/newsfirstlive-kannada/media/post_attachments/wp-content/uploads/2025/02/dolly-dhananjay-marriage-8.jpg)
ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ನಟ ಡಾಲಿ ಧನಂಜಯ್, ಧನ್ಯತಾ ಮದುವೆ ಸಂಭ್ರಮ ಜೋರಾಗಿದೆ. ಇಂದು ಸಂಜೆ ನವಜೋಡಿಯ ಆರಕ್ಷತೆ ನಡೆಯುತ್ತಿದ್ದು, ಗಣ್ಯರು, ಕುಟುಂಬಸ್ಥರು, ಅಭಿಮಾನಿಗಳಿಗಾಗಿ ಬಗೆ ಬಗೆಯ ಖಾದ್ಯಗಳನ್ನು ತಯಾರು ಮಾಡಲಾಗುತ್ತಿದೆ.
ಇಂದು ಸಂಜೆ ಆರತಕ್ಷತೆಯಲ್ಲಿ ಭಾಗಿಯಾಗುವ ಅಭಿಮಾನಿಗಳು, ಕುಟುಂಬಸ್ಥರು, ಗಣ್ಯರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆವರೆಗೂ 30 ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಕುಟುಂಬಸ್ಥರು, ಫ್ಯಾನ್ಸ್, ವಿಐಪಿಗಳಿಗೆ ಪ್ರತ್ಯೇಕ ಊಟ ಕೌಂಟರ್ ತೆರೆಯಲಾಗಿದೆ. ಆದರೆ ಎಲ್ಲರಿಗೂ ಒಂದೇ ಊಟದ ಮೆನು ತಯಾರಾಗುತ್ತಿದೆ.
ಅಭಿಮಾನಿಗಳಿಗೆ ಒಟ್ಟು 6 ಕೌಂಟರ್ ಮೂಲಕ ಬಫೆ ಸಿಸ್ಟಂ ಭೋಜನ ತಯಾರು ಮಾಡಲಾಗುತ್ತಿದೆ. ಯಾರಿಗಾದ್ರೂ ನಿಂತೂ ಊಟ ಮಾಡಲು ಆಗದ ವೃದ್ದರಿಗೆ, ಮಹಿಳೆಯರಿಗೆ ಕುಳಿತು ಊಟ ಮಾಡಲು 500 ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಒಂದೇ ಬಾರಿ 4000 ಜನರು ಊಟ ಮಾಡಬಹುದಾಗಿದ್ದು, ಗಣ್ಯರಿಗೆ, ಕುಟುಂಬಸ್ಥರಿಗೆ ಕುಳಿತು ಊಟ ಮಾಡಲು ಪ್ರತ್ಯೇಕ ವ್ಯವಸ್ಥೆ ಇದೆ.
ಇದನ್ನೂ ಓದಿ: ‘ಈ ತರಹದ ಮದುವೆ ಎಕ್ಸ್ಪೆಕ್ಟ್ ಮಾಡಿರಲಿಲ್ಲ’ -ಧನಂಜಯ ಮದುವೆ ಕುರಿತು ಅಕ್ಕನ ಮಾತುಗಳು?
ಸಂಜೆ ಆರಕ್ಷತೆ ಊಟದ ಮೆನು
ಹೋಳಿಗೆ, ತುಪ್ಪ, ಪಾಯಸ, ಮಸಾಲೆ ದೋಸೆ, ಚಟ್ನಿ, ರುಮಾಲಿರೋಟಿ, ಪನ್ನೀರ್ ಗ್ರೇವಿ, ಬೇಬಿ ಕಾರ್ನ್ ಮಂಚೂರಿ, ಬೆಂಡೆಕಾಯಿ ಪ್ರೈ , ಅನ್ನಸಾಂಬಾರ್, ರಸಂ, ಮಜ್ಜಿಗೆ, ಪಲ್ಯ, ಬಾಳೆ ಹಣ್ಣು, ಐಸ್ ಕ್ರೀಂ.
ನಾಳೆ ಮದುವೆ ಊಟದ ಮೆನು
ಬೆಳಗ್ಗೆ ತಿಂಡಿ: ಕೇಸರಿ ಬಾತ್, ಇಡ್ಲಿ ಸಾಂಬಾರ್ ವಡೆ, ಖಾರಬಾತ್, ಸಿಹಿ.
ಊಟ: ಕೋಸಂಬರಿ, ಎರಡು ರೀತಿ ಪಲ್ಯ, ಪಾಯಸ, ಚಿರೋಟಿ, ಲಾಡು, ವೆಜ್ ಬೋಂಡಾ. ಅಕ್ಕಿರೊಟ್ಟಿ ಎಣ್ಣೆಗಾಯಿ, ರೈತ, ವೆಜ್ ಪಲಾವ್. ಅನ್ನ ಸಾಂಬಾರ್, ರಸಂ, ಮಜ್ಜಿಗೆ, ಬಾಳೆಹಣ್ಣು, ಐಸ್ ಕ್ರೀಂ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ