FBIಗೆ ಭಾರತೀಯ ಕಾಶ್​ ಪಟೇಲ್ ಸರದಾರ; ಯಾವ್ದೇ ಗೃಹದಲ್ಲಿದ್ರೂ ಹುಡುಕಿ ಹೊಡೀತಿವಿ ಎಂದ ಟ್ರಂಪ್ ಆಪ್ತ!

author-image
Bheemappa
Updated On
FBIಗೆ ಭಾರತೀಯ ಕಾಶ್​ ಪಟೇಲ್ ಸರದಾರ; ಯಾವ್ದೇ ಗೃಹದಲ್ಲಿದ್ರೂ ಹುಡುಕಿ ಹೊಡೀತಿವಿ ಎಂದ ಟ್ರಂಪ್ ಆಪ್ತ!
Advertisment
  • ಈ ಗ್ರಹದ ಯಾವುದೇ ಮೂಲೆಯಲ್ಲೂ ಇದ್ದರೂ ಬೇಟೆ ಆಡುತ್ತೇವೆ
  • ಎಫ್​ಬಿಐ ಮೇಲಿನ ನಂಬಿಕೆಯನ್ನು ಪುನಃ ನಿರ್ಮಿಸುತ್ತೇವೆ- ಪಟೇಲ್
  • ಅಧ್ಯಕ್ಷ ಟ್ರಂಪ್, ಅಟಾರ್ನಿ ಜನರಲ್ ಬೋಂದಿಗೆ ಧನ್ಯವಾದಗಳು

ಅಮೆರಿಕದ ಫೆಡರಲ್ ಬ್ಯೂರೋ ಆಫ್ ತನಿಖಾ ಸಂಸ್ಥೆ (ಎಫ್​​ಬಿಐ)ಗೆ ಭಾರತ ಮೂಲದ ಕಾಶ್ ಪಟೇಲ್ ಅವರು ನೂತನ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಎಫ್​​ಬಿಐ ಮುಖ್ಯಸ್ಥರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕಾಶ್ ಪಟೇಲ್ ಅವರು ಪಾತ್ರರಾಗಿದ್ದಾರೆ. ಎಫ್​ಬಿಐ ಅಮೆರಿಕದ ನ್ಯಾಯಾಂಗ ಇಲಾಖೆಯ ಪ್ರಮುಖ ತನಿಖಾ ಸಂಸ್ಥೆ ಆಗಿದೆ.

ಸದ್ಯ ಅಮೆರಿಕದ ಎಫ್​ಬಿಐನ ಮುಖ್ಯಸ್ಥರಾಗಿ ಆಯ್ಕೆ ಆದ ಭಾರತದ ಗುಜರಾತ್​ ಮೂಲದ ಕಾಶ್ ಪಟೇಲ್ ಅವರು ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಎಫ್​ಬಿಐನ ನಿರ್ದೇಶಕರನ್ನು ಆಯ್ಕೆ ಮಾಡಲು ವೋಟ್ ಮಾಡಲಾಗಿತ್ತು. ಇದರಲ್ಲಿ 51 ಮತಗಳು ಕಾಶ್ ಪಟೇಲ್​ಗೆ ಪರವಾಗಿ ಇದ್ದರೆ, 49 ವೋಟ್​ಗಳು ವಿರುದ್ಧವಾಗಿ ಬಂದಿವೆ. ಎರಡು ವೋಟ್​ ಅಧಿಕ ಪಡೆದಿದ್ದರಿಂದ ನಿರ್ದೇಶಕರ ಸ್ಥಾನಕ್ಕೆ ಪಟೇಲ್​ ಅರ್ಹರು ಆಗಿದ್ದಾರೆ.

ತಾವು ಗೆಲವು ಸಾಧಿಸುತ್ತಿದ್ದಂತೆ ಕಾಶ್ ಪಟೇಲ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಿಷನ್ ಡೈರೆಕ್ಟರ್ ಕ್ಲೀಯರ್ ಆಗಿದೆ. ಒಳ್ಳೆಯ ಪೊಲೀಸರು ಒಳ್ಳೆಯವರಾಗಿ ಇಲಾಖೆಯಲ್ಲಿ ಉಳಿಯಲಿದ್ದಾರೆ. ಎಫ್​ಬಿಐ ಬಗೆಗಿನ ನಂಬಿಕೆಯನ್ನು ಪುನಃ ನಿರ್ಮಿಸಲಾಗುವುದು. ಎಫ್​ಬಿಐಗೆ 9ನೇ ನಿರ್ದೇಶಕರಾಗಿ ಆಯ್ಕೆ ಆಗಿದ್ದಕ್ಕೆ ಸಂತಸ ಇದೆ. ಅಧ್ಯಕ್ಷ ಟ್ರಂಪ್ ಹಾಗೂ ಅಟಾರ್ನಿ ಜನರಲ್ ಬೋಂದಿ ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಹುಟ್ಟೂರಿನ ಜನರ ಹೃದಯ ಗೆದ್ದ ಹನುಮಂತು; ಗ್ರಾಮ ದೇವತೆ ಜಾತ್ರೆಯಲ್ಲಿ ಹಳ್ಳಿಹೈದ..!

publive-image

G-Men ನಿಂದ 9/11 ರವರೆಗೆ ರಾಷ್ಟ್ರವನ್ನು ಎಫ್​ಬಿಐ ಸುರಕ್ಷಿತವಾಗಿ ರಕ್ಷಣೆ ಮಾಡಿದೆ. ಅಮೆರಿಕನ್ಸ್​ ನ್ಯಾಯಕ್ಕೆ ಬದ್ಧವಾಗಿರುವ ಎಫ್​ಬಿಐಗೆ ಈಗಲೂ ಬದ್ಧರಾಗಿದ್ದಾರೆ. ನ್ಯಾಯ ವ್ಯವಸ್ಥೆಯು ರಾಜಕೀಯಕರಣ ಆಗುತ್ತಿರುವುದರಿಂದ ಜನರಿಂದ ಸ್ವಲ್ಪ ನಂಬಿಕೆ ಕಳೆದುಕೊಂಡಿದೆ. ಆದರೆ ಅದು ಇಂದಿಗೆ ಕೊನೆಗೊಳ್ಳುತ್ತದೆ. ಸಂಸ್ಥೆಯಲ್ಲಿ ಮಹಿಳೆಯರು, ಪುರುಷರು ಜೊತೆಯಲ್ಲಿ ಕೆಲಸ ಮಾಡಿ ಅಮೆರಿಕದ ಜನರು ಹೆಮ್ಮೆ ಪಡುವಂತೆ ಎಫ್​ಬಿಐಯನ್ನು ಫುನಃ ನಿರ್ಮಿಸಲಾಗುವುದು. ಅಮೆರಿಕಕ್ಕೆ ಹಾನಿ ಮಾಡಲು ಹಾಗೂ ಅಮೆರಿಕನ್​ರಿಗೆ ತೊಂದರೆ ಮಾಡಬೇಕು ಅಂದುಕೊಂಡವರಿಗೆ ಇದು ಎಚ್ಚರಿಕೆ. ನಮಗೆ ಹಾನಿ ಮಾಡಿ ಈ ಗ್ರಹದ ಯಾವುದೇ ಮೂಲೆಯಲ್ಲೂ ಇದ್ದರೂ ನಾವು ನಿಮ್ಮನ್ನು ಅಟ್ಟಾಡಿಸಿ ಬೇಟೆಯಾಡುತ್ತೇವೆ ಎಂದು ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.


">February 20, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment