ಮೊದಲ ಭಾಷಣದಲ್ಲೇ ಟ್ರಂಪ್ ದೊಡ್ಡ ಹೇಳಿಕೆ.. ಆತಂಕಕ್ಕೆ ಬಿದ್ದ ಪಾಕಿಸ್ತಾನ, ನಿದ್ರಾ ಭಂಗ..!

author-image
Ganesh
Updated On
ವಯಸ್ಸು 22, ಭಾರತ ಮೂಲದ ಆಕಾಶ್​​ಗೆ US ದೊಡ್ಡ ಜವಾಬ್ದಾರಿ.. ಈ ಯುವಕನಿಗಾಗಿ ಹಠಕ್ಕೆ ಬಿದ್ದಿದ್ದ ಮಸ್ಕ್..!
Advertisment
  • ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್​ ಟ್ರಂಪ್
  • ಟ್ರಂಪ್ ಅಧಿಕಾರಕ್ಕೆ ಬರ್ತಿದ್ದಂತೆ ಪಾಕ್​ಗೆ ಆತಂಕ
  • ನಿನ್ನೆ ಭಾಷಣದಲ್ಲಿ ಪಾಕ್​ಗೆ ಕೊಟ್ಟ ಎಚ್ಚರಿಕೆ ಏನು?

ಪ್ರಮಾಣ ವಚನ ಸ್ವೀಕಾರ ಸಮಾರಂಭದ ಭಾಷಣದಲ್ಲೇ ಡೊನಾಲ್ಡ್​ ಟ್ರಂಪ್ ಪಾಕಿಸ್ತಾನದ ಬೆವರಿಳಿಸಿದ್ದಾರೆ. ಪಾಕಿಸ್ತಾನಕ್ಕೆ ಬಲವಾದ ಸಂದೇಶ ನೀಡಿರುವ ಟ್ರಂಪ್, ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.

ಮಾದಕ ದ್ರವ್ಯ ಕಳ್ಳಸಾಗಣೆದಾರರಿಗೆ ಅಮೆರಿಕ ಭಯೋತ್ಪಾದಕರ ಸ್ಥಾನಮಾನ ನೀಡಲಿದೆ. ಅಂತಹ ದೇಶಗಳಿಗೆ ಅಮೆರಿಕ ನೀಡುವ ಉಚಿತ ನೆರವು ನೀತಿ ಕೊನೆಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ. ಟ್ರಂಪ್ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಅಮೆರಿಕವು ಪಾಕಿಸ್ತಾನಕ್ಕೆ ನ್ಯಾಟೋ ಅಲ್ಲದ ಮಿತ್ರ ರಾಷ್ಟ್ರದ ಸ್ಥಾನಮಾನ ನೀಡಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಪ್ರತಿ ವರ್ಷ ಬಿಲಿಯನ್ ಡಾಲರ್ ಆರ್ಥಿಕ ನೆರವು ಪಡೆಯುತ್ತಿದೆ. ಈ ವಿಶೇಷ ಸ್ಥಾನಮಾನ ಕೊನೆಗಾಣಿಸಲು ಟ್ರಂಪ್ ಚಿಂತನೆ ನಡೆಸಿರೋದು ಟ್ರಂಪ್ ಹೇಳಿಕೆಯಿಂದ ಗೊತ್ತಾಗಿದೆ.

ಇದನ್ನೂ ಓದಿ: ಪ್ರಮಾಣ ವಚನ ಸ್ವೀಕರಿಸ್ತಿದ್ದಂತೆ ತುರ್ತು ಪರಿಸ್ಥಿತಿ ಘೋಷಣೆ.. ಟ್ರಂಪ್ ಈ ದಿಟ್ಟ ನಿರ್ಧಾರ ಯಾಕೆ..?

ಪಾಕ್​​ಗೆ ಟ್ರಂಪ್ ಸಂದೇಶದ ಅರ್ಥ ಏನು?

NATO ಅಲ್ಲದ ಮಿತ್ರ ರಾಷ್ಟ್ರವಾಗಿ ಪಾಕಿಸ್ತಾನದ ಸ್ಥಾನಮಾನವನ್ನು ಅಮೆರಿಕ ತೆಗೆದುಹಾಕಿದರೆ, ಪಾಕ್ ಆರ್ಥಿಕ ನಷ್ಟ ಅನುಭವಿಸಲಿದೆ. ಅಮೆರಿಕದ ಶತಕೋಟಿ ಡಾಲರ್ ನೆರವು ನಿಲ್ಲಲಿದೆ. ಈಗಾಗಲೇ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಪಾಕ್​ಗೆ ಗಾಯದ ಮೇಲೆ ದೊಡ್ಡ ಬರೆ ಬೀಳಲಿದೆ. ಹೀಗಾಗಿ ಟ್ರಂಪ್ ಹೇಳಿಕೆಯಿಂದ ಪಾಕಿಸ್ತಾನದಲ್ಲಿ ಆತಂಕ ಉಂಟಾಗಿದೆ ಎಂದು ಅರ್ಥೈಸಲಾಗುತ್ತಿದೆ.

ಕಳೆದ ವಾರದ ಆರಂಭದಲ್ಲಿ NATO ಅಲ್ಲದ ಪ್ರಮುಖ ರಾಷ್ಟ್ರವಾಗಿ ಪಾಕಿಸ್ತಾನದ ಸ್ಥಾನಮಾನ ಕೊನೆಗೊಳಿಸಲು US ಸಂಸತ್ತಿನಲ್ಲಿ ಕರಡನ್ನು ಮಂಡಿಸಲಾಗಿದೆ. ಇದಕ್ಕೆ ಕೆಲವು ಸಂಸದರು ಅನುಮೋದಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಆಂಡಿ ಬಿಗ್ಸ್ ಪಾಕಿಸ್ತಾನ ವಿರುದ್ಧದ ಕರಡನ್ನು ಪ್ರಸ್ತುತಪಡಿಸಲಾಗಿದೆ. ಹಕ್ಕಾನಿ ನೆಟ್‌ವರ್ಕ್ (Haqqani network) ವಿರುದ್ಧ ಪಾಕ್ ಕ್ರಮ ಕೈಗೊಂಡರೆ ಅದನ್ನು ಮುಂದುವರಿಸುತ್ತೇವೆ, ಇಲ್ಲದಿದ್ದರೆ ಇಲ್ಲ ಎಂದು ಕರಡಿನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: 83 ಕೋಟಿಗೆ ಡ್ಯೂಪ್ಲೆಕ್ಸ್ ಮನೆ ಮಾರಿದ ಬಿಗ್​​ಬಿಗೆ ಜಾಕ್​ಪಾಟ್​; ಶೇ 168 ರಷ್ಟು ಲಾಭ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment