/newsfirstlive-kannada/media/post_attachments/wp-content/uploads/2025/02/TRUMP-AND-MODI-MEET.jpg)
ನಿರೀಕ್ಷೆಯಂತೆ ಭಾರತದ ಸರಕುಗಳ ಮೇಲೆ ಶೇಕಡ 25ರಷ್ಟು ಸುಂಕವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಆಗಸ್ಟ್ 1 ರಿಂದ ಭಾರತದ ಮೇಲೆ ಶೇಕಡ 25 ಟಾರಿಫ್ ಹಾಗೂ ಹೆಚ್ಚುವರಿ ದಂಡವನ್ನು ಹಾಕಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಭಾರತ ಅಧಿಕ ಸುಂಕ ವಿಧಿಸುತ್ತಿರುವುದು, ಹಣಕಾಸೇತರ ವ್ಯಾಪಾರ ನಿರ್ಬಂಧ ಹೊಂದಿರುವುದು, ರಷ್ಯಾ ಇಂಧನ ಖರೀದಿಸುತ್ತಿರುವುದು, ಬ್ರಿಕ್ಸ್ ಕೂಟದಲ್ಲಿ ಸ್ಥಾನ ಹೊಂದಿರೋದು ಈ ಅಂಶಗಳನ್ನ ಆಧಾರವಾಗಿಟ್ಟುಕೊಂಡು ಭಾರತದ ಮೇಲೆ ಆಮದು ಸುಂಕ ಹಾಕುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ವಿಮಾನ ದುರಂತದಲ್ಲಿ ಬದುಕಿ ಬಂದ ತಾಯಿ ಮಗ; ಕಂದನಿಗೆ ಹೊಸ ಜೀವನ ಕೊಟ್ಟ ಮಹಾತಾಯಿ ಮಾಡಿದ್ದೇನು?
ಜೊತೆಗೆ ಭಾರತವು ರಷ್ಯಾದೊಂದಿಗೆ ಶಸ್ತ್ರಾಸ್ತ್ರ ಮತ್ತು ಕಚ್ಚಾ ತೈಲಕ್ಕಾಗಿ ವ್ಯಾಪಾರವನ್ನ ಮುಂದುವರಿಸಿದರೆ ಹೆಚ್ಚುವರಿ ದಂಡಗಳ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಭಾರತ.. ಸರ್ಕಾರವು ಅಮೆರಿಕ ಅಧ್ಯಕ್ಷರ ಹೇಳಿಕೆಯ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದೆ. ಭಾರತದ ರೈತರು, ಉದ್ಯಮಿದಾರರು , MSME ಹಿತಾಸಕ್ತಿಯನ್ನು ಕಾಪಾಡಿ ರಕ್ಷಿಸುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ: ಕಾಮಾಕ್ಯ ದೇವಿ ಮುಂದೆ ನಿಂತು ವಿಜಯಲಕ್ಷ್ಮೀ ಸಂದೇಶ.. ಪ್ರಥಮ್ ಕೇಸ್ನಲ್ಲಿ FIR, ಜಗ್ಗೇಶ್ ಏನಂದ್ರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ