ಥಾಯ್ಲೆಂಡ್‌-ಕಾಂಬೋಡಿಯಾ ಮಧ್ಯೆ ಯುದ್ಧ.. ಇಲ್ಲಿಯೂ ನಂದೆಲ್ಲಿ ಇಡಲಿ ಅಂದ್ರು ಟ್ರಂಪ್..!

author-image
Ganesh
Updated On
ಥಾಯ್ಲೆಂಡ್‌-ಕಾಂಬೋಡಿಯಾ ಮಧ್ಯೆ ಯುದ್ಧ.. ಇಲ್ಲಿಯೂ ನಂದೆಲ್ಲಿ ಇಡಲಿ ಅಂದ್ರು ಟ್ರಂಪ್..!
Advertisment
  • ದೇಗುಲಕ್ಕಾಗಿ ವಾರ್‌.. 33 ನಾಗರಿಕರು ಪ್ರಾಣ ಕಳ್ಕೊಂಡಿದ್ದಾರೆ
  • ಥಾಯ್ಲೆಂಡ್-ಕಾಂಬೋಡಿಯಾ ವಾರ್‌ಗೆ ಟ್ರಂಪ್ ಮಧ್ಯಪ್ರವೇಶ!
  • ಎರಡೂ ದೇಶಗಳಿಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು..?

ಥಾಯ್ಲೆಂಡ್‌ ಕಾಂಬೋಡಿಯಾ ನಡುವೆ ಸೈರನ್ ಮೊಳಗಿದ್ದು ಸೇನಾ ಸಂಘರ್ಷ ತೀವ್ರಗೊಂಡಿದೆ. ಈ ಸಂಘರ್ಷಕ್ಕೆ 900 ವರ್ಷಗಳ ಪ್ರಾಚೀನ ಹಿಂದೂ ದೇವಾಲಯ ಕಾರಣವಾಗಿದ್ದು, ಎರಡೂ ದೇಶಗಳ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಸಾ*ವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಈ ಯುದ್ಧಕ್ಕೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶವಾಗಿದೆ.

ಏಷ್ಯಾ ಖಂಡದ ಎರಡು ರಾಷ್ಟ್ರಗಳಾದ ಕಾಂಬೋಡಿಯಾ ಹಾಗೂ ಥಾಯ್ಲೆಂಡ್‌ ನಡುವೆ ಗಡಿ ಸಂಘರ್ಷ ಉದ್ವಿಗ್ನಗೊಂಡಿದೆ. ಒಂದು ದೇಗುಲಕ್ಕಾಗಿ ಉಭಯ ದೇಶಗಳ ಮಧ್ಯೆ ಪರಸ್ಪರ ಕಾದಾಟ ನಡೀತಿದೆ.

ಥಾಯ್ಲೆಂಡ್‌-ಕಾಂಬೋಡಿಯಾ ಮಧ್ಯೆ ಗಡಿ ಯುದ್ಧ

ಪೂರ್ವ ಏಷ್ಯಾ ರಾಷ್ಟ್ರಗಳಾದ ಥಾಯ್ಲೆಂಡ್‌ ಹಾಗೂ ಕಾಂಬೋಡಿಯಾ ಗಡಿ ಸಂಘರ್ಷ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ದೇಶಗಳ ನಡುವೆ ಪರಸ್ಪರ ವಾಯುದಾಳಿ ನಡೆಯುತ್ತಿದ್ದು, ಬಾಂಬ್​ಗಳು ಅಬ್ಬರಿಸ್ತಿವೆ.. ಕಾಂಬೋಡಿಯಾದ ರಾಕೆಟ್ ಹಾಗೂ ಶೆಲ್​​ ದಾಳಿಗೆ ಥಾಯ್ಲೆಂಡ್‌​​ನಲ್ಲಿ ಓರ್ವ ಸೈನಿಕ ಸೇರಿದಂತೆ 20 ಮಂದಿ ನಾಗರಿಕರು ಸಾ*ವನ್ನಪ್ಪಿರುವ ವರದಿಯಾಗಿದೆ. 46 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಥಾಯ್ಲೆಂಡ್ ಕೂಡ F-16 ಜೆಟ್​ ಬ್ರಹ್ಮಾಸ್ತ್ರ ಬಳಸಿ ಏರ್​​ಸ್ಟ್ರೈಕ್ ನಡೆಸಿದ್ದು, ಕಾಂಬೋಡಿಯಾದ 13 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ಗಡಿಯಲ್ಲಿ ಗುಂಡಿನ ಚಕಮಕಿ ನಿರಂತರವಾಗಿ ನಡೆಯುತ್ತಿದ್ದು 1 ಲಕ್ಷದ 68 ಸಾವಿರ ಜನರನ್ನ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗುತ್ತಿದೆ.

ಇದನ್ನೂ ಓದಿಕೋಟಿ ಕೋಟಿ ಮೌಲ್ಯದ ಆಸ್ತಿ, 15 ಕಂಪನಿ, ಐಷಾರಾಮಿ ಜೀವನ ಎಲ್ಲ ಬಿಟ್ಟ.. ಶಿವಭಕ್ತನಾದ ಉದ್ಯಮಿ!

ಕಾಂಬೋಡಿಯಾ ಜೊತೆಗೆ ಹಂಚಿಕೊಂಡಿದ್ದ ಈಶಾನ್ಯ ಗಡಿಯನ್ನ ಥಾಯ್ಲೆಂಡ್ ಬಂದ್ ಮಾಡಿದೆ. ಈ ಮಧ್ಯೆ ಗಡಿ ಪ್ರದೇಶ ಪರ್ಸಾಟ್‌ನಲ್ಲಿ ಥಾಯ್ಲೆಂಡ್‌ ಅಪ್ರಚೋದಿತ ದಾಳಿ ಮಾಡಿದೆ ಅಂತ ಕಾಂಬೋಡಿಯಾ ಹೇಳಿಕೊಂಡಿದೆ. ಗಡಿ ಪ್ರದೇಶ ಕೋ ಕಾಂಗ್ ಪ್ರದೇಶ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಎರಡೂ ದೇಶಗಳೂ ಪರಸ್ಪರ ತಮ್ಮ ರಾಯಭಾರ ಅಧಿಕಾರಿಗಳನ್ನ ವಾಪಸ್ ಕರೆಸಿಕೊಂಡಿವೆ.

ಥಾಯ್ಲೆಂಡ್-ಕಾಂಬೋಡಿಯಾ ವಾರ್‌ಗೆ ಟ್ರಂಪ್ ಮಧ್ಯಪ್ರವೇಶ!

ವಿಶ್ವದಲ್ಲಿ ಯಾವುದೇ ಮೂಲೆಯಲ್ಲಿ ಯುದ್ಧ ನಡೆದ್ರೂ ಎಂಟ್ರಿ ಕೊಡುವ ಅಮೆರಿಕಾ ಥಾಯ್ಲೆಂಡ್-ಕಾಂಬೋಡಿಯಾ ವಾರ್‌ನಲ್ಲೂ ಮಧ್ಯಪ್ರವೇಶ ಮಾಡಿದೆ. ಯುದ್ಧವನ್ನ ನಿಲ್ಲಿಸಲಿದಿದ್ರೆ ಎರಡೂ ದೇಶಗಳ ಜೊತೆಗಿನ ವ್ಯಾಪಾರ ಸಂಬಂಧ ಕಡಿದುಕೊಳ್ಳುವುದಾಗಿ ಡೊನಾಲ್ಡ್ ಟ್ರಂಪ್ ಬೆದರಿಕೆ ಸಂದೇಶ ರವಾನಿಸಿದ್ದಾರೆ. ಶಾಂತಿ ಮಾತುಕತೆಗೆ ಒಲವು ತೋರಿದ ಎರಡೂ ದೇಶಗಳ ನಾಯಕರೊಂದಿಗೆ ಟ್ರಂಪ್ ಮಾತುಕತೆ ನಡೆಸಿದ್ದಾರೆ.

ಟ್ರಂಪ್ ‘ವ್ಯಾಪಾರ’ ಬೆದರಿಕೆೆ!

ಥಾಯ್ಲೆಂಡ್ ಮತ್ತು ಕಾಂಬೋಡಿಯಾದೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ಯುದ್ಧ ಭಾರತ-ಪಾಕ್ ಸಂಘರ್ಷವನ್ನು ನೆನಪಿಸುತ್ತದೆ. ಅದನ್ನು ಯಶಸ್ವಿಯಾಗಿ ನಿಲ್ಲಿಸಲಾಯಿತು. ಇಲ್ಲಿಯೂ ಸಹ ಶಾಂತಿಯನ್ನು ಸ್ಥಾಪಿಸಬಹುದಾಗಿದೆ. ಒಂದ್ವೇಳೆ ಯುದ್ಧವನ್ನು ಕೊನೆಗೊಳಿಸಿ ಶಾಂತಿಯನ್ನು ಸ್ಥಾಪಿಸದಿದ್ದರೆ ಅಮೆರಿಕ ಈ ದೇಶಗಳೊಂದಿಗೆ ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ--ಡೊನಾಲ್ಡ್‌ ಟ್ರಂಪ್, ಅಮೆರಿಕ ಅಧ್ಯಕ್ಷ

ಉಭಯ ರಾಷ್ಟ್ರಗಳಲ್ಲಿ ಬೌದ್ಧ ಧರ್ಮೀಯರೇ ಬಹುಸಂಖ್ಯಾತರಾಗಿದ್ದು ಎರಡೂ ರಾಷ್ಟ್ರಗಳಲ್ಲಿ ಪುರಾತನ ಕಾಲದಿಂದಲೂ ಹಿಂದೂ ಧರ್ಮದ ಅಸ್ತಿತ್ವ ಇದ್ದ ಬಗ್ಗೆ ಅನೇಕ ಕುರುಹುಗಳು ಈಗಲೂ ಉಳಿದಿವೆ. ಸದ್ಯ ಹಿಂದೂ ದೇಗುಲಕ್ಕಾಗಿ ನಡೆಯುತ್ತಿರುವ ಕದನ ಟ್ರಂಪ್ ಎಂಟ್ರಿ ಬಳಿಕ ನಿಲ್ಲುತ್ತಾ? ಇಲ್ವಾ? ಕಾದುನೋಡಬೇಕಿದೆ.

ಇದನ್ನೂ ಓದಿ: ಇಂಜಿನಿಯರ್​ಗಳಿಗೆ ಜಾಬ್ ಮಾಡಲು ಯಾವ ದೇಶ ಬೆಸ್ಟ್​.. ಭಾರತ, ದುಬೈ..? ಉತ್ತರ ಯಾವುದು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment