/newsfirstlive-kannada/media/post_attachments/wp-content/uploads/2025/05/Trump-India-Apple-ceo.jpg)
ಭಾರತದಲ್ಲಿ ಆ್ಯಪಲ್ ಮೊಬೈಲ್ ಫೋನ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಆ್ಯಪಲ್ ಉತ್ಪನ್ನಗಳನ್ನು ಖರೀದಿಸುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಮುಂಬೈ ಆ್ಯಪಲ್ ಸ್ಟೋರ್ ಮುಂದೆ ಐ-ಫೋನ್ 16 ಖರೀದಿಸಲು ಐ-ಫೋನ್ ಪ್ರಿಯರು ಸಾಲುಗಟ್ಟಿ ನಿಂತಿದ್ದರು. ಬೇಡಿಕೆ ಹೆಚ್ಚಾದಂತೆ ಆ್ಯಪಲ್ ಕಂಪನಿ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಆ್ಯಪಲ್ ತಯಾರಿಕೆಯ ಘಟಕಗಳನ್ನು ತೆರೆಯಲು ಮುಂದಾಗಿದೆ.
ಭಾರತದಲ್ಲಿ ಆ್ಯಪಲ್ ಘಟಕಗಳು ಆರಂಭವಾಗುವ ಹೊತ್ತಿನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡ್ಡಗಾಲು ಹಾಕಿದ್ದಾರೆ. ಆ್ಯಪಲ್ ಸಿಇಒ ಟಿಮ್ ಕುಕ್ ಅವರಿಗೆ ಟ್ರಂಪ್ ತಾಕೀತು ಮಾಡಿದ್ದು, ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಬೇಡಿ. ಭಾರತದಲ್ಲಿ ಆ್ಯಪಲ್ ಕಂಪನಿಯ ವಿಸ್ತರಣೆ ಆಗುವುದು ಬೇಡ ಎಂದು ಹೇಳಿದ್ದಾರೆ.
ಆ್ಯಪಲ್ ಸಿಇಒ ಟಿಮ್ ಕುಕ್ ಅವರ ಜೊತೆ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಮಹತ್ವದ ಚರ್ಚೆ ನಡೆಸಿದ್ದಾರೆ. ಟಿಮ್ ಕುಕ್ ನನ್ನ ಒಳ್ಳೆಯ ಸ್ನೇಹಿತ. ನಿಮ್ಮ ಆ್ಯಪಲ್ ಕಂಪನಿ ಈಗ 500 ಬಿಲಿಯನ್ ಡಾಲರ್‌ವರೆಗೂ ಬೆಳೆದಿದೆ. ಆದರೆ ಆ್ಯಪಲ್ ಕಂಪನಿ ಭಾರತ ದೇಶದಾದ್ಯಂತ ವಿಸ್ತರಣೆ ಆಗುವುದು ಬೇಡ. ಭಾರತದಲ್ಲಿ ನಿಮ್ಮ ಕಂಪನಿ ಬಂಡವಾಳ ಹೂಡುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ.
ಭಾರತ-ಅಮೆರಿಕಾದ ಮಧ್ಯೆ ಸುಂಕ ಸಮರ ಇನ್ನೂ ಮುಂದುವರಿದಿದೆ. ಅಮೆರಿಕಾದ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತವೂ ಕೂಡ ಒಂದು. ಇತ್ತೀಚೆಗೆ ಉಕ್ಕು ಮತ್ತು ಅಲ್ಯೂಮಿನಿಯಂ ರಫ್ತಿನ ಮೇಲೆ ಹೆಚ್ಚು ತೆರಿಗೆ ವಿಧಿಸಲು ಮುಂದಾಗಿದೆ. ಹೀಗಾಗಿ ಸುಂಕ ಸಮರದಲ್ಲಿ ಜಿದ್ದಿಗೆ ಬಿದ್ದಿರುವ ಭಾರತ ಆ್ಯಪಲ್ ಕಂಪನಿಗೆ ಭಾರತಕ್ಕೆ ಹೋಗಬೇಡಿ. ಅಮೆರಿಕಾದಲ್ಲಿ ಅತಿ ಹೆಚ್ಚು ಉತ್ಪಾದನೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಭಾರತ ತನ್ನ ಮಿತ್ರ ರಾಷ್ಟ್ರ ಎನ್ನುವ ಅಮೆರಿಕಾ ಇದೀಗ ತನ್ನ ಡಬಲ್ ಗೇಮ್ ನೀತಿಯನ್ನ ಮತ್ತೆ ಜಾರಿಗೆ ತರುತ್ತಿದೆ.
ಇದನ್ನೂ ಓದಿ: 20 ಸಾವಿರ ರೂಪಾಯಿ ಒಳಗೆ ಅತ್ಯುತ್ತಮ Smartphones.. ಮಾರುಕಟ್ಟೆಯಲ್ಲಿ 5 ಬೆಸ್ಟ್ ಫೋನ್..!
ಭಾರತದಲ್ಲಿ ಈಗಾಗಲೇ ಆ್ಯಪಲ್ ಕಂಪನಿ ವಿವಿಧ ಸ್ಟೋರ್ಸ್ ಹಾಗೂ ಉತ್ಪಾದನಾ ಘಟಕಗಳನ್ನು ತೆರೆಯಲು ಮುಂದಾಗಿದೆ. ಆ್ಯಪಲ್ ಸಿಇಒ ಟಿಮ್ ಕುಕ್ ಕೂಡ ಭಾರತದ ಆ್ಯಪಲ್ ಕಂಪನಿ ಡಿಮ್ಯಾಂಡ್‌ನ ಲಾಭ ಪಡೆದುಕೊಳ್ಳಲು ಯೋಜನೆ ಹಾಕಿದ್ದರು. ಡೊನಾಲ್ಡ್ ಟ್ರಂಪ್ ಅವರ ಈ ಮಾತಿಗೆ ಮಣೆ ಹಾಕದ ಆ್ಯಪಲ್, ಭಾರತದಲ್ಲಿನ ತನ್ನ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುತ್ತೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ