ಮದುವೆ ಮನೆಯಲ್ಲಿ ನನಗೆ ಭಯ ಆಯ್ತು.. ಡಾಲಿ ಧನಂಜಯ್‌ ಯಾಕೆ ಹೀಗೆ ಹೇಳಿದ್ರು? ಆಗಿದ್ದೇನು?

author-image
admin
Updated On
ಧನು-ಧನ್ಯತಾ ಮದುವೆಯಲ್ಲಿ ಸರಳತೆ ಮೆರೆದ ಶಿವಣ್ಣ; ದೊಡ್ಮನೆ ಪ್ರೀತಿಗೆ ಡಾಲಿ ಧನಂಜಯ್‌ ಏನಂದ್ರು?
Advertisment
  • ಮದುವೆಯ ಶಾಸ್ತ್ರ ಸಂಪ್ರದಾಯಗಳು ಅಚ್ಚುಕಟ್ಟಾಗಿ ನಡೆದಿದೆ
  • ಅದ್ಧೂರಿ ವಿವಾಹ ಮಹೋತ್ಸವದ ಬಳಿಕ ನವವಧುವರರು ಹೇಳಿದ್ದೇನು?
  • ತಾಳಿ ಕಟ್ಟುವಾಗ ನನಗೆ ಭಯ ಯಾವುದು ಆಗಿಲ್ಲ - ಡಾಲಿ ಧನಂಜಯ್‌

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಟ ಡಾಲಿ ಧನಂಜಯ್, ಡಾಕ್ಟರ್ ಧನ್ಯತಾ ಮದುವೆ ಸಂಭ್ರಮದಿಂದ ನಡೆದಿದೆ. ಸ್ಟಾರ್ ವಿವಾಹಕ್ಕೆ ಸ್ಯಾಂಡಲ್‌ವುಡ್‌ನ ಅನೇಕ ತಾರೆಯರು ಆಗಮಿಸಿ ನವವಧುವರರಿಗೆ ಶುಭಾಶಯ ತಿಳಿಸಿದ್ದಾರೆ.

ನಟ ಡಾಲಿ ಧನಂಜಯ್ ಮದುವೆ ಅದ್ಧೂರಿಯಾಗಿ ನಡೆದಿದ್ದು, ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಮದುವೆಯ ಶಾಸ್ತ್ರ ಸಂಪ್ರದಾಯಗಳು ಅಚ್ಚುಕಟ್ಟಾಗಿ ನಡೆದಿದ್ದು, ಕಲ್ಯಾಣ ಮಹೋತ್ಸವದ ಬಳಿಕ ಡಾಲಿ ಹಾಗೂ ಧನ್ಯತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

publive-image

ಮದುವೆ ಮಂಟಪದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ನವಜೋಡಿ ಮೊದಲಿಗೆ ಎಲ್ಲರಿಗೂ ಧನ್ಯವಾದ ತಿಳಿಸಿದರು. ಡಾಲಿ ಧನಂಜಯ್ ಅವರು ಮದುವೆ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿದೆ. ಆರತಕ್ಷತೆಗೆ ಜನ ಬಂದಿದ್ದು ಖುಷಿ ಆಯಿತು. ನಾನು ಅಂದುಕೊಂಡಂತೆ ಎಲ್ಲವೂ ಆಗಿದ್ದೂ ಎಲ್ಲರು ಖುಷಿ ಆಗಿದ್ದಾರೆ. ಚಿತ್ರರಂಗದ ಕುಟುಂಬಕ್ಕೆ ನಾನು ಯಾವಾಗಲೂ ಆಭಾರಿ ಆಗಿದ್ದೇನೆ ಎಂದಿದ್ದಾರೆ.

ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕೋ ಗೊತ್ತಿಲ್ಲ. ತುಂಬಾ ಶಾಂತಿಯುತವಾಗಿ ಫ್ಯಾನ್ಸ್ ನಡೆದುಕೊಂಡಿದ್ದಾರೆ. ನಾನು ಜೀವನ ಕಂಡುಕೊಂಡಿದ್ದು ಮೈಸೂರಲ್ಲಿ. ಇಲ್ಲೇ ಮದುವೆ ಆಗಿದ್ದು ಖುಷಿ ಆಯಿತು. ಕಲಾವಿದರು, ಗೆಳೆಯರೆಲ್ಲಾ ಮದುವೆಗೆ ಬಂದಿದ್ರು. ನಿನ್ನೆ ಸಂಜೆ ಸಾವಿರ, ಸಾವಿರ ಜನ ಬಂದಾಗ ಭಯ ಆಯಿತು. ಎಲ್ಲಾದ್ರು ತೊಂದರೆ ಆಗುತ್ತಾ ಅಂತ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮದುವೆ ಮಂಟಪಕ್ಕೆ ಬಂದಾಗ ನಿಯಂತ್ರಿಸೋದು ಸವಾಲು ಆಗಿತ್ತು. ಈ ಹಿನ್ನೆಲೆಯಲ್ಲಿ ಡಾಲಿ ಧನಂಜಯ್ ಅವರು ವ್ಯವಸ್ಥಾಪಕರ ಮೇಲೆ ಗರಂ ಆಗಿದ್ದರು.

publive-image

ಇದನ್ನೂ ಓದಿ: ಫುಲ್ ಹ್ಯಾಪಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನ್ಯತಾ- ಡಾಲಿ ಧನಂಜಯ 

ಇದೇ ವೇಳೆ ತಾವು ಆಚರಿಸಿದ ಸಂಪ್ರದಾಯಗಳ ಬಗ್ಗೆ ಡಾಲಿ ಧನಂಜಯ್ ಸ್ಪಷ್ಟನೆಗಳನ್ನ ಕೊಟ್ಟರು. ತಾಳಿ ಕಟ್ಟುವಾಗ ನನಗೆ ಭಯ ಯಾವುದು ಆಗಿಲ್ಲ. ಕುಟುಂಬದವರ ಬಹುದಿನದ ಕನಸು ನನಸಾಗಿದೆ ಎಂದು ಕ್ಲಾರಿಟಿ ಕೊಟ್ಟರು.

ಡಾಲಿ ಪತ್ನಿ ಧನ್ಯತಾ ಮಾತನಾಡಿ ಡಾಲಿ ಕುಟುಂಬ ನನ್ನ ಕುಟುಂಬ. ನನ್ನ ಮನೆಗೆ ಹೋಗೋಕೆ ತುಂಬಾ ಖುಷಿ ಇದೆ. ನಾನು ಡಾಲಿ ಮನೆಗೆ ಹೋಗೋಕೆ ತುಂಬಾ ಕಾಯ್ತಾ ಇದ್ದೇನೆ. ಇಷ್ಟು ಜನರನ್ನ ನಾನು ನೋಡಿಲ್ಲ. ತುಂಬಾ ಭಾವುಕಳಾದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment