ಡೊನಾಲ್ಡ್ ಟ್ರಂಪ್ ಹೆಸರಿನವನಾದ ನಾನು.. ಅಮೆರಿಕ 47ನೇ ಅಧ್ಯಕ್ಷರ ಅಧಿಕೃತ ದರ್ಬಾರ್ ಆರಂಭ! VIDEO

author-image
admin
Updated On
ಡೊನಾಲ್ಡ್ ಟ್ರಂಪ್ ಹೆಸರಿನವನಾದ ನಾನು.. ಅಮೆರಿಕ 47ನೇ ಅಧ್ಯಕ್ಷರ ಅಧಿಕೃತ ದರ್ಬಾರ್ ಆರಂಭ! VIDEO
Advertisment
  • ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ
  • ಪ್ರಮಾಣವಚನ ಬೋಧಿಸಿದ ಅಮೆರಿಕ ಸುಪ್ರೀಂಕೋರ್ಟ್​ ಜಡ್ಜ್
  • ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ದರ್ಬಾರ್ ಆರಂಭ

ವಾಷಿಂಗ್ಟನ್: ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್ ಅವರ 2.O ಅಧಿಕಾರ ಅಧಿಕೃತವಾಗಿ ಆರಂಭವಾಗಿದೆ. ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಅಮೆರಿಕ ಸುಪ್ರೀಂಕೋರ್ಟ್​ ನ್ಯಾ.ಜಾಬ್ ರಾಬರ್ಟ್ಸ್ ಅವರು ಟ್ರಂಪ್​ಗೆ ಪ್ರಮಾಣವಚನ ಬೋಧಿಸಿದರು.

publive-image

ನಾನು ಡೊನಾಲ್ಡ್ ಜಾನ್ ಟ್ರಂಪ್ ಹೆಸರಿನವನಾದ ನಾನು ಅಮೆರಿಕಾದ ಅಧ್ಯಕ್ಷನಾಗಿ ಸಂವಿಧಾನಕ್ಕೆ ಬದ್ಧನಾಗಿರುತ್ತೇನೆ ಎಂದು ಪ್ರತಿಜ್ಞೆ ಸ್ವೀಕಾರ ಮಾಡಿದರು.

ಇದನ್ನೂ ಓದಿ: ವಿಶ್ವದ ಕಣ್ಣು ಡೊನಾಲ್ಡ್ ಟ್ರಂಪ್ ಮೇಲೆ.. ಅಧಿಕಾರ ಸ್ವೀಕರಿಸ್ತಿದ್ದಂತೆ ಮೊದಲ ಅಜೆಂಡಾ ಏನು ಗೊತ್ತಾ? 

ಅಮೆರಿಕ ಸಂಸತ್ ಭವನದಲ್ಲಿ ಟ್ರಂಪ್ ಅವರ ಪದಗ್ರಹಣ ಸಮಾರಂಭ ನಡೀತು. ಕ್ಯಾಪಿಟಲ್ ರೊಟುಂಡಾದಲ್ಲಿ ಪ್ರಮಾಣವಚನ ಸಮಾರಂಭದಲ್ಲಿ ಮಾಜಿ ಅಧ್ಯಕ್ಷ ಜೋ ಬೈಡನ್‌ ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗಿದ್ದರು. ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಜೈಶಂಕರ್ ಉಪಸ್ಥಿತರಿದ್ದರು.


">January 20, 2025

ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಅಮೆರಿಕದ ನೂತನ ಉಪಾಧ್ಯಕ್ಷರಾಗಿ ಜೆ.ಡಿ ವ್ಯಾನ್ಸ್​ ಅವರಿಗೂ ನ್ಯಾ.ಜಾಬ್ ರಾಬರ್ಟ್ಸ್ ಪ್ರಮಾಣ ವಚನ ಬೋಧಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment