ಅಧ್ಯಕ್ಷರಾದ ಮೇಲೆ ಮೊದಲ ಭೇಟಿಯೇ ಭಾರತ, ಚೀನಾ.. ಟ್ರಂಪ್ ನಿರ್ಧಾರದ ಹಿಂದಿದೆ ರಹಸ್ಯ ಕಾರಣ..

author-image
Ganesh
Updated On
43 ಕೋಟಿ ರೂಪಾಯಿ ಕೊಟ್ರೆ ಅಮೆರಿಕಾದ ಪೌರತ್ವ.. ಏನಿದು ಗೋಲ್ಡ್‌ ಕಾರ್ಡ್‌? ಕಂಪ್ಲೀಟ್‌ ಮಾಹಿತಿ ಇಲ್ಲಿದೆ!
Advertisment
  • ಅಮೆರಿಕದ 47ನೇ ಅಧ್ಯಕ್ಷರಾಗಿ ಟ್ರಂಪ್ ಪ್ರತಿಜ್ಞಾವಿಧಿ
  • ಇಂದು ರಾತ್ರಿ 10.30 ರಿಂದ ಟ್ರಂಪ್ ದರ್ಬಾರ್ ಆರಂಭ
  • ಚೀನಾ, ಭಾರತವನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ?

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald trump ) ಇವತ್ತು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ಟ್ರಂಪ್ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ವಿದೇಶಾಂಗ ನೀತಿ ಯಾವ ದಿಕ್ಕಿನತ್ತ ಸಾಗಲಿದೆ ಅನ್ನೋದನ್ನು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಟ್ರಂಪ್ ಏಷ್ಯಾದತ್ತ ಹೆಚ್ಚು ಗಮನ ಹರಿಸಲಿದ್ದಾರೆ. ಮುಂದುವರಿದ ಭಾಗವಾಗಿ ಶೀಘ್ರದಲ್ಲೇ ಭಾರತ ಮತ್ತು ಚೀನಾಗೆ ಭೇಟಿ ಕೊಡಲಿದ್ದಾರೆ ಎಂದು ಟ್ರಂಪ್ ಟೀಂ ಹೇಳಿಕೊಂಡಿದೆ. ಟ್ರಂಪ್ ಅವರ ವಿದೇಶಾಂಗ ಕಾರ್ಯಸೂಚಿಯಲ್ಲಿ ಭಾರತ ಮತ್ತು ಚೀನಾ ಪ್ರಮುಖ ಸ್ಥಾನ ಪಡೆಯಲಿವೆ. ಅವರ ಮುಂದಿನ ವಿದೇಶ ಭೇಟಿ ಪ್ಲಾನ್​ನಲ್ಲಿ ಈ ಎರಡು ದೇಶಗಳಿವೆ. ಯಾಕೆಂದರೆ ಭಾರತ ಮತ್ತು ಚೀನಾ ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಾಗಿವೆ. ಈ ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಲಭಗೊಳಿಸಲು ಟ್ರಂಪ್ ಎದುರು ನೋಡುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಚೀನಾ ಮೇಲಿನ ನಿಲುವು ಬದಲಾಗಿದೆ

ಚೀನಾ ಮತ್ತು ಅಮೆರಿಕ ನಡುವಿನ ಸಂಬಂಧ ಸುಧಾರಿಸಲು ಟ್ರಂಪ್ ಬಿಜಿಂಗ್​​​ಗೆ ಭೇಟಿ ನೀಡಲಿದ್ದಾರೆ. ಅದರ ಹೊರತಾಗಿ ಸಂಭವನೀಯ ಭಾರತ ಭೇಟಿ ಬಗ್ಗೆಯೂ ಸಲಹೆಗಾರರೊಂದಿಗೆ ಚರ್ಚಿಸಿದ್ದಾರೆ. ಇಷ್ಟೇ ಅಲ್ಲ, ಟ್ರಂಪ್ ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ (Xi Jinping) ಜೊತೆ ಫೋನ್​​ನಲ್ಲಿ ಮಾತುಕತೆ ನಡೆಸಿದ್ದಾರೆ. ಜಿನ್​ ಪಿಂಗ್ ಜೊತೆಗಿನ ಸಂಭಾಷಣೆ ಫಲಪ್ರದವಾಗಿತ್ತು ಎಂದು ಟ್ರಂಪ್ ಈಗಾಗಲೇ ತಿಳಿಸಿದ್ದಾರೆ. ಚುನಾವಣೆ ವೇಳೆ ಟ್ರಂಪ್ ಚೀನಾ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದರು. ಈಗ ಚೀನಾ ಮೇಲಿನ ನಿಲುವನ್ನು ಟ್ರಂಪ್ ಬದಲಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: ಟ್ರಂಪ್ ಅಧಿಕಾರಕ್ಕೂ ಮುನ್ನವೇ ದೊಡ್ಡ ಬೆಳವಣಿಗೆ; ಹೆದರಿದ ಹಮಾಸ್, 15 ತಿಂಗಳದ ಯುದ್ಧಕ್ಕೆ ಫುಲ್​ಸ್ಟಾಪ್

ಟ್ರಂಪ್‌ಗೆ ಭಾರತ-ಚೀನಾ ಯಾಕೆ ಬೇಕು..?

ಅಮೆರಿಕದ ಆಪ್ತ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಚೀನಾ ಮತ್ತು ಭಾರತದ ಜೊತೆ ಮತ್ತಷ್ಟು ಸ್ನೇಹ ಸಂಬಂಧ ಬೆಳೆಸುವ ಮೂಲಕ ಟ್ರಂಪ್ ಜಾಗತಿಕ ಸಂದೇಶ ಕೊಡಲು ಹೊರಟಿದ್ದಾರೆ. ಅದೇ ಕಾರಣಕ್ಕಾಗಿಯೇ ಯುರೋಪ್, NATO, ಕೆನಡಾ ಮತ್ತು ಮೆಕ್ಸಿಕೊ ದೇಶಗಳಿಂಗತ ಈ ಎರಡು ದೇಶಗಳಿಗೆ ಹೆಚ್ಚು ಆದ್ಯತೆ ನೀಡಲು ಟ್ರಂಪ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಭಾರತದೊಂದಿಗಿನ ಟ್ರಂಪ್ ಸಂಬಂಧ ಎರಡು ದೇಶಗಳ ವ್ಯಾಪಾರದಲ್ಲಿ ವೇಗ ಪಡೆಯಲಿದೆ. ಟ್ರಂಪ್ ಕೂಡ ದೊಡ್ಡ ಉದ್ಯಮಿ. ಯಾವುದೇ ವ್ಯಾಪಾರವಿಲ್ಲದೆ ಆರ್ಥಿಕತೆ ಬಲಪಡಿಸಲು ಸಾಧ್ಯವಿಲ್ಲ ಎಂದು ಚೆನ್ನಾಗಿ ತಿಳಿದಿದೆ. ಇದು ಪ್ರಮಾಣ ವಚನ ಸ್ವೀಕಾರದ 100 ವಿಶೇಷ ಅತಿಥಿಗಳ ಪಟ್ಟಿಯಿಂದಲೇ ಸ್ಪಷ್ಟವಾಗಿದೆ. ಈ ಅತಿಥಿಗಳಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸೇರಿದಂತೆ ಹಲವು ದೇಶಗಳ ದೊಡ್ಡ ಕೈಗಾರಿಕೋದ್ಯಮಿಗಳು ಸೇರಿದ್ದಾರೆ. ಇನ್ನು ಬೆಲೆ ಇಳಿಕೆಯಂತಹ ದೇಶೀಯ ಸಮಸ್ಯೆಗಳನ್ನೂ ಟ್ರಂಪ್ ಗಂಭೀರವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ: ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನವೇ ಕುಸಿದ ಚಿನ್ನದ ಬೆಲೆ.. ಮತ್ತಷ್ಟು ಇಳಿಕೆ ಆಗುತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment