ಡಾಲಿ ಧನಂಜಯ್, ಧನ್ಯತಾ ಫುಲ್ ಫಿಟ್​.. ಕಬ್ಬನ್ ಪಾರ್ಕ್​, ವಿಧಾನಸೌಧ ಬಳಿ ವಾಕಿಂಗ್​​

author-image
Bheemappa
Updated On
ಡಾಲಿ ಧನಂಜಯ್, ಧನ್ಯತಾ ಫುಲ್ ಫಿಟ್​.. ಕಬ್ಬನ್ ಪಾರ್ಕ್​, ವಿಧಾನಸೌಧ ಬಳಿ ವಾಕಿಂಗ್​​
Advertisment
  • ಫಿಟ್ನೆಸ್​ಗೆ ಹೆಚ್ಚು ಹೆಚ್ಚು ಸಮಯ ಕೊಡುವ ಡಾಲಿ ಧನಂಜಯ್
  • ಇತ್ತೀಚೆಗಷ್ಟೇ ಮೈಸೂರಲ್ಲಿ ಅದ್ಧೂರಿಯಾಗಿ ಮದುವೆ ಆಗಿದ್ದ ಜೋಡಿ
  • ಡಾಲಿ ಧನಂಜಯ್ ಯಾವ ಯಾವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ?

ಸ್ಯಾಂಡಲ್​ವುಡ್​ನ ಡಾಲಿ ಧನಂಜಯ್ ಅವರು ಯಾವಾಗಲೂ ಸಿನಿಮಾ ಶೂಟಿಂಗ್​ಗಳಲ್ಲಿ ಬ್ಯುಸಿ ಇರುವಂತವರು. ಕೈಯಲ್ಲಿ ಈಗಾಗಲೇ ಉತ್ತರಕಾಂಡ, ಅಣ್ಣ ಫ್ರಮ್ ಮೆಕ್ಸಿಕೋ, ಹಲಗಲಿ ಸೇರಿದಂತೆ ಇತರೆ ಸಿನಿಮಾಗಳು ಇವೆ. ಇದರ ನಡುವೆ ಕುಟುಂಬಕ್ಕೂ ಸಮಯ ಕೊಡುವ ಡಾಲಿ ಧನಂಜಯ್, ತನ್ನ ಹೆಂಡತಿ ಧನ್ಯತಾ ಜೊತೆ ಕಬ್ಬನ್ ಪಾರ್ಕ್, ವಿಧಾನಸೌಧ ಸುತ್ತ ಬೆಳ್​ ಬೆಳಗ್ಗೆ ವಾಕ್ ಮಾಡಿದ್ದಾರೆ.

ಡಾಲಿ ಧನಂಜಯ್ ಹಾಗೂ ಅವರ ಪತ್ನಿ ಧನ್ಯತಾ ಇಬ್ಬರೂ ಬೆಂಗಳೂರಿನಲ್ಲಿರುವ ಕಬ್ಬನ್ ಪಾರ್ಕ್, ವಿಧಾನಸೌಧ ಸುತ್ತಮುತ್ತ ಇಂದು ಬೆಳ್ ಬೆಳಗ್ಗೆ ವಾಕಿಂಗ್ ಮಾಡಿದ್ದಾರೆ. ಸದಾ ಫಿಟ್ನೆಸ್​ಗೆ ಹೆಚ್ಚು ಸಮಯ ಕೊಡುವ ಧನಂಜಯ್ ಒಳ್ಳೆಯ ಮೈಕಟ್ಟು ಹೊಂದಿದ್ದಾರೆ. ಇದರಿಂದ ಸಾಲು ಸಾಲು ಸಿನಿಮಾಗಳು ಡಾಲಿಯನ್ನು ಹುಡುಕಿಕೊಂಡು ಬರುತ್ತಿವೆ.

ಇದನ್ನೂ ಓದಿ:IPL ಟೂರ್ನಿ ಪುನರಾರಂಭ ಯಾವಾಗ.. ಬೆಂಗಳೂರು ಸೇರಿ ಎಲ್ಲೆಲ್ಲಿ ಪಂದ್ಯಗಳು ನಡೆಯುತ್ತವೆ?

publive-image

ಇನ್ನು ಡಾಲಿ ಧನಂಜಯ್ ಹೆಂಡತಿ ಧನ್ಯತಾ ಅವರು ವೃತ್ತಿಯಲ್ಲಿ ಡಾಕ್ಟರ್ ಆಗಿದ್ದರಿಂದ ಆರೋಗ್ಯದ ಕಡೆಗೆ ಹೆಚ್ಚು ಹೆಚ್ಚು ಗಮನ ಹರಿಸುತ್ತಾರೆ. ಅದರಲ್ಲಿ ಬೆಳಗ್ಗೆ ವಾಕಿಂಗ್ ಮಾಡಿದರೆ ದೇಹವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬಹುದು. ಹೀಗಾಗಿಯೇ ಇಬ್ಬರು ಕೂಡ ಕಬ್ಬನ್ ಪಾರ್ಕ್, ವಿಧಾನಸೌಧ ಸುತ್ತಮುತ್ತ ಕಡೆ ವಾಕಿಂಗ್ ಮಾಡಿದ್ದಾರೆ. ಇದರ ಜೊತೆಗೆ ಫೋಟೋಗಳಿಗೂ ಪೋಸ್ ಕೊಟ್ಟಿದ್ದಾರೆ.

ಸದ್ಯ ಡಾಲಿ ಧನಂಜಯ್ ಹಾಗೂ ಧನ್ಯತಾ ಅವರು ವಾಕಿಂಗ್ ಮಾಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಇತ್ತೀಚೆಗೆ ಮದುವೆಯಾಗಿರುವ ಈ ಜೋಡಿಗೆ ಅಭಿಮಾನಿಗಳು ಕಾಮೆಂಟ್​​​ ಮಾಡುತ್ತಿದ್ದಾರೆ. ಇನ್ನು ಶೂಟಿಂಗ್​ನಿಂದ ಧನಂಜಯ್ ಅವರಿಗೆ ಕೊಂಚ ಬಿಡುವು ಸಿಕ್ಕ ಹಿನ್ನೆಲೆಯಲ್ಲಿ ಹೆಂಡತಿ ಜೊತೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಡಾಲಿ ಧನಂಜಯ್ ಅವರು ಧನ್ಯತಾ ಅವರನ್ನು ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment