/newsfirstlive-kannada/media/post_attachments/wp-content/uploads/2025/02/dolly-dhananjay-marriage-11.jpg)
ಸ್ಯಾಂಡಲ್ವುಡ್ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎನಿಸಿಕೊಂಡಿದ್ದ ಡಾಲಿ, ಹಸೆಮಣೆ ಸಜ್ಜಾಗಿದ್ದು, ಅರಮನೆ ನಗರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಬೆಳಗ್ಗೆಯಿಂದಲೇ ಮದುವೆ ಶಾಸ್ತ್ರಗಳು ಜರುಗಿದ್ದು, ಇದೀಗ ಅರತಕ್ಷತೆಯೂ ಅದ್ಧೂರಿಯಾಗಿ ನೆರವೇರುತ್ತಿದ್ದು, ಸೆಲಬ್ರಿಟಿಗಳ ದಂಡೇ ಹರಿದು ಬಂದಿದೆ.
ಇದನ್ನೂ ಓದಿ:ಡಾಲಿ ಧನಂಜಯ ಮದುವೆ ಬಲು ಜೋರು; ಅದ್ಧೂರಿ ಆರತಕ್ಷತೆಯ ಟಾಪ್ 10 ಫೋಟೋಗಳು ಇಲ್ಲಿವೆ!
ನಮ್ಮ ಡಾಲಿ ಮದುವೆಗೆ ಬಂಧುಗಳು ತುಂಬಿ ಬಂದಾಗ. ಆಹಾ ಎಂಥ ಸಂಗಮ ಶುಭಲಗ್ನದಲ್ಲಿ ಶಾಸ್ತ್ರಗಳು ನಡೆದಾಗ.. ಬೆಳಗ್ಗೆಯಿಂದ ಶಾಸ್ತ್ರಗಳ ಸಡಗರ.. ಅರತಕ್ಷತೆಯ ಅಬ್ಬರ.. ನಮ್ಮ ಡಾಲಿ ಮದುವೆ ಬಲು ಜೋರು.. ಜೋರು.
ಆಕ್ಟರ್.. ಡಾಕ್ಟರ್ ಕಂಕಣಕ್ಕೆ ಇನ್ನೇನು ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿಯಿದೆ. ನಾಳೆ ಹಸೆಮಣೆ ತುಳಿಯಲಿರೋ ಜೋಡಿ ಇಂದು ಬೆಳಗ್ಗೆಯಿಂದಲೇ ಶಾಸ್ತ್ರಗಳ ಸಡಗರದಲ್ಲಿ ಮಿಂದೆದ್ದಿದೆ.. ಬೆಳಗ್ಗೆಯಿಂದಲೇ ಲಿಂಗಾಯತ ಸಂಪ್ರದಾಯದಂತೆ ಶಾಸ್ತ್ರಗಳು ಒಂದೊಂದಾಗಿ ನೆರವೇರಿವೆ.
ಮೈಸೂರಿನ ವಸ್ತು ಪ್ರದರ್ಶನ ಮೈದಾನ ಆವರಣದಲ್ಲಿ ಮೊದಲಿಗೆ ಇಂದು ಬೆಳಗ್ಗೆ ಮದುವಣಿಗೆ ಶಾಸ್ತ್ರವನ್ನ ನೆರವೇರಿಸಲಾಯ್ತು. ಡಾಲಿ ಅಕ್ಕ ಮದುಮಗಳ ಕೈಗೆ ಬಳೆಗಳನ್ನ ತೊಡಿಸಿದ್ರು.
ಈ ವೇಳೆ ಧನ್ಯತಾರಿಗೆ ಡಾಲಿ ಧನಂಜಯ್ ಕಾಲುಂಗುರ ತೊಡಿಸಿದ್ರು. ಈ ವೇಳೆ ಧನ್ಯತಾ, ಧನಂಜಯ್ ಕಾಲಿಗೆ ನಮಸ್ಕರಿಸಲು ಮಾಡಿದ್ರು. ಡಾಲಿ ಕೂಡ ಧನ್ಯತಾ ಕಾಲಿಗೆ ನಮಸ್ಕಾರ ಮಾಡಿದ್ರು. ನಂತರ ಇಬ್ಬರು ಒಬ್ಬರ ಹಣೆಗೆ ಮತ್ತೊಬ್ಬರು ಮುತ್ತಿಟ್ರು.
ಇನ್ನೂ, ಮಗನ ಮದುವೆ ಬಗ್ಗೆ ಮಾತನಾಡಿದ ಡಾಲಿ ತಾಯಿ ಸಾವಿತ್ರಮ್ಮ, ಮದುವೇನೆ ಬೇಡ ಅಂತಿದ್ದ ಡಾಲಿ, ಇದೀಗ ನಮ್ಮ ಆಸೆಯಂತೆ ಮದುವೆ ಆಗ್ತಿದ್ದಾನೆ ಆಂತ ಸಂತಸ ವ್ಯಕ್ತಪಡಿಸಿದ್ರು. ಮಗನ ಡಾಕ್ಟರ್ ಮಾಡ್ಬೇಕು ಅಂಡ್ಕೊಂಡಿದ್ದೆ ಆದ್ರೆ, ಡಾಕ್ಟರ್ ಸೊಸೆನ ತಂದು ಕೊಟ್ಟ ಅಂತ ತಂದೆ ಅಡವಿಸ್ವಾಮಿ ಖುಷಿ ಹಂಚಿಕೊಂಡ್ರು.
ಇನ್ನೂ, ಮದುವೆ ಮಂಟಪ ಸಿದ್ಧಪಡಿಸಿರೋ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಮಾತನಾಡಿ, ಇದು ಡಾಲಿ ಮದುವೆ ಅಲ್ಲ, ಡಾಲಿ ದಸರಾ ಎಂದು ಸಂತಸ ಹಂಚಿಕೊಂಡ್ರು.
ಇನ್ನೂ, ನಾಳೆ ಡಾಲಿ-ಧನ್ಯತಾ ಹಸೆಮಣೆ ಇರ್ತಿರೋ ಲಗ್ನ ತುಂಬ ವಿಶೇಷವಾದ ಲಗ್ನವಂತೆ. ಲಕ್ಷ ದೋಷ ಇದ್ರೂ ನಿವಾರಣೆ ಆಗೋ ಲಗ್ನ ಇದಂತೆ.. ನಾಳೆ 8 ಗಂಟೆ 10.30ರ ತನಕ ಲಗ್ನ ಇದೆ.. ಇದು ಶ್ರೇಷ್ಠ ಲಗ್ನ.. ಅಲ್ಲದೇ ಗಣಪತಿ ಚೌತಿ ಇರೋದ್ರಿಂದ ಈ ಲಗ್ನ ತುಂಬಾ ಸ್ಪೆಷಲ್ ಅಂತಾರೆ ಪುರೋಹಿತರು
ಇನ್ನೂ, ಆರಕ್ಷತೆ ಅದ್ಧೂರಿಯಾಗಿ ನಡೆಯುತ್ತಿದ್ದು, ಅಭಿಮಾನಿಗಳು, ಸೆಲಬ್ರಿಗಳು ಬಂದುಗಳ ದಂಡೇ ಹರಿದು ಬರ್ತಿದೆ. ಒಟ್ನಲ್ಲಿ.. ಡಾಕ್ಟರ್, ಆ್ಯಕ್ಟರ್ ನಾಳೆ ಸತಿಪತಿಯಾಗಲಿದ್ದು, ಹೊಸ ಜೀವನಕ್ಕೆ ಶುಭಕೋರೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ