ಟೀಕೆಗೆ ಒಳಗಾದ ಡಾಲಿ.. ಮದ್ವೆಗಾಗಿ ಆಚರಿಸಿದ ಸಂಪ್ರದಾಯದ ಬಗ್ಗೆ ಉತ್ತರ ಕೊಟ್ಟ ಧನಂಜಯ..

author-image
Ganesh
Updated On
ಟೀಕೆಗೆ ಒಳಗಾದ ಡಾಲಿ.. ಮದ್ವೆಗಾಗಿ ಆಚರಿಸಿದ ಸಂಪ್ರದಾಯದ ಬಗ್ಗೆ ಉತ್ತರ ಕೊಟ್ಟ ಧನಂಜಯ..
Advertisment
  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಾಲಿ ಧನಂಜಯ
  • ಸಂಪ್ರದಾಯಗಳ ಮೂಲಕ ಧನಂಜಯ ಮದುವೆ
  • ಮದುವೆ ಬಗ್ಗೆ ಧನಂಜಯ ಕೊಟ್ಟ ಉತ್ತರ ಏನು?

ಚಂದನವನ ಸ್ಟಾರ್ ಡಾಲಿ ಧನಂಜಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಧನ್ಯತಾ ಜೊತೆ ಸಪ್ತಪದಿ ತುಳಿದ್ದಾರೆ. ‘‘ಬುದ್ಧ, ಬಸವ ಅಂದುಕೊಂಡಿದ್ದ ಡಾಲಿ, ಸಾಂಪ್ರದಾಯಿಕ ಆಚರಣೆಗಳ ಮೂಲಕ ಮದುವೆ ಆಗಿದ್ದಾರೆ. ಅಷ್ಟೆಲ್ಲ ಮಾತನಾಡುತ್ತಿದ್ದ ಧನಂಜಯ ಯಾಕೆ ಮಂತ್ರ ಮಾಂಗಲ್ಯ ಆಗಿಲ್ಲ? ಯಾಕೆ ಸಾಂಪ್ರದಾಯದ ಮೊರೆ ಹೋಗಿದ್ದು..’’ ಅನ್ನೋ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಇದನ್ನೂ ಓದಿ: ಮೈಸೂರಲ್ಲಿ ತಾಯಿ, ಪತ್ನಿ, ಮಗನಿಗೆ ವಿಷ ಉಣಿಸಿ ತಾನೂ ಜೀವ ಬಿಟ್ಟ ವ್ಯಕ್ತಿ.. ಅಸಲಿಗೆ ಆಗಿದ್ದೇನು?

publive-image

ಬೆನ್ನಲ್ಲೇ ಧನಂಜಯ ಅವರು, ಮದುವೆಗಾಗಿ ಆಚರಿಸಿದ ಸಂಪ್ರದಾಯದ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಧನಂಜಯ.. ಹಿರಿಯರಿಗೆ ಕೆಲವು ನಂಬಿಕೆಗಳಿಂದ ಖುಷಿ ಸಿಗುತ್ತೆ ಅಂತಾದರೆ ಅದನ್ನು ಪಾಲಿಸುವುದು ತಪ್ಪು ಅಂತಾ ನನಗೆ ಅನಿಸಿಲ್ಲ. ಎಲ್ಲದಕ್ಕೂ ಉತ್ತರ ಕೊಡಲು ಬರಲ್ಲ. ಆದರೆ ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ಮಾತನಾಡುತ್ತೇನೆ.

ಕಾಯುವಂತಹ ನಂಬಿಕೆಗಳು ಬೇರೆ. ಮೂಢನಂಬಿಕೆಗಳು ಬೇರೆ. ಆಚರಣೆ ಅಂತಾ ಬಂದಾಗ ನಮ್ಮ ಸಮಾಜದಲ್ಲಿ ತುಂಬಾ ತರಹದ ಆಚರಣೆಗಳಿವೆ. ಉದಾಹರಣೆಗೆ ನಮ್ಮ ಚಿಕ್ಕಪ್ಪ ಮದುವೆ ಸಂದರ್ಭದಲ್ಲಿ ಕೊಂಡ ಹಾಯುವ ಪೂಜೆ ಮಾಡಿದರು. ಅದನ್ನ ಯಾಱರು ಯಾವ್ಯಾವ ಪದ್ದತಿಯಲ್ಲಿ ಮಾಡೋದು ಅಂತಾ ಗೊತ್ತಿಲ್ಲ. ನಮ್ಮ ಚಿಕ್ಕಪ್ಪ ತುಂಬಾನೇ ಚೆನ್ನಾಗಿ ಮಾಡಿದರು.

ಇದನ್ನೂ ಓದಿ: FASTag! ಟೋಲಲ್ಲಿ ದುಪ್ಪಟ್ಟು ದಂಡ.. ಫಾಸ್ಟ್​​ಟ್ಯಾಗ್​ನ 5 ಹೊಸ ನಿಯಮಗಳು ಏನೇನು..?

publive-image

ಕೊಂಡ ಹಾಯೋದನ್ನು ನಾನು ತುಂಬಾ ಚಿಕ್ಕವನಿಂದಲೂ ನೋಡಿಕೊಂಡು ಬಂದಿದ್ದೇನೆ. ಜಾತ್ರೆಯ ಜನಸಾಗರದಲ್ಲಿ ನಿಂತು ಎಂಜಾಯ್ ಮಾಡಿದ್ದೇನೆ. ನನಗೆ ಅದು ಜಾನಪದ. ಅಲ್ಲಿ ನನನಗೆ ತಪ್ಪು ಕಂಡು ಬಂದಿಲ್ಲ. ನಾನು ವಿಜ್ಞಾನ ನಂಬುತ್ತೇನೆ, ನನ್ನ ಸೈನ್ಸ್ ನನಗೆ ಗೊತ್ತು. ನನ್ನ ಜೀವನದ ಕತೆಯೊಂದನ್ನು ನಿಮಗೆ ಹೇಳುತ್ತೇನೆ. ನನ್ನ ತಾಯಿಗೆ ಒಂದು ಆಪರೇಷನ್ ನಡೆದಿತ್ತು. ಸೈನ್ಸ್​ ಪ್ರಕಾರ ಅದೊಂದು ಸಣ್ಣ ಶಸ್ತ್ರಚಿಕಿತ್ಸೆ ಅಷ್ಟೇ. ಆದರೆ, ನನ್ನ ತಾಯಿ ಆಕೆ ನಂಬುವ ಜೇನುಕಲ್ಲ ಸಿದ್ದಪ್ಪನನ್ನು ಆ ಅವಧಿಯಲ್ಲಿ ಸ್ಮರಿಸುತ್ತಿದ್ದರು. ಆಪರೇಷನ್ ಥಿಯೇಟರ್​ಗೆ ಹೋಗುವ ಸಂದರ್ಭದಲ್ಲಿ ಜೇನುಕಲ್ಲ ಸಿದ್ದಪ್ಪ ಎಂದು ಜಪಿಸುತ್ತಿದ್ದರು. ಅದು ಅವರ ನಂಬಿಕೆ. ಅದೊಂದು ಶಕ್ತಿ ಎಂದರು.

ಇಲ್ಲಿ ಎಲ್ಲವನ್ನೂ ಒಂದೇ ರೀತಿ ನೋಡೋಕೆ ಆಗಲ್ಲ. ಒಂದೇ ರೀತಿ ನೋಡಿದಾಗ ನಾವು, ನೀವು ಒಟ್ಟಿಗೆ ಹೋಗೋಕೆ ಸಾಧ್ಯವೇ ಇಲ್ಲ. ನನ್ನ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ಗೌರವಿಸುತ್ತೇನೆ. ನನ್ನನ್ನು ಪ್ರಶ್ನೆ ಮಾಡ್ತಿರೋರಿಗೂ ಧನ್ಯವಾದ ತಿಳಿಸುತ್ತೇನೆ. ನನಗೆ ನಿಮ್ಮ ಆಶೀರ್ವಾದ ಬೇಕು. ನಾನು ಕೂಡ ಕಲಿಯುತ್ತ ಇರುತ್ತೇನೆ ಎಂದರು.

ಇದನ್ನೂ ಓದಿ: ಮಹಾಕುಂಭ: 16 ಸಾವಿರ ಕೆಲಸಗಾರರು, 80 ದಿನದಲ್ಲಿ 26 ಹೆಕ್ಟರ್ ಹೆಚ್ಚುವರಿ ಭೂಮಿ ರೆಡಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment