/newsfirstlive-kannada/media/post_attachments/wp-content/uploads/2025/02/dhananjaya_10.jpg)
ಡಾಲಿ ಧನಂಜಯ ಧನ್ಯತಾ ಮದುವೆಯ ಶಾಸ್ತ್ರಗಳು ಇನ್ನೇನು ಕೆಲವೇ ಗಂಟೆಗಳಲ್ಲಿ ಶುರುವಾಗಲಿದೆ. ಸುಮಾರು 7 ಗಂಟೆಗೆ ಮೊದಲಿಗೆ ಗಣಪತಿ ಪೂಜೆ ಬಳಿಕ ಗಂಗಾ ಪೂಜೆ ನಡೆದಿದ್ದು. ಬಳಿಕ ವರಪೂಜೆ ನಡೆದಿದೆ. ಅನಂತರದಲ್ಲಿ ಮದುಮಗಳಿಗೆ ಬಳೆಶಾಸ್ತ್ರ ನಡೆಸಲಾಗಿದೆ. ಬಳಿಕ ವಧು ವರರ ತಂದೆ ತಾಯಿಯ ಸಮ್ಮುಖದಲ್ಲಿ ವಾಗ್ದಾನ ಪೂಜೆ ನಡೆದಿದೆ. ಒನಕೆ ಪೂಜೆ ಮೂಲಕ ಒಳ್ಳಕ್ಕಿ ಶಾಸ್ತ್ರ ಸಂಪ್ರದಾಯದಂತೆ ಪೂಜೆಯೂ ನಡೆದಿದೆ
ಇನ್ನು ಅಭಿಮಾನಿಗಳಿಗೆ ವಿಐಪಿ ಟ್ರೀಟ್ ನೀಡಲಾಗುತ್ತದೆ. ಇವೆಂಟ್ ಮ್ಯಾನೆಜ್ಮೆಂಟ್ ವಹಿಸಿಕೊಂಡ ದ್ರುವಾ ಮಾಹಿತಿ ನೀಡಿದ್ದು. ಅಭಿಮಾನಿಗಳಿಗೆ ಸಪರೇಟ್ ಎಂಟ್ರಿ ಮಾಡಲಾಗಿದೆ. ಖುದ್ದು ಧನಂಜಯ್ ಅಭಿಮಾನಿಗಳಿಗೆ ವಿಐಪಿ ಟ್ರೀಟ್ಮೆಂಟ್ ನೀಡಬೇಕೆಂದು ತಿಳಿಸಿದ್ದು ಅದರಂತೆ ಪ್ರತ್ಯೇಕ ಪ್ರವೇಶದ್ವಾರವನ್ನು ರೆಡಿ ಮಾಡಲಾಗಿದೆ
. ವೇದಿಕೆ ಮುಂದೆ ಬರೋ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆಇ. 30 ಸಾವಿರ ಜನಕ್ಕೆ ಅಡುಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಮೊದಲ ಬಾರಿಗೆ ಮದುವೆಗೆ ಎರಡು ಸೆಟ್ ಹಾಕಲಾಗಿದೆ.
ಈ ಲಗ್ನದಲ್ಲಿ ಕೈ ಹಿಡಿದರೇ ಲಕ್ಷ ದೋಷ ಇದ್ರೂ ಪರಿಹಾರ ಆಗುತ್ತೆ. ನಟ ಡಾಲಿ ಧನಂಜಯ್, ಡಾ. ಧನ್ಯತಾ ಮದುವೆಯ ಶಾಸ್ತ್ರಗಳು ಭರ್ಜರಿಯಾಗಿ ನಡೀತಿವೆ. ಮೈಸೂರಿನ ವಸ್ತು ಪ್ರದರ್ಶನ ಮೈದಾನ ಆವರಣದಲ್ಲಿ ನಡೆಯುತ್ತಿರುವ ಮದುವೆ ಕಾರ್ಯಕ್ರಮದಲ್ಲಿ,
ಇವತ್ತು ಮದುವಣಿಗೆ ಶಾಸ್ತ್ರವನ್ನ ನೆರವೇರಿಸಲಾಯ್ತು.
ಈ ವೇಳೆ ಧನ್ಯತಾರಿಗೆ ಡಾಲಿ ಧನಂಜಯ್ ಕಾಲುಂಗುರ ತೊಡಿಸಿದ್ರು. ಬಳಿಕ, ಸಂಪ್ರದಾಯದಂತೆ ವರನ ಕಾಲಿಗೆ ವಧು ನಮಸ್ಕರಿಸಬೇಕು ಅಂತ ಪುರೋಹಿತರು ಹೇಳಿದ್ರು.
ಈ ವೇಳೆ ಧನ್ಯತಾ, ಧನಂಜಯ್ ಕಾಲಿಗೆ ನಮಸ್ಕರಿಸಲು ಮುಂದಾದ್ರು.. ಆದ್ರೆ, ನಮಸ್ಕಾರ ಮಾಡೋದು ಬೇಡ ಅಂತ ಧನಂಜಯ್ ನಿರಾಕರಿಸಿದ್ರು.. ಧನ್ಯತಾ ಹಾಗೂ ಸಂಬಂಧಿಕರು ಕನ್ವಿನ್ಸ್ ಮಾಡಿದ ಬಳಿಕ ಧನ್ಯತಾ ಡಾಲಿ ಕಾಲಿಗೆ ನಮಸ್ಕಾರ ಮಾಡಿದ್ರು.
ಇದಕ್ಕೆ ಪ್ರತಿಯಾಗಿ ಡಾಲಿ ಕೂಡ ಧನ್ಯತಾ ಕಾಲಿಗೆ ನಮಸ್ಕಾರ ಮಾಡಿದ್ರು. ನಂತರ ಇಬ್ಬರು ಒಬ್ಬರ ಹಣೆಗೆ ಮತ್ತೊಬ್ಬರು ಮುತ್ತಿಟ್ಟಿದ್ದು, ಮದುವಣಿಗೆ ಶಾಸ್ತ್ರದಲ್ಲಿ ಆಕರ್ಷಣೆಯಾಗಿತ್ತು
ಡಾಲಿ ಧನಂಜಯ್ ಮದುವೆ ಸುಮಾರು 6 ಗಂಟೆಯ ವೇಳೆಗೆ ರಾಜ್ಯಪಾಲರಾದ ಥಾವರ್ ಚೆಂದ್ ಗೆಹ್ಲೋಟ್ ಆಗಮಿಸಿದ್ದರು. ಆರಕ್ಷತೆಗೆ ಭೇಟಿ ನೀಡಿ ವಧು ವರರಿಗೆ ಆಶೀರ್ವಾದ ಮಾಡಿದರು.
ರಾಜ್ಯಪಾಲರು ಸೇರಿದಂತೆ ಹಲವು ಗಣ್ಯ ರಾಜಕೀಯ ನಾಯಕರು ಧನಂಜಯ್ ಮದುವೆಗೆ ಆಗಮಿಸಲಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಕೂಡ ಮದುವೆಗೆ ಬಂದು ವಧು ವರರಿಗೆ ಹರಿಸಿದರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ