/newsfirstlive-kannada/media/post_attachments/wp-content/uploads/2025/04/rikki7.jpg)
ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಗುಂಡಿನ ದಾಳಿಯಾಗಿದೆ. ಬಿಡದಿಯ ಮುತ್ತಪ್ಪ ರೈ ನಿವಾಸದ ಕೂಗಳತೆಯಲ್ಲೇ ಅಪರಿಚಿತರು ಫೈರಿಂಗ್ ಮಾಡಿ ಪರಾರಿಯಾಗಿದ್ದಾರೆ. ರಿಕ್ಕಿ ರೈ ಮೂಗು ಹಾಗೂ ಬಲ ಭುಜಕ್ಕೆ ಗುಂಡು ತಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಭಯಾನಕ ಗುಂಡಿನ ದಾಳಿ
ದಾಳಿಗೊಳಗಾದ ರಿಕ್ಕಿ ರೈ ವಿದೇಶದಲ್ಲಿ MBA ವ್ಯಾಸಾಂಗ ಮಾಡಿದ್ದಾರೆ. ರಿಕ್ಕಿ ರೈಗೆ ಮದುವೆಯಾಗಿದ್ದು ಪತ್ನಿ ರಷ್ಯಾದವರು. ಎರಡು ವರ್ಷದ ಒಂದು ಗಂಡು ಮಗು ಕೂಡ ಇದೆ. ಮುತ್ತಪ್ಪ ರೈ ಸಾಯುವ ಮುನ್ನಾ ಎರಡು ಸಾವಿರ ಕೋಟಿಗೂ ಅಧಿಕ ಆಸ್ತಿಯನ್ನು ವಿಲ್ ಮಾಡಿದ್ದರು. ಮೊದಲ ಪತ್ನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲ ಪುತ್ರ ರಾಖಿ ರೈ, ಎರಡನೇ ಪುತ್ರ ರಿಕ್ಕಿ ರೈ. ಅಲ್ಲದೇ ಎರಡನೇ ಪತ್ನಿ ಅನುರಾಧ ಹೆಸರಿಗೂ ವಿಲ್ ಮಾಡಿಟ್ಟಿದ್ದರು. ಇಬ್ಬರು ಮಕ್ಕಳಾ ರಾಖಿ ಹಾಗೂ ರಿಕ್ಕಿಗೆ ತಲಾ ಒಂದೂವರೆ ಸಾವಿರ ಕೋಟಿ ಆಸ್ತಿಯನ್ನು ನೀಡಿದ್ದಾರೆ.
ಕೆಲವು ವರ್ಷಗಳಿಂದ ರಾಖಿ ರೈ ದುಬೈನಲ್ಲಿ ನೆಲಸಿ ಇಂಪೋರ್ಟ್ ಎಕ್ಸ್ ಪೋರ್ಟ್ ಬಿಝಿನೆಸ್ ಮಾಡ್ತಿದ್ದಾರೆ. ಹೀಗಾಗಿ ಸಹೋದರ ರಾಖಿ ರೈಗೆ ಸೇರಿದ ಆಸ್ತಿಪಾಸ್ತಿ ಹಾಗೂ ಭಾರತದಲ್ಲಿನ ವ್ಯವಹಾರಗಳನ್ನು ರಿಕ್ಕಿ ನೋಡಿಕೊಳ್ತಿದ್ದಾರೆ. ಇನ್ನು, ರಿಕ್ಕಿ ರಷ್ಯಾದ ಹುಡುಗಿಯನ್ನು ಮದೆವೆಯಾದ ಹಿನ್ನೆಲೆಯಲ್ಲಿ ವರ್ಷದ ಬಹುತೇಕ ಕಾಲ ವಿದೇಶದಲ್ಲೇ ಕಳೆಯುತ್ತಿದ್ದಾರೆ. ಇನ್ನು, ಬೆಂಗಳೂರಿನ ಸದಾಶಿವನಗರದಲ್ಲಿ ರಿಕ್ಕಿ ರೈಗೆ ಸೇರಿದ ಅಪಾರ್ಟ್ಮೆಂಟ್ ಇದೆ.
ಸದಾಶಿವನಗರದ ಅಪಾರ್ಟ್ಮೆಂಟ್ ಹೊರತುಪಡಿಸಿದರೆ ಹೆಚ್ಚು ಕಾಲ ಬಿಡದಿಯ ಮನೆಯಲ್ಲಿ ರಿಕ್ಕಿ ಇರುತ್ತಾರೆ. ರಿಕ್ಕಿ ರೈ ಹಿಂದೆ ಎಂಟತ್ತು ಬಾಡಿಗಾರ್ಡ್ ಹಾಗೂ ನಾಲ್ಕೈದು ಗನ್ ಮ್ಯಾನ್ ಅಷ್ಟೇ ಅಲ್ಲದೆ ಬುಲೆಟ್ ಫ್ರೂಫ್ ಕಾರಲ್ಲಿ ಓಡಾಡುತ್ತಾರೆ. ಆದರೆ ನಿನ್ನೆಯ ದಿನ ಬುಲೆಟ್ ಫ್ರೂಫ್ ಕಾರಿನಲ್ಲಿ ಇರಲಿಲ್ಲ. ಅಲ್ಲದೇ ಒಬ್ಬ ಡ್ರೈವರ್, ಒಬ್ಬನೇ ಗನ್ ಮ್ಯಾನ್ ಹೊಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ