೆ ಬಿಡಿಸಲು, ಬಗೆಹರಿಸಲು ಸವಾಲು ಎನಿಸುವ ಆಟಗಳನ್ನು ಆಡುವುದು ಕೂಡ ನೀವು ಮೆದುಳಿಗೆ ನೀಡುವ ಒಂದು ವ್ಯಾಯಾಮ. ಕ್ರಾಸ್ವರ್ಡ್, ಸುಡುಕು ಇಲ್ಲವೇ ಚೆಸ್ ಈ ತರಹದ ಆಟಗಳನ್ನು ಆಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಪದಬಂಧ ಬಿಡಿಸುವುದು ಸೇರಿ ಹಲವು ಪಜಲ್ ಗೇಮ್ಗಳಿವೆ ದಿನಕ್ಕೆ ಕನಿಷ್ಠ ಐದು ನಿಮಿಷ ಆಡಿ.
ಇದನ್ನೂ ಓದಿ:ಏರುತ್ತಿದೆ ನೆತ್ತಿ ಸುಡುವ ಬಿಸಿಲು.. ಮೇ 10ರವರೆಗೂ ಹುಷಾರಾಗಿರಿ; ಹೊಸ ಗೈಡ್‌ಲೈನ್ಸ್ ಬಿಡುಗಡೆ!
4. ದೈಹಿಕ ಚಟುವಟಿಕೆಗಳು ಕೂಡ ಮುಖ್ಯ: ನಿಮ್ಮ ಮೆದುಳು ಸದಾ ಸಕ್ರಿಯವಾಗಿರಬೇಕು ಎಂದರೆ ನೀವು ದೈಹಿಕ ವ್ಯಾಯಾಮಗಳಲ್ಲಿ ತೊಡಗಬೇಕು. ಸರಳವಾಗಿ ಒಂದು ವಾಕಿಂಗ್, ಇಲ್ಲವೇ ಜಾಗಿಂಗ್, ಜಂಪಿಂಗ್ ಈ ರೀತಿಯ ದೈಹಿಕ ವ್ಯಾಯಾಮಗಳು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತವೆ. ಇವು ನಿಮ್ಮ ಮೆದುಳಿನಲ್ಲಿ ಡೊಪಾಮೈನ್ ಹಾಗೂ ಸೆರೊಟೊನಿನ್ ಎಂಬ ರಾಸಾಯನಿಕ ವಸ್ತುಗಳು ಬಿಡುಗಡೆಯಾಗಲು ಪ್ರಚೋದಿಸುತ್ತವೆ. ಇದರಿಂದ ನಮ್ಮ ಮನಸ್ಥಿತಿ ಅಂದ್ರೆ ಮೂಡ್ ಸದಾ ಉಲ್ಲಾಸದಾಯಕವಾಗಿರುತ್ತದೆ.
5.ಸಂಗೀತ ವಾದ್ಯಗಳನ್ನು ನುಡಿಸಿ: ಸಂಗೀತ ವಾದ್ಯಗಳನ್ನು ನುಡಿಸುವುದನ್ನ ಕಲಿಯುವುದು ಕೂಡ ನಾವು ನಮ್ಮ ಮೆದುಳನ್ನು ಸಕ್ರಿಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇದು ಮೆದುಳಿನ ಮೆದುಸ್ಥಿತಿಯನ್ನು ಹೆಚ್ಚಿಸುತ್ತದೆ. ಇದರಿಂದ ನೆನಪಿನ ಶಕ್ತಿ ಮಾತ್ರವಲ್ಲ, ಒಟ್ಟಾರೆಯಾಗಿ ಮೆದುಳಿನ ಇಡೀ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ