/newsfirstlive-kannada/media/post_attachments/wp-content/uploads/2025/04/china-us.jpg)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಪ್ರತಿಸುಂಕ ನೀತಿಯಿಂದ ವಿಶ್ವದ ಸುಮಾರು 50 ರಾಷ್ಟ್ರಗಳು ತತ್ತರಿಸಿವೆ. ಹಲವು ರಾಷ್ಟ್ರಗಳು ಅಮೆರಿಕದ ಜೊತೆ ಸಂಧಾನಕ್ಕೆ ಮುಂದಾಗಿವೆ. ಇನ್ನೂ ಕೆಲ ರಾಷ್ಟ್ರ ಏನು ಮಾಡೋದು ಅಂತಾ ಗೊತ್ತಾಗದೆ ತಲೆ ಮೇಲೆ ಕೈ ಹೊತ್ತು ಕೂತಿವೆ. ಈ ನಡುವೆ ಡ್ರ್ಯಾಗನ್ಗೆ ಟ್ರಂಪ್ ಬೆಂಕಿಯುಗುಳಿದ್ದು ಚೀನಾ ಕಕ್ಕಾಬಿಕ್ಕಿಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸುಂಕ ನೀತಿಯಿಂದಲೇ ವಿಶ್ವದ ಪಾಲಿಗೆ ಸಿಂಹಸ್ವಪ್ನರಾಗಿದ್ದಾರೆ. ಅದರಲ್ಲೂ ಚೀನಾ ಮತ್ತು ಅಮೆರಿಕಾದ ನಡುವಿನ ಟ್ರೇಡ್ ವಾರ್ ಮುಂದುವರೆದಿದೆ. ಸುಂಕದವರಿಗೆ ಸಿಂಪತಿ ಇರೋದಿಲ್ಲ ಅನ್ನೋ ಮಾತು ಟ್ರಂಪ್ ಟ್ಯಾರಿಫ್ನಲ್ಲಿ ನಿಜವಾಗಿದೆ.. ಅಮೆರಿಕಾದ ಟ್ಯಾರಿಫ್ ನೀತಿಗಳಿಂದ ಚೈನಾ.. ವಿಯೇಟ್ನಂದಂಥಹ ಉತ್ಪಾದನಾ ದೈತ್ಯ ದೇಶಗಳು ಮಾತ್ರವಲ್ಲ ಜಗತ್ತಿನ ಒಂದಷ್ಟು ಸಣ್ಣ ಸಣ್ಣ ದೇಶಗಳು ಕೂಡ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡ್ತಿವೆ.. ಇದರ ನಡುವೆ ಚೀನಾಗೆ ಟ್ರಂಪ್ ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ.
ಚೀನಾಗೆ ಮಾಸ್ಟರ್ ಸ್ಟ್ರೋಕ್..!
ಅಮೆರಿಕದ ಸರಕುಗಳ ಮೇಲೆ ವಿಧಿಸಿರುವ ಪ್ರತೀಕಾರದ 34 ಪ್ರತಿಶತ ಸುಂಕವನ್ನ ಹಿಂಪಡೆಯಲು ಅಮೆರಿಕ ಅಧ್ಯಕ್ಷ ಟ್ರಂಪ್ ಡ್ರ್ಯಾಗನ್ ರಾಷ್ಟ್ರಕ್ಕೆ 24 ಗಂಟೆಗಳ ಕಾಲಾವಕಾಶ ಕೊಟ್ಟಿದ್ದರು. ಪ್ರತೀಕಾರದ ಸುಂಕವವನ್ನ ಹಿಂತೆಗೆದುಕೊಳ್ಳದಿದ್ರೆ.. ಚೀನಾದ ಸರಕುಗಳಿಗೆ 104 ಪ್ರತಿಶತ ಸುಂಕ ವಿಧಿಸಲಾಗುತ್ತೆ ಅನ್ನೋ ಎಚ್ಚರಿಕೆ ಕೊಟ್ಟಿದ್ದರು. ಈ ಎಚ್ಚರಿಕೆಗೆ ಚೀನಾ ಸೈಲೆಂಟ್ ನೀತಿ ಪಾಲಿಸಿದೆ. ಕೊಟ್ಟ ಟೈಂ ಮುಗೀತು ಅಂತಾ ಟ್ರಂಪ್ ಹಿಂದೆಂದೂ ಕೇಳದಷ್ಟು ಸುಂಕ ವಿಧಿಸಿ ಶಾಕ್ ಕೊಟ್ಟಿದ್ದಾರೆ.
ಇದನ್ನೂ ಓದಿ: ನೆಕ್ಸ್ಟ್ ಲೇವೆಲ್ ತಲುಪಿದ ಚೀನಾ-ಅಮೆರಿಕ ಸುಂಕ ಯುದ್ಧ; ‘ಸೇಡು ಬಿಡದಿದ್ರೆ..’ ಟ್ರಂಪ್ ಮತ್ತೊಂದು ಎಚ್ಚರಿಕೆ..!
ಚೀನಾಗೆ ಸುಂಕ ಶಾಕ್!
ಚೀನಾದ ಮೇಲೆ ಶೇಕಡ 50 ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ನೀಡಿದ್ದ ಎಚ್ಚರಿಕೆಯನ್ನ ಅವರು ಚಾಚು ತಪ್ಪದ ಹಾಗೆ ಪಾಲಿಸಿದ್ದಾರೆ. ಚೀನಾದ ಸರಕುಗಳ ಮೇಲೆ 104 ಪ್ರತಿಶತ ಸುಂಕ ವಿಧಿಸಲಾಗಿ ಶ್ವೇತಭವವದಿಂದ ಹೊಸ ಆದೇಶವನ್ನ ಘೋಷಿಸಿದೆ. ಸುಂಕ ಹೆಚ್ಚಿಸಿದ್ರೆ ನಾವು ಸುಮ್ಮನೆ ಕೂರಲ್ಲ ಅಂತಾ ಚೀನಾ ಸವಾಲು ಹಾಕಿದ ಕೆಲವೇ ಗಂಟೆಗಳಲ್ಲಿ ಡೊನಾಲ್ಡ್ ಟ್ರಂಪ್ ಇದನ್ನ ಘೋಷಿಸಿದ್ದಾರೆ.
ಅಮೆರಿಕದ ವಾಣಿಜ್ಯ ನೀತಿ ಒಪ್ಪೋದಿಲ್ಲ ಎಂದ ಚೀನಾ!
ಕಳೆದ ತಿಂಗಳವರೆಗೆ ಅಮೆರಿಕ ಚೀನಾದ ಮೇಲೆ ಶೇಕಡಾ 10 ರಷ್ಟು ಸುಂಕ ವಿಧಿಸುತ್ತಿತ್ತು, ಅದು ಈಗ ಶೇಕಡಾ 34 ರಷ್ಟಾಗಿದೆ. ಇದು, ವಿಶ್ವದ ಎರಡು ಬಲಾಢ್ಯ ರಾಷ್ಟ್ರಗಳ ನಡುವೆ, ಭಾರೀ ವಾಣಿಜ್ಯ ಸಮರಕ್ಕೆ ನಾಂದಿ ಹಾಡಿದೆ. ಅಮೆರಿಕಾದ ಈ ವಾಣಿಜ್ಯ ನೀತಿಯನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇದನ್ನ ನಾವು ಖಂಡಿಸುತ್ತೇವೆ ಅಂದಿರೋ ಚೀನಾ.. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ದವಿದೆ ಅಂತಾನೂ ಹೇಳಿದೆ.
ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಸುಮಾರು ಶೇ. 104 ರಷ್ಟು ಸುಂಕ ಹೆಚ್ಚಳ ಮಾಡಿದ್ದು ದೊಡ್ಡ ಬಂಡೆ ಬಂದು ತಲೆ ಮೇಲೆ ಬಿದ್ದಂತೆಯಾಗಿದೆ. ಅದ್ಹೇನೆ ಇರಲಿ, ಟ್ರಂಪ್ ಸುಂಕ ನೀತಿ ಈಗಾಗಲೇ ಜಾಗತಿಕ ಮಾರುಕಟ್ಟೆಯನ್ನ ಅಲುಗಾಡಿಸಿಬಿಟ್ಟಿದೆ. ಜಾಗತಿಕ ಮಾರುಕಟ್ಟೆ ಇದೇ ರೀತಿ ಅನಿಶ್ಚಿತತೆಯಿಂದ ಮುಂದುವರಿದರೆ ಚೀನಾದಲ್ಲಿ ನೆಲೆ ಊರಿರುವ ಕಂಪೆನಿಗಳು ಬೇರೆ ದೇಶಕ್ಕೆ ಶಿಫ್ಟ್ ಆಗೋದ್ರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: 12 ಸಾವಿರ ವರ್ಷಗಳ ಬಳಿಕ.. ಮನುಷ್ಯನಷ್ಟೇ ಬಲಶಾಲಿ ಪ್ರಾಣಿ ಸೃಷ್ಟಿಸಿದ ವಿಜ್ಞಾನಿಗಳು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ