/newsfirstlive-kannada/media/post_attachments/wp-content/uploads/2024/11/Donald-Trump-US-Election-2024.jpg)
ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ಆಯೋಜನೆಗೊಂಡಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಸೌದಿ ಅರೇಬಿಯಾಗೆ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ನಿಲ್ಲಿಸುವ ಶಕ್ತಿ ಇದೆ ಎಂದು ಹೇಳುವ ಮೂಲಕ ವಿಶ್ವವೇ ಆಶ್ಚರ್ಯಕ್ಕೆ ಬೀಳುವಂತೆ ಮಾಡಿದ್ದಾರೆ.
ದಾವೋಸ್ನಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ ನಾನು ಸೌದಿಅರೇಬಿಯಾ ಹಾಗೂ ಒಪೆಕ್ ರಾಷ್ಟ್ರಗಳಿಗೆ ಕಚ್ಚಾ ತೈಲದ ದರವನ್ನು ಇಳಿಸುವಂತೆ ಮನವಿ ಮಾಡುತ್ತೇನೆ. ಇದನ್ನು ಆದಷ್ಟು ಬೇಗ ಮಾಡಬೇಕು. ನೀವು ಯುಎಸ್ ಎಲೆಕ್ಷನ್ಗೂ ಮುನ್ನ ಕಚ್ಚಾ ತೈಲ ದರದಲ್ಲಿ ಇಳಿಕೆ ಮಾಡದಿರುವುದು ನನಗೆ ನಿಜಕ್ಕೂ ಆಶ್ಚರ್ಯವಾಗಿದೆ. ಒಂದು ವೇಳೆ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದೇ ಆದಲ್ಲಿ ಇಸ್ರೇಲ್ ಹಾಗೂ ರಷ್ಯಾದ ನಡುವಿನ ಯುದ್ಧವೂ ಕೂಡ ಕೊನೆಗೊಳ್ಳಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸುಮ್ನೆ ಈ ಕುರ್ಚಿಯಲ್ಲಿ ಕೂತ್ರೆ ಸಾಕು ಯಮನ ಪಾದ.. 300 ವರ್ಷದ ಚರಿತ್ರೆ ಹೇಳುತ್ತಿದೆ ಈ ಸಿಂಹಾಸನ!
ಕಚ್ಚಾ ತೈಲ ದರದ ಆಚೆ ರಿಪಬ್ಲಿಕನ್ ಲೀಡರ್ ಬಡ್ಡಿದರದ ಬೆಲೆಯಲ್ಲೂ ಕೂಡ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಒಪೆಕ್ ರಾಷ್ಟ್ರಗಳು ಏರಿಸಿದ ಬಡ್ಡಿದರವೇ ಇಂದು ಉಕ್ರೇನ್ನಲ್ಲಿ ನಡೆಯುತ್ತಿರುವ ಅನಾಹುತಕ್ಕೆ ಕಾರಣ ಎಂದು ಕೂಡ ಹೇಳಿದ್ದಾರೆ. ಕಚ್ಚಾ ತೈಲ ದರ ಏರಿಕೆಯಾದಷ್ಟು ಉಭಯ ರಾಷ್ಟ್ರಗಳ ನಡುವಿನ ಯುದ್ಧದ ತೀವ್ರತೆ ಹೆಚ್ಚುತ್ತದೆ ಹೀಗಾಗಿ ನೀವು ಕೂಡಲೇ ಕಚ್ಚಾ ತೈಲದ ದರ ಇಳಿಕೆ ಮಾಡಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ