ಡೊನಾಲ್ಡ್‌ ಟ್ರಂಪ್ ಸರ್ಕಾರದಲ್ಲಿ ಇಬ್ಬರು ಭಾರತೀಯರಿಗೆ ಸೂಪರ್ ಪವರ್‌! ಇವರ ಹಿನ್ನೆಲೆ ಏನು?

author-image
Gopal Kulkarni
Updated On
ಡೊನಾಲ್ಡ್‌ ಟ್ರಂಪ್ ಸರ್ಕಾರದಲ್ಲಿ ಇಬ್ಬರು ಭಾರತೀಯರಿಗೆ ಸೂಪರ್ ಪವರ್‌! ಇವರ ಹಿನ್ನೆಲೆ ಏನು?
Advertisment
  • ಸರ್ಕಾರದ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ಸಜ್ಜಾದ ಟ್ರಂಪ್
  • ಚಿಕ್ಕ ಕ್ಯಾಬಿನೆಟ್, ದೊಡ್ಡ ಯೋಜನೆಗಳು, ನಮೋ ಮಂತ್ರವೇ ಮಾದರಿ
  • ಟ್ರಂಪ್ ಪಡೆಯಲ್ಲಿ ಈ ಬಾರಿ ಪ್ರಮುಖ ಸ್ಥಾನ ಪಡೆದ ಭಾರತೀಯರು

ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರೀ ಗಮನ ಸೆಳೆದಿದೆ. ಅದರಲ್ಲೂ ಭಾರತೀಯರ ಪಾಲಿಗಂತೂ ಇದು ತಮ್ಮದೇ ದೇಶದ ಚುನಾವಣೆ ಅನ್ನುವಷ್ಟರ ಮಟ್ಟಿಗೆ ಸಂಭ್ರಮ ಮನೆಮಾಡಿತ್ತು. ಅದರಂತೆ ಟ್ರಂಪ್​ ಗೆದ್ದೂ ಆಗಿದೆ. ಸದ್ಯ ಅವರ ಸುತ್ತ-ಮುತ್ತ ಇರುವ ಹುದ್ದೆ ಅಲಂಕರಿಸಿದವರು ಮತ್ತೆ ಸುದ್ದಿಯಲ್ಲಿದ್ದಾರೆ. ಭಾರತೀಯರಂತೂ ಖುಷ್ ಆಗಿದ್ದಾರೆ.

ಡಿಓಜಿಇ, 10 ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡಿಂಗ್​ನಲ್ಲಿರುವ ಮುದ್ದು ಮುದ್ದಾದ ಶ್ವಾನದ ಮೀಮ್. ಸದ್ಯ ಇದನ್ನೇ ಅಂದ್ರೆ ಡಾಗ್​ ಬಳಸಿಕೊಂಡು ಅಮೆರಿಕದಲ್ಲಿ ಟ್ರಂಪ್ ಸರ್ಕಾರ ಹೊಸ ಶಕ್ತಿಯುತ ಇಲಾಖೆಯನ್ನೇ ಹುಟ್ಟುಹಾಕಿದೆ. ಅದರ ಜವಾಬ್ದಾರಿ ಕೊಟ್ಟಿದ್ದು ಕೋಟಿ ಕುಳ ಎಲಾನ್ ಮಸ್ಕ್ ಹಾಗೂ ಭಾರತ ಮೂಲದ ವಿವೇಕ್ ರಾಮಸ್ವಾಮಿಗೆ.

publive-image

ಭಾರತ ಮೂಲದ ಉದ್ಯಮಿಗೆ ಪ್ರಮುಖ ಹುದ್ದೆ ನೀಡಿದ ಟ್ರಂಪ್
ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಪುಟದಲ್ಲಿ ಖ್ಯಾತ ಉದ್ಯಮಿ ಎಲಾನ್ ಮಸ್ಕ್​ಗೆ ಪ್ರಮುಖ ಹುದ್ದೆ ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ ಉಮೇದುವಾರಿಕೆಯಿಂದ ಹಿಂದೆ ಸರಿದು ಟ್ರಂಪ್ ಸ್ಪರ್ಧೆಗೆ ಅನುವು ಮಾಡಿಕೊಟ್ಟು ಬೆಂಬಲಿಸಿದ್ದ ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿಗೂ ಪ್ರಾಮುಖ್ಯ ನೀಡಲಾಗಿದೆ.

ಇದನ್ನೂ ಓದಿ:ಟ್ರಂಪ್‌ಗೆ ಹೆದರಿ ಗರ್ಭಪಾತದ ಮಾತ್ರೆಗಳಿಗೆ ಮುಗಿಬಿದ್ದ ಅಮೆರಿಕಾದ ಯುವತಿಯರು; ಯಾಕೆ ಗೊತ್ತಾ?

ಟ್ರಂಪ್ ಪ್ರಚಾರ ಸಂದರ್ಭ ಭರವಸೆ ನೀಡಿದ್ದಂತೆ ಸರಕಾರದ ದಕ್ಷತಾ ಇಲಾಖೆಯ ನೇತೃತ್ವ ನೀಡಲಾಗಿದೆ. ಈ ಮೂಲಕ ರಾಮಸ್ವಾಮಿಗೂ ಮಸ್ಕ್ ಜೊತೆಗೆ ಹೊಣೆಗಾರಿಕೆ ಹಂಚಲಾಗಿದೆ. ಸರ್ಕಾರದ ಖರ್ಚು ವೆಚ್ಚವನ್ನ ಕಡಿತಗೊಳಿಸಲು ಇಬ್ಬರಿಗೂ ಸೇರಿ ಟಾಸ್ಕ್‌ ನೀಡಲಾಗಿದೆ. ಈ ಮೂಲಕ ಬ್ಯೂರೋಕ್ರಸಿಯ ಪಾತ್ರವನ್ನೇ ಕಡಿತಗೊಳಸುವ ಉದ್ದೇಶ ಟ್ರಂಪ್‌ರದ್ದಾಗಿದೆ.

ಇದನ್ನೂ ಓದಿ:ಟಿಪ್ಪು ಸುಲ್ತಾನ್​ ಖಡ್ಗ ಕೋಟಿ ಕೋಟಿ ಬೆಲೆಗೆ ಹರಾಜು.. ಯುದ್ಧದ ಕತ್ತಿಗೆ ಎಷ್ಟು ವರ್ಷಗಳ ಇತಿಹಾಸ ಇದೆ?

ಈ ನಿಟ್ಟಿನಲ್ಲಿ ಎಲಾನ್‌ ಮಸ್ಕ್‌ ಹಾಗೂ ವಿವೇಕ್‌ ರಾಮಸ್ವಾಮಿ ಕೆಲಸ ಮಾಡಲಿದ್ದಾರೆ. ಪ್ರಧಾನಿ ಮೋದಿ ಪ್ರಸಿದ್ಧ ಮಂತ್ರವಾಗಿರುವ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಮಾದರಿಯನ್ನು ಅಮೆರಿಕದಲ್ಲೂ ಜಾರಿಗೆ ತರಲು ಉದ್ದೇಶಿಸಿರುವ ಟ್ರಂಪ್‌, ಆಡಳಿತ ಸುಧಾರಣಾ ಇಲಾಖೆಗೆ ಇಬ್ಬರನ್ನೂ ನೇಮಕ ಮಾಡಿದ್ದಾರೆ. ಅಮೆರಿಕ ಸರ್ಕಾರದ ಸುಧಾರಣೆ ಹಾಗೂ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವ ಹೊಣೆಗಾರಿಕೆಯನ್ನು ಹಂಚಿಕೆ ಮಾಡಿದ್ದಾರೆ. ಈ ಇಬ್ಬರು ಅಮೆರಿಕನ್ನರು ಜತೆಯಾಗಿ ಸೇವ್ ಅಮೆರಿಕ ಚಳವಳಿಯನ್ನು ಸಾಕಾರಗೊಳಿಸಲು ಅಗತ್ಯವಾಗಿರುವ ಸರಕಾರಿ ಅಧಿಕಾರಶಾಹಿಯನ್ನು ಭಗ್ನಗೊಳಿಸಲಿದ್ದಾರೆ. ವಿಪರೀತ ನಿಯಂತ್ರಣಗಳನ್ನು ಕಡಿತಗೊಳಿಸಲು ಮತ್ತು ವ್ಯರ್ಥ ವೆಚ್ಚಗಳಿಗೆ ಕತ್ತರಿ ಹಾಕಲು ಮತ್ತು ಫೆಡರಲ್ ಸಂಸ್ಥೆಗಳನ್ನು ಮರುರಚನೆ ಮಾಡಲು ನನ್ನ ಆಡಳಿತಕ್ಕೆ ಹಾದಿ ಸುಗಮಗೊಳಿಸಲಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ

ಇನ್ನು ಅಮೆರಿಕದ ಗುಪ್ತಚರ ಇಲಾಖೆಯ ನಿರ್ದೇಶಕರನ್ನಾಗಿ ಟ್ರಂಪ್ ಮತ್ತೊಬ್ಬ ಭಾರತದ ಮೂಲದ ತುಳಸಿ ಗಬಾರ್ಡ್​ರನ್ನು ನೇಮಿಸಿದ್ದಾರೆ. ಡೆಮೊಕ್ರಾಟಿಕ್ ಕಾಂಗ್ರೆಸ್ ನಾಯಕಿಯಾಗಿದ್ದವರು. ಡೊನಾಲ್ಡ್ ಟ್ರಂಪ್ ಬೆಂಬಲಿಗರಲ್ಲಿ ಒಬ್ಬರಾದ ತುಳಸಿ, ಮಿಲಿಟರಿಯಲ್ಲಿ ಲೆಫ್ಟಿನೆಂಟ್​ ಕೊಲೊನೆಲ್ ಆಗಿದ್ದವರು.

publive-image

ಯಾರು ಈ ತುಳಸಿ ಗಬಾರ್ಡ್​?

ಇರಾಕ್ ಜೊತೆಗಿನ ಘರ್ಷಣೆಯ ವೇಳೆ ಆಯಕಟ್ಟಿನ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಮಲಾ ಹ್ಯಾರೀಸ್ ಜೊತೆಗಿನ ಮೊದಲ ಮುಖಾಮುಖಿ ಚರ್ಚೆಗೆ ಟ್ರಂಪ್​ಗೆ ಸ್ಕ್ರಿಪ್ಟ್ ಬರೆದುಕೊಟ್ಟಿದ್ದರು.

publive-image

ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಪ್ರಮಾಣವಚನ ಸ್ವೀಕರಿಸಿ ಸುದ್ದಿಯಾಗಿದ್ದರು. 43 ವರ್ಷದ ತುಳಸಿಗೆ ಐದು ಮಕ್ಕಳಿದ್ದು ಭಕ್ತಿ, ಜೈ, ಆರ್ಯನ್, ತುಳಸಿ, ವೃಂದಾವನ್ ಅಂತ ಹೆಸರಿಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಅಮೆರಿಕಾದ ಸಮೋವಾ ಎನ್ನುವ ದ್ವೀಪದಲ್ಲಿ ಗಬಾರ್ಡ್ ದಂಪತಿಗೆ ನಾಲ್ಕನೇ ಮಗಳಾಗಿ ಜನಿಸಿದ ತುಳಸಿ, ಎರಡನೇ ವಯಸ್ಸಿನಲ್ಲಿ ಕುಟುಂಬದ ಜೊತೆಗೆ ಅಲ್ಲಿಂದ ಹವಾಯಿ ದ್ವೀಪ ಸಮೂಹಕ್ಕೆ ವಲಸೆ ಹೋದರು. ಇವರ ತಂದೆ ಕ್ರಿಶ್ಚಿಯನ್ ಮೂಲದವರಾದರೂ ಮಂತ್ರಪಠಣ, ಧ್ಯಾನ ಮುಂತಾದವುಗಳಲ್ಲಿ ಭಾರೀ ಆಸಕ್ತಿಯನ್ನು ಹೊಂದಿದ್ದಾರೆ

ಒಟ್ಟಾರೆಯಾಗಿ, ಟ್ರಂಪ್ ಆಡಳಿತದಲ್ಲಿ ಭಾರತೀಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಬಹುಮುಖ್ಯ ಹುದ್ದೆಗಳನ್ನು ಅಲಂಕರಿಸುವ ಮೂಲಕ ದೇಶಕ್ಕೆ ಕೀರ್ತಿ ತರುತ್ತಿದ್ದಾರೆ.

ವಿವೇಕ್‌ ರಾಮಸ್ವಾಮಿ ಯಾರು?
ವಿವೇಕ್ ಗಣಪತಿ ರಾಮಸ್ವಾಮಿ ಭಾರತೀಯ ಅಮೆರಿಕನ್‌ ವ್ಯಕ್ತಿ
ಮೈಸೂರು ನಂಟು ಹೊಂದಿರುವ ಅಮೆರಿಕ ಉದ್ಯಮಿ ವಿವೇಕ್‌
ತಂದೆ ಗಣಪತಿ-ತಾಯಿ ಗೀತಾ ಕೇರಳ ಮೂಲದ ತಮಿಳು ಭಾಷಿಕರು
ಬಹಳ ಹಿಂದೆಯೇ ಉದ್ಯೋಗ ಅರಸಿ ಅಮೆರಿಕಕ್ಕೆ ಸ್ಥಳಾಂತರ
ಕ್ಯಾಲಿಕಟ್‌ನಲ್ಲಿ ವ್ಯಾಸಂಗ ಮಾಡಿದ್ದ ತಂದೆ ಗಣಪತಿ ರಾಮಸ್ವಾಮಿ
ತಾಯಿ ಮೈಸೂರು ವೈದ್ಯ ಕಾಲೇಜು, ಸಂಶೋಧನಾ ಸಂಸ್ಥೆಯಲ್ಲಿ ಪದವಿ
2014ರಲ್ಲಿ ರೋವಂಟ್ ಸೈನ್ಸಸ್ ಎಂಬ ಔಷಧಿ ಕಂಪನಿ ಸ್ಥಾಪನೆ
2023ರಲ್ಲಿ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಹುದ್ದೆಗೆ ಸ್ಪರ್ಧೆ
ಕೊನೆಗೆ ಟ್ರಂಪ್‌ಗೆ ಬೆಂಬಲ ಸೂಚಿಸಿ ಕಣದಿಂದ ಹಿಂದಕ್ಕೆ ಸರಿದಿದ್ದರು
ಚುನಾವಣೆಯಲ್ಲಿ ಟ್ರಂಪ್​ ಪರ ನಿಂತು ಗಟ್ಟಿಯಾಗಿ ಪ್ರಚಾರ
ಟ್ರಂಪ್‌ ಸರ್ಕಾರದಲ್ಲಿ ಪ್ರಮುಖ ಹುದ್ದೆ ಗಿಟ್ಟಿಸಿಕೊಂಡ ವಿವೇಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment