/newsfirstlive-kannada/media/post_attachments/wp-content/uploads/2025/03/Dolly-Dhananjay-Family-1.jpg)
ಹಾಸನ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪುಷ್ಪಗಿರಿ ದೇವಾಲಯಕ್ಕೆ ನಟ ಡಾಲಿ ಧನಂಜಯ್ ಕುಟುಂಬ ಸಮೇತ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಧನ್ಯತಾ ಜೊತೆ ದೇವಾಲಯಕ್ಕೆ ಭೇಟಿ ನೀಡಿದ ನಟ ಧನಂಜಯ ಅವರಿಗೆ ದೇವಸ್ಥಾನದ ಸಿಬ್ಬಂದಿ ಗೌರವ ಸಲ್ಲಿಸಿದರು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಪುಷ್ಪಗಿರಿಯಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ನೆರವೇರುತ್ತದೆ. ಈ ಹಿನ್ನೆಲೆಯಲ್ಲಿ ನಿನ್ನೆ ಡಾಲಿ ಧನಂಜಯ ಹಾಗೂ ಪತ್ನಿ ಧನ್ಯತಾ ಪುಷ್ಪಗಿರಿ ದೇವಾಲಯಕ್ಕೆ ಭೇಟಿ ನೀಡಿದ್ದರು.
/newsfirstlive-kannada/media/post_attachments/wp-content/uploads/2025/03/Dolly-Dhananjay-Family.jpg)
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಇದೆ. ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ದಂಪತಿ ನೆಲದ ಮೇಲೆ ಪ್ರಸಾದ ಸ್ವೀಕರಿಸಿದರು.
ಇದನ್ನೂ ಓದಿ: ಪಿಜಿಯಲ್ಲಿ ವಿಜಯಪುರ ಯುವತಿ ಕೇಸ್​​ಗೆ ಟ್ವಿಸ್ಟ್! ಜೀವ ಕಳೆದುಕೊಳ್ಳಲು ನಿಜವಾದ ಕಾರಣ ಬಹಿರಂಗ
ಹಳೇಬೀಡಿನಲ್ಲಿರುವ ಪುಷ್ಪಗಿರಿಯು ಒಂದು ಪುಟ್ಟ ಗಿರಿಧಾಮವಾಗಿದ್ದು, ಇಲ್ಲಿ ಹೊಯ್ಸಳ ಯುಗದ ಕೆಲವು ದೇವಾಲಯಗಳಿವೆ. ಇಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಶ್ರೀ ಪಾರ್ವತಮ್ಮನವರ ಗಿರಿಜಾ ಕಲ್ಯಾಣೋತ್ಸವ ಮತ್ತು ದಿವ್ಯ ರಥೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us