/newsfirstlive-kannada/media/post_attachments/wp-content/uploads/2025/04/TRUMP-TARRIFS.jpg)
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕದ ಸಮರ ಈಗ ಭಾರತದ ಉತ್ಪನ್ನಗಳಿಗೂ ತಟ್ಟಿದೆ. ಭಾರತದಿಂದ ಅಮೆರಿಕಾಗೆ ರಫ್ತಾಗುವ ಉತ್ಪನ್ನಗಳ ಮೇಲೆ ಶೇಕಡಾ 26 ರಷ್ಟು ಟ್ರಂಪ್ ಸರ್ಕಾರ ಆಮದು ಸುಂಕ ವಿಧಿಸಿದೆ. ಭಾರತದಿಂದ ಅಮೆರಿಕಾಗೆ ಹತ್ತಾರು ಉತ್ಪನ್ನಗಳು ರಫ್ತಾಗುತ್ತಲೇ ಇರುತ್ತವೆ. ಅದರಲ್ಲಿ ಪ್ರಮುಖವಾಗಿ 10 ಉತ್ಪನ್ನಗಳಾವವು ಅನ್ನೋದು ನೋಡುವುದಾದ್ರೆ
1- ಡೈಮಂಡ್: ಭಾರತದಿಂದ ಅಮೆರಿಕಾಗೆ ರಫ್ತಾಗುವ ಅತಿಹೆಚ್ಚು ಮೌಲ್ಯದ ಉತ್ಪನ್ನ ಅಂದ್ರೆ ಅದು ವಜ್ರ ಹಾಗೂ ವಜ್ರಾಭರಣಗಳು. ಭಾರತದಿಂದ ಪ್ರತಿ ವರ್ಷ ಸುಮಾರು 10.2 ಬಿಲಿಯನ್ ಡಾಲರ್ ಮೌಲ್ಯದ ವಜ್ರಗಳು ಅಮೆರಿಕಾಗೆ ರಫ್ತಾಗುತ್ತವೆ. ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 1 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಜ್ರಗಳು ಅಮೆರಿಕಾಗೆ ರಫ್ತಾಗುತ್ತವೆ.
2-ಮೆಡಿಕಲ್ ಆಪ್ಲೆಯನ್ಸೆಸ್: ಇನ್ನು ಭಾರತದಿಂದ ಅಮೆರಿಕಾ ಆಮದು ಮಾಡಿಕೊಳ್ಳುವ ಮತ್ತೊಂದು ಪ್ರಮುಖ ಉತ್ಪನ್ನ ಅಂದ್ರೆ ಅದು ಮೆಡಿಕಲ್ ಅಪ್ಲೈಯನ್ಸೆಸ್. ವರ್ಷಕ್ಕೆ ಸುಮಾರು 7.44 ಬಿಲಿಯನ್ ಡಾಲರ್ಗಳ ಮೌಲ್ಯದ ಮೆಡಿಕಲ್ ಅಪ್ಲೆಯನ್ಸಸ್ ಅಮೆರಿಕಾಗೆ ರಫ್ತಾಗುತ್ತದೆ. ಭಾರತೀಯ ರೂಪಾಯಿಗಳಲ್ಲಿ ಒಟ್ಟು 7 ನೂರು ಕೋಟಿ ರೂಪಾಯಿಗಳ ಮೌಲ್ಯದ ಮೆಡಿಕಲ್ ಅಪ್ಲೆಯನ್ಸೆಸ್ ಭಾರತದಿಂದ ಅಮೆರಿಕಾಗೆ ರಫ್ತಾಗುತ್ತದೆ. ಇದರ ಮೇಲೆಯೂ ಈಗ ಶೇಕಡಾ 26 ರಷ್ಟು ಸುಂಕ ವಿಧಿಸಲಾಗುತ್ತದೆ.
3-ಜ್ಯುವೆಲ್ಲರಿ - ಚಿನ್ನಾಭರಣಗಳು ಭಾರತದಿಂದ ಅಮೆರಿಕಾಗೆ ರಫ್ತಾಗುವ ಮತ್ತೊಂದು ಮಹತ್ವದ ಉತ್ಪನ್ನ. ಅಮೆರಿಕಾದಲ್ಲಿ ಭಾರತೀಯ ಚಿನ್ನಾಭರಣಗಳಿಗೆ ಭಾರೀ ಬೇಡಿಕೆ ಇದೆ. ಹೀಗಾಗಿ ವಾರ್ಷಿಕ ಸುಮಾರು 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಜ್ಯುವೆಲ್ಲರಿಗಳು ಭಾರತದಿಂದ ಅಮೆರಿಕಾಗೆ ರಫ್ತಾಗುತ್ತದೆ.
4-ಕೃಷಿ ಉತ್ಪನ್ನಗಳು: ಅನೇಕ ಕೃಷಿ ಉತ್ಪನ್ನಗಳನ್ನು ಅಮೆರಿಕಾ ಭಾರತದಿಂದ ಆಮದು ಮಾಡಿಕೊಳ್ಳುತ್ತದೆ. ಡ್ರೈಫ್ರೂಟ್ಸ್, ಅದರಲ್ಲೂ ಪ್ರಮುಖವಾಗಿ ಗೊಡಂಬಿ, ಮಸಾಲೆ ಪದಾರ್ಥಗಳು, ಬಾಸ್ಮತಿ ಅಕ್ಕಿ, ಅನೇಕ ರೀತಿಯ ಹಣ್ಣುಗಳು ಹಾಗೂ ತರಕಾರಿಗಳನ್ನು ಅಮೆರಿಕಾ ಭಾರತದಿಂದ ಆಮದು ಮಾಡಿಕೊಳ್ಳುತ್ತದೆ. ವಾರ್ಷಿಕವಾಗಿ ಸುಮಾರು 4 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಕೃಷಿ ಉತ್ಪನ್ನಗಳು ಅಮರಿಕಾಗೆ ಭಾರತದಿಂದ ರಫ್ತು ಆಗುತ್ತವೆ
5- ರಿಫೈನಡ್ ಪೆಟ್ರೋಲಿಯಂ: ವಾರ್ಷಿಕವಾಗಿ ಭಾರತ ಅಮೆರಿಕಾಗೆ ಸುಮಾರು 4 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ರಿಫೈನಡ್ ಪೆಟ್ರೋಲಿಯಂನ್ನು ರಫ್ತು ಮಾಡುತ್ತದೆ. ಇದರ ಮೇಲೆಯೂ ಈಗ ಶೇಕಡಾ 26 ರಷ್ಟು ಸುಂಕ ವಿಧಿಸಲಾಗುತ್ತಿದೆ.
6-ಅಕ್ಕಿ: ಭಾರತದಿಂದ ಅಮೆರಿಕಾಗೆ ಅಪಾರ ಪ್ರಮಾಣದ ಅಕ್ಕಿ ಪ್ರತಿ ವರ್ಷ ರಫ್ತಾಗುತ್ತದೆ. ವಾರ್ಷಿಕವಾಗಿ ಸುಮಾರು 100 ಕೋಟಿ ಮೌಲ್ಯದ ಬಾಸ್ಮತಿ ಅಕ್ಕಿಯನ್ನು ಭಾರತ ಅಮೆರಿಕಾಗೆ ರಫ್ತು ಮಾಡುತ್ತದೆ. ಈಗ ಇದರ ಮೇಲೆ ಶೇಕಡಾ 26 ರಷ್ಟು ಆಮದು ಸುಂಕವನ್ನು ವಿಧಿಸಲಾಗುತ್ತದೆ.
7-ಟೆಕ್ಸಟೈಲ್ಸ್ ಅಂಡ್ ಅಪೇರಲ್ಸ್: ಟೆಕ್ಸ್ಟೈಲ್ಸ್ ಮತ್ತು ಅಪೇರೆಲ್ಸ್ ಅಂದ್ರೆ ಜವಳಿ ಮತ್ತು ಉಡುಪುಗಳು ಕೂಡ ಭಾರತದಿಂದ ಅಮೆರಿಕಾಗೆ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಮೌಲ್ಯದ ಉತ್ಪನ್ನಗಳು ರಫ್ತಾಗುತ್ತವೆ. ಇವುಗಳು ಕೂಡ ಸುಮಾರು 7,500 ಕೋಟಿಗೂ ರೂಪಾಯಿಗೂ ಅಧಿಕ ಮೌಲ್ಯದ ಜವಳಿ ಮತ್ತು ಉಡುಪುಗಳ ಉತ್ಪನ್ನಗಳು ಅಮೆರಿಕಾಗೆ ರಫ್ತಾಗುತ್ತದೆ.
8--ಆಮೋಮೋಟೀವ್ ಕಂಪೋನೆಂಟ್: 800 ಮಿಲಿಯನ್ ಡಾಲರ್ ಮೌಲ್ಯದ ಆಟೋಮೋಟೀವ್ ಕಂಪೋನೆಂಟ್ ರಫ್ತು ಭಾರತದಿಂದ ಪ್ರತಿವರ್ಷ ಅಮೆರಿಕಾಗೆ ಆಗುತ್ತದೆ. ಅಂದ್ರೆ ಸುಮಾರು 8 ಸಾವಿರ ಕೋಟಿ ರೂಪಾಯಿ ಮೌಲ್ಯದ ಈ ಉತ್ಪನ್ನಗಳು ಭಾರತದಿಂದ ಅಮೆರಿಕಾಗೆ ಪ್ರತಿವರ್ಷ ರಫ್ತಾಗುತ್ತವೆ.
9--ಕೆಮಿಕಲ್ಸ್ ಅಂಡ್ ಪೆಟ್ರೋಕೆಮಿಕಲ್ಸ್: 600 ಮಿಲಿಯನ್ ಡಾಲರ್ ಮೌಲ್ಯದ ಕೆಮಿಕಲ್ಸ್ ಅಂಡ್ ಪೆಟ್ರೋಕೆಮಿಕಲ್ಸ್ ರಫ್ತು. ಅಂದ್ರೆ ಭಾರತೀಯ ರುಪಾಯಿಗಳಲ್ಲಿ ಪ್ರತಿವರ್ಷ ಸುಮಾರು 6 ಸಾವಿರ ರೂಪಾಯಿಗಳ ಮೌಲ್ಯದ ಈ ಉತ್ಪನ್ನಗಳು ಅಮೆರಿಕಾಗೆ ರಫ್ತಾಗುತ್ತವೆ.
10--ಮೆಷಿನರಿ: 550 ಮಿಲಿಯನ್ ಡಾಲರ್ ಮೌಲ್ಯದ ಮೆಷಿನರಿ ರಫ್ತು. ಪ್ರತಿವರ್ಷ ಭಾರತದಿಂದ ಅಮೆರಿಕಾಗೆ ರಫ್ತಾಗುವ ಮಷಿನರಿಗಳ ಮೌಲ್ಯ ಒಟ್ಟು 5 ಸಾವಿರ ಕೋಟಿಗೂ ರೂಪಾಯಿಗೂ ಅಧಿಕ ಮೌಲ್ಯದಷ್ಟು
ಇದನ್ನೂ ಓದಿ: ಜನರೇ ಇಲ್ಲದ ಆಸ್ಟ್ರೇಲಿಯಾ ದ್ವೀಪಗಳ ಮೇಲೂ ಟ್ರಂಪ್ ತೆರಿಗೆ! ಪೆಂಗ್ವಿನ್ಗಳು ಸುಂಕ ಕಟ್ಟುತ್ತಾವಾ?
ಸದ್ಯ ಈಗ ಎಲ್ಲ ಉತ್ಪನ್ನಗಳ ಮೇಲೆ ಶೇಕಡಾ 26 ಅಂದರು ಕೂಡ ಅದು ಶೇಕಡಾ27ಕ್ಕೆ ಬಂದು ನಿಲ್ಲುತ್ತದೆ. ಶೇಖಡಾ 27 ರಷ್ಟು ಆಮದು ಸುಂಕ ಅಮೆರಿಕಾ ವಿಧಿಸಿದೆ. ಈಗಾಗಲೇ ಸ್ಟೀಲ್ ಆಲ್ಯುಮಿನಿಯಂ, ಆಟೋಮೊಬೈಲ್ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿರುವ ಟ್ರಂಪ್, ಈಗ ಭಾರತದ ಈ ಪ್ರಮುಖ 10 ಉತ್ಪನ್ನಗಳನ್ನು ಅಮೆರಿಕಾಕ್ಕೆ ರಫ್ತು ಮಾಡುವುದು ದುಬಾರಿಯಾಗುತ್ತದೆ. ಮತ್ತು ಈ ಹಿಂದೆ ಬರುತ್ತಿದ್ದ ಆದಾಯಕ್ಕಿಂತ ಕಡಿಮೆ ಆದಾಯ ಬರುತ್ತದೆ. ಅಲ್ಲದೇ ಈ ಸರಕುಗಳ ಉತ್ಪಾದನಾ ಸಂಸ್ಥೆಗಳಿಗೆ ಕೊಂಚ ಮಟ್ಟದ ಹಿನ್ನಡೆಯಾಗುತ್ತದೆ.
ಇದನ್ನೂ ಓದಿ:15 ದೇಶಗಳಿಗೆ ಡಬಲ್ ಶಾಕ್ ಕೊಟ್ಟ ಡೊನಾಲ್ಡ್ ಟ್ರಂಪ್ ಸುಂಕ; ಭಾರತಕ್ಕೆ ಎಷ್ಟು ನಷ್ಟ?
ಆದರೆ ಅಮೆರಿಕಾ ಸದ್ಯ ಭಾರತದ ಮೇಲೆ ವಿಧಿಸಿರುವ ಸುಮಾರು ಶೇಕಡಾ 27 ರಷ್ಟು ಆಮದು ಸುಂಕ ಭಾರತದ ಪಾಲಿಗೆ ಮಿಶ್ರ ಬೆಳೆವಣಿಗೆಯೇ ಹೊರತು ಹಿನ್ನಡೆಯಲ್ಲ ಎಂದು ಕೇಂದ್ರ ವಾಣಿಜ್ಯ ಇಲಾಖೆ ಹೇಳಿದೆ.ಅಮೆರಿಕಾ ವಿಧಿಸಿರುವ ಆಮದು ಸುಂಕದಿಂದ ಆಗುವ ಪರಿಣಾಮಗಳ ಬಗ್ಗೆ ಭಾರತದ ಕೇಂದ್ರ ವಾಣಿಜ್ಯ ಇಲಾಖೆಯಿಂದ ಮೌಲ್ಯಮಾಪನದ ಅಧ್ಯಯನ ಶುರುವಾಗಿದೆ. ಭಾರತ ಯುಎಸ್ನಿಂದ ಆಮದು ಆಗುವ ಉತ್ಪನ್ನಗಳ ಮೇಲೆ ಶೇಕಡಾ 52 ರಷ್ಟು ಆಮದು ಸುಂಕವನ್ನು ಹೇರಿದೆ. ಒಂದು ವೇಳೆ ಭಾರತ ಅಮೆರಿಕಾದ ಉತ್ಪನ್ನಗಳ ಮೇಲಿನ ಆಮದು ಸುಂಕ ಕಡಿಮೆ ಮಾಡಿದ್ದೆ ಆದಲ್ಲಿ ಅಮೆರಿಕಾ ಕೂಡ ತನ್ನ ಆಮದು ಸುಂಕದ ದರವನ್ನು ಇಳಿಸುವ ಸಾಧ್ಯತೆ ಇದೆ. ಇದೇ ವಿಚಾರದಲ್ಲಿ ಈಗ ಭಾರತ ಮತ್ತು ಅಮೆರಿಕಾದ ನಡುವೆ ದ್ವಿಪಕ್ಷೀಯ ಮಾತುಕತೆಗಳು ಜಾರಿಯಲ್ಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ