Watch: ಟ್ರಂಪ್ ಕಿವಿಗೆ ಬಡಿದ ಬುಲೆಟ್; ಮಾಜಿ ಅಧ್ಯಕ್ಷರು ಆ ಕ್ಷಣದಲ್ಲಿ ಮಾಡಿದ್ದೇನು.. ಭಯಾನಕ ದಾಳಿಯ ವಿಡಿಯೋ

author-image
Ganesh
Updated On
Watch: ಟ್ರಂಪ್ ಕಿವಿಗೆ ಬಡಿದ ಬುಲೆಟ್; ಮಾಜಿ ಅಧ್ಯಕ್ಷರು ಆ ಕ್ಷಣದಲ್ಲಿ ಮಾಡಿದ್ದೇನು.. ಭಯಾನಕ ದಾಳಿಯ ವಿಡಿಯೋ
Advertisment
  • ಟ್ರಂಪ್ ಆರೋಗ್ಯ ಹೇಗಿದೆ..? ಅಧಿಕಾರಿಗಳು ನೀಡಿದ ಮಾಹಿತಿ ಏನು?
  • ಹಾಲಿ ಅಧ್ಯಕ್ಷ ಜೋ ಬೈಡನ್ ಟ್ರಂಪ್ ಮೇಲಿನ ದಾಳಿ ಬಗ್ಗೆ ಏನಂದ್ರು..?
  • ಆಘಾತ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಟ್ರಂಪ್ ಆರೋಗ್ಯ ವಿಚಾರಣೆ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಱಲಿಯಲ್ಲಿ ಗುಂಡಿನ ದಾಳಿಯಾಗಿದೆ. ಟ್ರಂಪ್ ಅವರ ಕಿವಿಗೆ ಬುಲೆಟ್​ ತಗುಲಿದ್ದು, ಕೂದಲೆಳೆ ಅಂತರದಲ್ಲಿ ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜುಲೈ 13 ರಂದು ಪೆನ್ಸಿಲ್ವೇನಿಯಾದ ಬಟ್ಲರ್ ನಗರಕ್ಕೆ ಟ್ರಂಪ್ ಭೇಟಿ ನೀಡಿದ್ದರು. ಈ ವೇಳೆ ಭಾಷಣ ಮಾಡುತ್ತಿದ್ದ ಟ್ರಂಪ್ ಮೇಲೆ ಗುಂಡಿನ ದಾಳಿಯಾಗಿದೆ. ಒಂದು ಬುಲೆಟ್​ ಟ್ರಂಪ್ ಅವರ ಕಿವಿಗೆ ತಾಗಿದೆ. ಪರಿಣಾಮ ಟ್ರಂಪ್​ ಕಿವಿಯಿಂದ ಒಂದೇ ಸಮನೆ ರಕ್ತ ಸುರಿದಿದೆ. ಫೈರಿಂಗ್ ಆಗ್ತಿದ್ದಂತೆಯೇ ಟ್ರಂಪ್ ಕೆಳಗೆ ಕೂತು ರಕ್ಷಣೆ ಮಾಡಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಅವರನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:Breaking: ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ಮೇಲೆ ಗುಂಡಿನ ದಾಳಿ

ಟ್ರಂಪ್ ಮೇಲಿನ ಗುಂಡಿನ ದಾಳಿಯ ವಿಡಿಯೋ ಕೂಡ ವೈರಲ್ಆಗಿದೆ. ಕೂಡಲೇ ಕ್ರಮಕ್ಕೆ ಮುಂದಾದ ಅಮೆರಿಕ ರಕ್ಷಣಾ ಸಿಬ್ಬಂದಿ, ಟ್ರಂಪ್ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯನ್ನು ಹೊಡೆದು ಸಾಯಿಸಿದ್ದಾರೆ. ಬಿಲ್ಡಿಂಗ್ ಮೇಲಿಂದ ನಿಂತು ಟ್ರಂಪ್ ಮೇಲೆ ಗುಂಡು ಹಾರಿಸಿದ್ದ ಅನ್ನೋದು ಗೊತ್ತಾಗಿದೆ. ಈ ಗಲಾಟೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರತ್ಯಕ್ಷದರ್ಶಿ ಹೇಳಿದ್ದೇನು..?
ಟ್ರಂಪ್ ಭಾಷಣ ಮಾಡುತ್ತಿದ್ದರು. ಏಕಾಏಕಿ ಫೈರಿಂಗ್ ಸದ್ದು ಕೇಳಿದೆ. ನೋಡಿದಾಗ ಟ್ರಂಪ್ ಅವರ ಕಿವಿಯಿಂದ ರಕ್ತ ಸೋರುತ್ತಿತ್ತು. ಕೂಡಲೇ ಟ್ರಂಪ್ ಅವರನ್ನು ರಕ್ಷಣೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟ್ರಂಪ್ ಆರೋಗ್ಯವನ್ನು ಅವರ ಮಗ ನೋಡಿಕೊಳ್ತಿದ್ದಾರೆ. ಟ್ರಂಪ್​ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದ್ದಾರೆ.

ಚುನಾವಣಾ ಱಲಿಯಲ್ಲಿ ಆಗಿದ್ದೇನು?
ಡೊನಾಲ್ಡ್ ಟ್ರಂಪ್, ರಿಪಬ್ಲಿಕನ್ ಪಕ್ಷದಿಂದ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ. ಅಂತೆಯೇ ಪೆನ್ಸಿಲ್ವೇನಿಯಾದ ಬಟ್ಲರ್ ನಗರಕ್ಕೆ ಚುನಾವಣಾ ಪ್ರಚಾರ ಮಾಡಲು ಟ್ರಂಪ್ ಬಂದಿದ್ದರು. ಸ್ಥಳೀಯ ಸಮಯದ ಪ್ರಕಾರ ಸಂಜೆ 6 ಗಂಟೆಯಾಗಿತ್ತು. ಟ್ರಂಪ್ ತಮ್ಮ ಭಾಷಣವನ್ನು ಪ್ರಾರಂಭಿಸಿದ್ದರು. ಆಗ ಗುಂಡಿನ ಸದ್ದು ಕೇಳಿದೆ. ಎಲ್ಲಿ ಏನಾಗ್ತಿದೆ ಎಂದು ನೋಡುವಷ್ಟರಲ್ಲಿ ಟ್ರಂಪ್ ಕಿವಿಯಿಂದ ರಕ್ತ ಹರಿದಿದೆ. ಟ್ರಂಪ್ ನೆಲಕ್ಕೆ ಕೂತು ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದಿದ್ದಾರೆ. ಕೂಡಲೇ ಅವರನ್ನು ರಕ್ಷಣೆ ಮಾಡಿ ಕಾರಿನಲ್ಲಿ ಕೂರಿಸಲಾಗಿದೆ. ಮಾಜಿ ಅಧ್ಯಕ್ಷರು ಸುರಕ್ಷಿತರಾಗಿದ್ದಾರೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

publive-image

ಅಮೆರಿಕದಲ್ಲಿ ಹಿಂಸೆಗೆ ಜಾಗವಿಲ್ಲ-ಬೈಡನ್
ಟ್ರಂಪ್ ಮೇಲಿನ ದಾಳಿಯನ್ನು ಹಾಲಿ ಅಧ್ಯಕ್ಷ ಜೋ ಬೈಡನ್ ಖಂಡಿಸಿದ್ದಾರೆ. ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಅವಕಾಶ ಇಲ್ಲ. ಇದು ಆತಂಕಕಾರಿ ಘಟನೆ. ದೇಶವು ಒಗ್ಗೂಡಬೇಕಾದ ಕೆಲವು ಕಾರಣಗಳಲ್ಲಿ ಇದು ಒಂದು. ಈ ರೀತಿ ಆಗಲು ನಾವು ಬಿಡಲ್ಲ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಮಾಜಿ ಅಧ್ಯಕ್ಷರು ವೈದ್ಯರ ಜೊತೆಗಿದ್ದು, ಆರೋಗ್ಯವಾಗಿದ್ದಾರೆ ಎಂದು ಬೈಡನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಟ್ರಂಪ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment