/newsfirstlive-kannada/media/post_attachments/wp-content/uploads/2025/02/MODI-TRUMP.jpg)
US ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) 14 ದೇಶಗಳ ಮೇಲೆ ಹೊಸ ವ್ಯಾಪಾರ ತೆರಿಗೆಗಳನ್ನು (ಸುಂಕಗಳು) ಘೋಷಿಸಿದ್ದಾರೆ. ಮಯನ್ಮಾರ್ ಮತ್ತು ಲಾವೋಸ್ ಮೇಲೆ ಅತ್ಯಧಿಕ ಶೇಕಡಾ 40 ರಷ್ಟು ಸುಂಕವನ್ನು ವಿಧಿಸಿದ್ದಾರೆ. ಈ ಹೊಸ ನಿಯಮಗಳು ಆಗಸ್ಟ್ 1 ರಿಂದ ಜಾರಿಗೆ ಬರಲಿವೆ.
ಟ್ರಂಪ್ ತಮ್ಮ ಸೋಶಿಯಲ್ ಮೀಡಿಯಾ ವೇದಿಕೆ ಟ್ರೂತ್ ಸೋಶಿಯಲ್ (Truth Social) ಹೊಸ ಸುಂಕ ನೀತಿ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ನಿರ್ಧಾರಕ್ಕೆ ಸಂಬಂಧಿಸಿದ ಎಲ್ಲಾ ಅಧಿಕೃತ ಪತ್ರಗಳನ್ನು ಆಯಾ ದೇಶಗಳ ನಾಯಕರಿಗೆ ಕಳುಹಿಸಲಾಗಿದೆ ಎಂದಿದ್ದಾರೆ. ಟ್ರಂಪ್ ಇದನ್ನು‘ಸುಂಕ ಪತ್ರಗಳ ಹೊಸ ಅಲೆ’ ಎಂದು ಕರೆದಿದ್ದಾರೆ.
14 ದೇಶಗಳಿಗೆ ಎಚ್ಚರಿಕೆ
ಸುಂಕ ಹೆಚ್ಚಿಸಿರುವ ಟ್ರಂಪ್ 14 ದೇಶಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಮೆರಿಕ ಮೇಲೆ ಪ್ರತೀಕಾರವಾಗಿ ಸುಂಕವನ್ನು ಹೆಚ್ಚಿಸಿದರೆ, ನಾವು ಇನ್ನಷ್ಟು ಹೆಚ್ಚು ಮಾಡುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ. ‘ನೀವು ಸುಂಕವನ್ನು ಹೆಚ್ಚಿಸಿದರೆ, ನೀವು ಹೆಚ್ಚಿಸಿದ ಶೇಕಡಾವಾರು ಶುಂಕದ ಮೇಲೆ ಮೇಲೆ ನಾವು ಅದೇ ಪ್ರಮಾಣದ ತೆರಿಗೆಯನ್ನು ವಿಧಿಸುತ್ತೇವೆ ಎಂದು ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ.
ಯಾವ ದೇಶಗಳಿಗೆ ಎಷ್ಟು ತೆರಿಗೆ?
1. ಮ್ಯಾಯನ್ಮಾರ್ - 40%
2. ಲಾವೋ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ (ಲಾವೋಸ್) - 40%
3. ಕಾಂಬೋಡಿಯಾ - 36%
4. ಥೈಲ್ಯಾಂಡ್ - 36%
5. ಬಾಂಗ್ಲಾದೇಶ - 35%
6. ಸೆರ್ಬಿಯಾ - 35%
7. ಇಂಡೋನೇಷ್ಯಾ - 32%
8. ದಕ್ಷಿಣ ಆಫ್ರಿಕಾ - 30%
9. ಬೋಸ್ನಿಯಾ ಮತ್ತು ಹರ್ಜೆಗೋವಿನಾ - 30%
10. ಜಪಾನ್ - 25%
11. ಕಝಕಿಸ್ತಾನ್ - 25%
12. ಮಲೇಷ್ಯಾ - 25%
13. ದಕ್ಷಿಣ ಕೊರಿಯಾ - 25%
14. ಟುನೀಶಿಯಾ - 25%
ಭಾರತ ವಿರುದ್ಧ ಘೋಷಣೆ ಇಲ್ಲ..!
ಈ ಬಾರಿ ಟ್ರಂಪ್ ಭಾರತದ ವಿರುದ್ಧ ತೆರಿಗೆ ಘೋಷಣೆ ಮಾಡಿಲ್ಲ. ಭಾರತದ ಜೊತೆಗಿನ ವ್ಯಾಪಾರ ಒಪ್ಪಂದದ ಗಡುವು ಆಗಸ್ಟ್ 1 ರ ವರೆಗೆ ವಿಸ್ತರಣೆಯಾಗಿದೆ. ಆದಷ್ಟು ಬೇಗ ಭಾರತದ ತೆರಿಗೆ ಪ್ರಮಾಣ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಇನ್ಮುಂದೆ ಸೊಳ್ಳೆಗಳ ಕಾಟ ಇರಲ್ಲ! ಆಂಧ್ರದಲ್ಲಿ ಸೊಳ್ಳೆಗಳ ಮೇಳೆ ನಿಗಾ ಇಡಲು AI ಬಳಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ