/newsfirstlive-kannada/media/post_attachments/wp-content/uploads/2024/11/Donald-Trump.jpg)
ಅಧ್ಯಕ್ಷೀಯ ಚುನಾವಣೆಗೂ ಮುನ್ನ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುವ ಸಂಚು ನಡೆದಿತ್ತು, ಅದರ ಹಿಂದೆ ಇರಾನ್ ಕೈವಾಡ ಇದೆ ಎಂದು ಅಮೆರಿಕ ಆರೋಪಿಸಿದೆ.
ಮ್ಯಾನ್ಹ್ಯಾಟನ್ ಫೆಡರಲ್ ಕೋರ್ಟ್ಗೆ ನಿನ್ನೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಇರಾನ್ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ನ ಅಧಿಕಾರಿಯೊಬ್ಬರು ಬಾಡಿಗೆ ಶೂಟರ್ಗೆ ಟ್ರಂಪ್ ಮೇಲೆ ನಿಗಾ ಇಡಲು ಹಾಗೂ ಕೊಲ್ಲಲು ಸೂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇರಾನ್ನ ಸರ್ಕಾರಿ ಉದ್ಯೋಗಿ ಆಗಿದ್ದ ಪರ್ಹಾದ್ ಶಾಕೇರಿಗೆ ಟ್ರಂಪ್ ಅವರನ್ನು ಕೊಲ್ಲುವ ಜವಾಬ್ದಾರಿ ನೀಡಲಾಗಿತ್ತು. ಅದು ಕೂಡ 7 ದಿನದಲ್ಲಿ ಸಾಯಿಸುವ ಪ್ಲಾನ್ ನಡೆದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇರಾನ್ನಲ್ಲಿದ್ದಾಗ ಎಫ್ಬಿಐ ಏಜೆಂಟ್ಗಳೊಂದಿಗೆ ರೆಕಾರ್ಡ್ ಮಾಡಿದ ಫೋನ್ ಸಂಭಾಷಣೆಗಳಲ್ಲಿ ಶಾಕೇರಿ ಪಿತೂರಿಗಳ ವಿವರವನ್ನು ಬಹಿರಂಗಪಡಿಸಲಾಗಿದೆ. ಶಾಕೇರಿ ಮೂಲತಃ ಅಫ್ಘಾನ್ ಪ್ರಜೆಯಾಗಿದ್ದಾನೆ. ಬಾಲ್ಯದಲ್ಲಿ ಆತ ಅಮೆರಿಕಗೆ ವಲಸೆ ಬಂದಿದ್ದಿದ್ದ. ಅಲ್ಲಿ ದರೋಡೆ ಪ್ರಕರಣದಲ್ಲಿ ಸಿಲುಕಿಕೊಂಡು 14 ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಗಡಿಪಾರು ಆಗಿದ್ದ. ಈಗ ಟೆಹ್ರಾನ್ನಿಂದ ನೇಮಕಗೊಂಡ ಅಪರಾಧಿಗಳ ಜಾಲವನ್ನು ನಡೆಸುತ್ತಿದ್ದಾನೆ. ಅಂತೆಯೇ ಈತ ಟ್ರಂಪ್ ಹತ್ಯೆಗೆ ಗುತ್ತಿಗೆ ಪಡೆದಿದ್ದು, ಇರಾನ್ನಿಂದ ಈತ ಹಣವನ್ನು ಪಡೆದುಕೊಂಡಿದ್ದಾನೆ ಎಂದು ಅಮೆರಿಕ ಆರೋಪಿಸಿದೆ.
ಜುಲೈ 13 ರಂದು ಗುಂಡಿನ ದಾಳಿ
ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗುತ್ತಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ರನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ದೊಡ್ಡಣ್ಣ ಆಗುತ್ತಿದ್ದಾರೆ. ಬೆನ್ನಲ್ಲೇ ಅವರ ವಿರುದ್ಧ ನಡೆದ ದೊಡ್ಡ ಪಿತೂರಿಯ ಅಸಲಿ ವಿಚಾರ ಬಯಲಿಗೆ ಬಂದಿದೆ. ಟ್ರಂಪ್ ಜೀವಬೆದರಿಕೆ ಎದುರಿಸುತ್ತಿರೋದು ಇದೇ ಮೊದಲಲ್ಲ. ಜುಲೈ 13 ರಂದು ಪೆನ್ಸಿಲ್ವೇನಿಯಾದ ಬಟ್ಲರ್ ನಗರದಲ್ಲಿ ಟ್ರಂಪ್ ಱಲಿ ಮೇಲೆ ಗುಂಡು ಹಾರಿಸಲಾಗಿತ್ತು. ಈ ವೇಳೆ ಟ್ರಂಪ್ ಅವರ ಕಿವಿಗೆ ಗುಂಡು ತಗುಲಿತ್ತು. ಈ ಘಟನೆ ನಡೆದು 64 ದಿನಗಳ ಬಳಿಕ ಮತ್ತೊಮ್ಮೆ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಆ ಸಮಯದಲ್ಲಿ ಟ್ರಂಪ್ ಫ್ಲೊರಿಡಾಡ ಪಾಮ್ ಬೀಚ್ ಕಂಟಿಯ ಗಾಲ್ಫ್ ಕ್ಲಬ್ನಲ್ಲಿದ್ದರು.
ಇದನ್ನೂ ಓದಿ:ಡೊನಾಲ್ಡ್ ಟ್ರಂಪ್ ಎಷ್ಟು ಮದುವೆ ಆಗಿದ್ದಾರೆ? ಮೆಲಾನಿಯಾ ಎಷ್ಟು ವರ್ಷ ಚಿಕ್ಕವರು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ