/newsfirstlive-kannada/media/post_attachments/wp-content/uploads/2024/11/Donald-Trump.jpg)
ಅಮೆರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್​ ಟ್ರಂಪ್ 47ನೇ ಯುಎಸ್​ ಪ್ರೆಸಿಡೆಂಟ್ ಆಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಸೋಮವಾರ ಅಂದ್ರೆ ಜನವರಿ 20,2025ರಂದು ಡೊನಾಲ್ಡ್​ ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿ ಎರಡನೇ ಬಾರಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್​ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಡೊನಾಲ್ಡ್​ ಟ್ರಂಪ್ ಪದಗ್ರಹಣ ಕಾರ್ಯಕ್ರಮಕ್ಕೆ ಇಂದಿನಿಂದಲೇ ಭರದ ಸಿದ್ಧತೆ ನಡೆದಿದೆ. ಜನವರಿ 18ರ ರಾತ್ರಿಯಂದು ರಿಸೆಪ್ಷನ್ ಪಾರ್ಟಿಯನ್ನು ಆಯೋಜನೆ ಮಾಡಲಾಗುವುದು. ಇದು ಮಾತ್ರವಲ್ಲ ವರ್ಜಿನಿಯಾದಲ್ಲಿರುವ ಟ್ರಂಪ್​ ನ್ಯಾಷನಲ್ ಗಾಲ್ಫ್​ ಕ್ಲಬ್​​ನಲ್ಲಿ ಸಿಡಿಮದ್ದನ್ನು ಸಿಡಿಸಿ ಸಂಭ್ರಮಿಸಲಾಗುವುದು.
ಇದನ್ನೂ ಓದಿ:ವಿಶ್ವದಲ್ಲೇ ಟಾಪ್ 10 ಅತ್ಯಂತ ಅಸಂತುಷ್ಟ ರಾಷ್ಟ್ರಗಳು ಯಾವುವು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಜನವರಿ 19- ನಾಳೆ ಅಂದ್ರೆ ಜನವರಿ 19ರಂದು ಡೊನಾಲ್ಡ್​ ಟ್ರಂಪ್, ‘ಮೇಕ್ ಅಮೆರಿಕಾ ಗ್ರೇಟ್’ ಱಲಿಯನ್ನ ವಾಶಿಂಗ್ಟನ್​ ಡಿಸಿಯ ಅರೆನಾದಲ್ಲಿ ಹಮ್ಮಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಟಿಕೆಟ್​​ಗಳನ್ನು ಉಚಿತವಾಗಿ ಹಂಚಲಾಗುವುದು. ಮೊದಲು ಬಂದವರಿಗೆ ಮೊದಲ ಟಿಕೆಟ್ ಎಂಬ ಘೋಷವಾಕ್ಯದೊಂದಿಗೆ ಟಿಕೆಟ್​ ನೀಡಲಾಗುವುದು. ರಾತ್ರಿ ಡೊನಾಲ್ಡ್ ಟ್ರಂಪ್ ಭಾಷಣ ಹಾಗೂ ಊಟದೊಂದಿಗೆ ಈ ಕಾರ್ಯಕ್ರಮ ಕೊನೆಗೊಳ್ಳಲಿದೆ.
ಇದನ್ನೂ ಓದಿ: ಟ್ರಂಪ್​ಗೂ ನಡುಕ, ಇಡೀ ಅಮೆರಿಕ ಗಢಗಢ.. ಪ್ರಮಾಣ ವಚನ ಸ್ವೀಕಾರದ ಸ್ಥಳವನ್ನೇ ಬದಲಾಯಿಸಿಬಿಟ್ಟ..!
ಜನವರಿ 20- ಬೆಳಗ್ಗೆ 5 ಗಂಟೆಯಿಂದ ಭದ್ರತಾ ಸಿಬ್ಬಂದಿಯಿಂದ ನ್ಯಾಷನಲ್ ಮಾಲ್​​ನಲ್ಲಿ ತಪಾಸಣೆ ನಡೆಯಲಿದೆ. ಡೊನಾಲ್ಡ್ ಟ್ರಂಪ್ ಹಾಗೂ ಮಲೆನೀಯಾ ಟ್ರಂಪ್​ ಜೋ ಬೈಡನ್ ಹಾಗೂ ಫಸ್ಟ್​ ಲೇಡಿ ಜಿಲ್ ಬೈಡನ್​ ಅವರನ್ನು ವೈಟ್​ಹೌಸ್​ನಲ್ಲಿ ಭೇಟಿಯಾಗಲಿದ್ದಾರೆ. ವೆಸ್ಟ್​ ಲಾವ್ನ್​​ನ ಕ್ಯಾಪಿಟೋಲ್​ನಲ್ಲಿ ಇದೆಲ್ಲವೂ ನೇರಪ್ರಸಾರ ಆಗಲಿದೆ. ಟ್ರಂಪ್ ಮಧ್ಯಾಹ್ನ ಸುಮಾರು 12 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಪೆನ್ಸಿಲ್ವೆನಿಯಾದಲ್ಲಿ ಪ್ರೆಸಿಡೆನ್ಷಯಲ್ ಪರೆಡ್ ನಡೆಯಲಿದೆ
ಇನ್ನು ಟ್ರಂಪ್ ಪದಗ್ರಹಣಕ್ಕೆ ವಿದೇಶಿ ಗಣ್ಯರು ಕೂಡ ಹಾಜರಾಗಲಿದ್ದಾರೆ. ಅರ್ಜೆಂಟೇನಿಯಾದ ಅಧ್ಯಕ್ಷ ಜೇವಿಯರ್ ಮಿಲೈ, ಭಾರತದಿಂದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸೇರಿ ಹಲವು ಗಣ್ಯರು ಈ ಪದಗ್ರಹಣ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us